
ಚಾಂಗ್ಒನ್, ಸೆಪ್ಟೆಂಬರ್ 8: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಂಕುರ್ ಮಿತ್ತಲ್ ಅವರು ಪುರುಷರ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅಂಕುರ್ ಗೆ ಚಿನ್ನ ಒಲಿಯಿತು. ವರ್ಲ್ಡ್ ಕಪ್ ಚಾಂಪಿಯನ್ ಶಿಪ್ ನಲ್ಲಿ ಅನೇಕ ಪದಕಗಳನ್ನು ಗೆದ್ದಿರುವ ಅಂಕುರ್ ಒಟ್ಟು 150 ಅವಕಾಶಗಳಲ್ಲಿ 140 ಹೊಡೆತಗಳನ್ನು ಯಶಸ್ವಿಯಾಗಿ ಪೂರೈಸಿದರು.
ಈ ವಿಭಾಗದಲ್ಲಿ ಬೆಳ್ಳಿ ಪದಕ ಚೀನಾದ ಯಿಯಾಂಗ್ ಯಾಂಗ್ ಅವರ ಪಾಲಾಯಿತು. ಸ್ಲೋವಾಕಿಯಾದ ಹಬರ್ಟ್ ಆಂಡ್ರೆಝ್ ಅವರು ಕಂಚು ತನ್ನದಾಗಿಸಿಕೊಂಡರು. ಅಂಕುರ್, ಮೊಹಮ್ಮದ್ ಅಸಾಬ್, ಶಾರ್ದುಲ್ ವಿಹಾನ್ ಅವರನ್ನೊಳಗೊಂಡ ಪುರುಷರ ತಂಡಕ್ಕೆ ತಂಡ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ.