For Quick Alerts
ALLOW NOTIFICATIONS  
For Daily Alerts

LINK:ಜುಲೈ 27: ಭಾರತದಲ್ಲಿ ನಡೆಯಲಿದೆಯಾ ಒಲಿಂಪಿಕ್ಸ್?; ಯೂಸುಫ್ ಪಠಾಣ್ ಅಬ್ಬರ: ಕ್ರೀಡಾ ಲೋಕದ ಇಂದಿನ ಸುದ್ದಿ

* ಭಾರತ ದೇಶವು ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು. ಒಲಿಂಪಿಕ್ಸ್‌ನಂತಹ ಗುಣಮಟ್ಟದ ಪಂದ್ಯಾವಳಿಗಳನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸುವುದರಿಂದ ಭಾರತವು ಮುಂದಿನ ದಿನಗಳಲ್ಲಿ ಕ್ರೀಡಾ ಸೂಪರ್ ಪವರ್ ಆಗಲು ಸಹಾಯ ಮಾಡಲಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದರು.

* ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಅನಾಯಾಸ ಗೆಲುವು ದಾಖಲಿಸಿತು. ಇನ್ನು ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿದ್ದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಕಿಡಿಕಾರಿದರು.

July 28 what happened in sports World: Todays Top sports news and headlines

* ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಪಪುವಾ ನ್ಯೂಗಿನಿಯಾ ಅರ್ಹತೆ ಪಡೆದ ಮತ್ತೊಂದು ಹೊಸ ತಂಡವಾಗಿದೆ. ಪಪುವಾ ನ್ಯೂಗಿನಿಯಾ 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಅರ್ಹತೆ ಪಡೆದ 15ನೇ ತಂಡವಾಗಿದೆ ಮತ್ತು ಪೂರ್ವ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್‌ನ ಏಕೈಕ ತಂಡವಾಗಿದೆ.

*ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ಬಾಕ್ಸರ್‌ಗಳ ಪಟ್ಟಿ ಇಲ್ಲಿದೆ.
1. ನಿಖತ್ ಜರೀನ್ - ಮಹಿಳೆಯರ 51 ಕೆ.ಜಿ
2. ಪ್ರೀತಿ ಪವಾರ್ - ಮಹಿಳೆಯರ 54 ಕೆ.ಜಿ
3. ಪರ್ವೀನ್ ಹೂಡಾ - ಮಹಿಳೆಯರ 57 ಕೆ.ಜಿ
4. ಜೈಸ್ಮಿನ್ ಲಂಬೋರಿಯಾ - ಮಹಿಳೆಯರ 60 ಕೆ.ಜಿ
5. ಅರುಂಧತಿ ಚೌಧರಿ - ಮಹಿಳೆಯರ 66 ಕೆ.ಜಿ
6. ಲೊವ್ಲಿನಾ ಬೊರ್ಗೊಹೈನ್ - ಮಹಿಳೆಯರ 75 ಕೆ.ಜಿ
7. ದೀಪಕ್ ಭೋರಿಯಾ - ಪುರುಷರ 51 ಕೆ.ಜಿ
8. ಸಚಿನ್ ಸಿವಾಚ್ - ಪುರುಷರ 57 ಕೆ.ಜಿ
9. ಶಿವ ಥಾಪಾ - ಪುರುಷರ 63.5 ಕೆ.ಜಿ
10. ನಿಶಾಂತ್ ದೇವ್ - ಪುರುಷರ 71 ಕೆ.ಜಿ
11. ಲಕ್ಷ್ಯ ಚಹಾರ್ - ಪುರುಷರ 80 ಕೆ.ಜಿ
12. ಸಂಜೀತ್ - ಪುರುಷರ 92 ಕೆ.ಜಿ
13. ನರೇಂದರ್ ಬರ್ವಾಲ್ - ಪುರುಷರ +92 ಕೆ.ಜಿ

* ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಆಯೋಜಿಸುವ ಜಿಮ್-ಆಫ್ರೋ ಟಿ10 ಲೀಗ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಭಾಗಿಯಾಗಿದ್ದಾರೆ. ಈ ಟೂರ್ನಿಯ ಕ್ವಾಲಿಫಯರ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನಲ್ಲಿ ಇನ್ನು ಕೂಡ ಬ್ಯಾಟಿಂಗ್ ಸಾಮರ್ಥ್ಯ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಪಠಾಣ್. ಡರ್ಬನ್ ಕಲಂದರ್ ಹಾಗೂ ಜೋಬರ್ಗ್ ಬಫೆಲೋಸ್ ನಡುವಿನ ಪಂದ್ಯದಲ್ಲಿ ಈ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಯೂಸುಫ್ ಪಠಾಣ್ ಕೇವಲ 26 ಎಸೆತಗಳನ್ನು ಎದುರಿಸಿದ್ದು ಭರ್ಜರಿ 80 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 9 ಅಮೋಘ ಸಿಕ್ಸರ್‌ಗಳು ಸೇರಿದೆ. ಯೂಸುಫ್ ಪಠಾಣ್ ಅವರ ಈ ಅಮೋಘ ಪ್ರದರ್ಶನದಿಂದಾಗಿ ಅವರು ಪ್ರತಿನಿಧಿಸುತ್ತಿರುವ ಜೊಬರ್ಗ್ ಬಫಲೋಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

* ಆಶಸ್ ಸರಣಿಯ ಕೊನೆಯ ಪಂದ್ಯ ಕೂಡ ತೀವ್ರ ಪೈಪೋಟಿಯಿಂದ ಸಾಗುತ್ತಿದೆ. ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಅದ್ಭುತವಾಗಿ ತಿರುಗಿಬಿದ್ದಿದ್ದಾರೆ. ಹೀಗಾಗಿ ಉತ್ತಮ ಬ್ಯಾಟಿಂಗ್ ನಡೆಸಿ ದೊಡ್ಡ ಮುನ್ನಡೆ ಪಡೆಯಬೇಕೆಂಬ ಲೆಕ್ಕಾಚಾರದಲ್ಲಿದ್ದ ಆಸ್ಟ್ರೇಲಿಯಾಗೆ ಭಾರೀ ಆಘಾತವುಂಟಾಗಿದೆ. ಇಂಗ್ಲೆಂಡ್ ಗಳಿಸಿದ 283 ರನ್‌ಗಳಿಗೆ ಪ್ರತಿಯಾಗಿ ಆಸ್ಟ್ರೇಲಿಯಾ 295 ರನ್‌ ಮಾತ್ರವೇ ಗಳಿಸಲು ಸಾಧ್ಯವಾಗಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 12 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ.

Story first published: Friday, July 28, 2023, 23:59 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+