ಒಲಿಂಪಿಕ್ಸ್ ಹತ್ತಿರದಲ್ಲಿರುವಾಗಲೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಕೇವಲ ಎರಡು ವಾರಗಳು ಬಾಕಿಯಿರುವಾಗಲೇ ಜಪಾನ್‌ನ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಗುರುವಾರ (ಜುಲೈ 8) ಜಪಾನ್‌ನ ಟೋಕಿಯೋದಲ್ಲಿ ಅಲ್ಲಿನ ಪಿಎಂ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಟೋಕಿಯೋದಲ್ಲಿ ನಿಷೇಧ ಹೇರಲಾಗಿದೆ. ಟೋಕಿಯೋ ಒಲಿಂಪಿಕ್ಸ್ ನಡೆಯುವಾಗ ಕನಿಷ್ಠ ಜಪಾನ್‌ನ ಕ್ರೀಡಾ ಅಭಿಮಾನಿಗಳಿಗಾದರೂ ಸ್ಟೇಡಿಯಂಗೆ ಪ್ರವೇಶ ನೀಡಲಾಗುತ್ತದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಬಹುತೇಕ ಎಲ್ಲಾ ಸ್ಪರ್ಧೆಗಳಿಗೂ ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸುವ ಸಾಧ್ಯತೆಯಿದೆ.
'ಟೋಕಿಯೋವನ್ನು ನಾವು ತುರ್ತು ಪರಿಸ್ಥಿತಿಯ ರಾಜ್ಯವಾಗಿ ಘೋಷಿಸಿದ್ದೇವೆ. ಈ ತುರ್ತು ಪರಿಸ್ಥಿತಿಯ ಅವಧಿ ಆಗಸ್ಟ್ 22ರ ವರೆಗೆ ಇರಲಿದೆ," ಎಂದು ಜಪಾನ್ ಪ್ರಧಾನ ಮಂತ್ರಿ ಯೋಶಿಹಿಡೆ ಸುಗಾ ಅವರು ಸೋಂಕಿನ ಕ್ರಮಗಳ ಬಗೆಗಿನ ಸಭೆಯಲ್ಲಿ ತಿಳಿಸಿದ್ದಾರೆ.
ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ನಡೆಯಲಿದೆ. ತುರ್ತು ಪರಿಸ್ಥಿತಿ ಘೋಷಣೆಯಾಗಿರುವ ಕಾರಣ ಒಲಿಂಪಿಕ್ಸ್ ಆರಂಭದಿಂದ ಅಂತ್ಯದ ವರೆಗೂ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶ ನಿಷಿದ್ಧವಿರುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications