For Quick Alerts
ALLOW NOTIFICATIONS  
For Daily Alerts

ಜುಲೈ 30: ಸ್ಟುವರ್ಟ್ ಬ್ರಾಡ್ ನಿವೃತ್ತಿ; ಟೀಮ್ ಇಂಡಿಯಾಗೆ ಸೋಲು: ಕ್ರೀಡಾ ಲೋಕದ ಇಂದಿನ ಸುದ್ದಿ

* ವಿಶ್ವಕಪ್ ಟೂರ್ನಿ ಸನಿಹದಲ್ಲಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅರ್ಥವಿಲ್ಲದ ಪ್ರಯೋಗ ಮುಂದುವರಿದಿದೆ. ಈ ಹಂತದಲ್ಲಿ ಇದಕ್ಕೆ ಸರಿಯಾದ ಬೆಲೆಯನ್ನೇ ಭಾರತ ತೆರುವಂತಾಗಿದ್ದು ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಭಾರತ ಭಾರೀ ಅಂತರದಿಂದ ಕಳೆದುಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಸಂಪೂರ್ಣ ವೈಫಲ್ಯ ಕಂಡ ಭಾರತ 6 ವಿಕೆಟ್‌ಗಳ ಅಂತರದ ಸೋಲು ಕಂಡಿದೆ.

* ತಂಡದ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನಿಡುವ ನಿರ್ಧಾರದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿ ಅನುಭವಿ ಆಟಗಾರರಿಬ್ಬರು ಯಾವ ಕಾರಣದಿಂದಾಗಿ ಆಡುವ ಬಳಗದಿಂದ ಹೊರಗುಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿನ ಆಯ್ಕೆಯ ಹಿಂದಿನ ಲೆಕ್ಕಾಚಾರಗಳನ್ನು ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ ಹಾಘೂ ವಿಶ್ವಕಪ್ ಟೂರ್ನಿಬಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಾ ಆಟಗಾರರ ಸಾಮರ್ಥ್ಯವನ್ನು ಕಂಡುಕೊಳ್ಳಲು ಇದು ಅನಿವಾರ್ಯವಾಗಿತ್ತು ಎಂದಿದ್ದಾರೆ.

July 30 what happened in sports World: Todays Top sports news and headlines

* ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಶಸ್ ಟೆಸ್ಟ್ ಸರಣಿಯ ಮೂರನೇ ದಿನದಾಟದ ಬಳಿಕ ಸ್ಟುವರ್ಟ್ ಬ್ರಾಡ್ ಈ ಬಗ್ಗೆ ನಿರ್ಧಾರವನ್ನು ಬಹಿರಂಗಪಡಿಸಿದ್ದು ಪ್ರಸ್ತುತ ನಡೆಯುತ್ತಿರುವ ಓವಲ್ ಟೆಸ್ಟ್ ಪಂದ್ಯವೇ ತನ್ನ ಅಂತಿಮ ಟೆಸ್ಟ್ ಎಂದು ಘೋಷಣೆ ಮಾಡಿದ್ದಾರೆ.

* ಸ್ಟುವರ್ಟ್ ಬ್ರಾಡ್ ತಮ್ಮ ನಿವೃತ್ತಿಯ ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರ ಆ ಆರು ಸಿಕ್ಸರ್‌ಗಳ ಕ್ಷಣವನ್ನು ನೆನಪಿಸಿಕೊಂಡಿದ್ದು ಆ ಘಟನೆ ತನ್ನನ್ನು ಸ್ಪರ್ಧಾತ್ಮಕವಾಗಿ ಮತ್ತಷ್ಟು ಗಟ್ಟಿಗೊಳಿಸಿತು ಎಂದಿದ್ದಾರೆ."ಖಂಡಿತವಾಗಿಯೂ ಅದೊಂದು ಬಹಳ ಕಠಿಣವಾದ ದಿನ. 21-22ರ ಹರೆಯದಲ್ಲಿ ಹೇಗಾಗಿರಲು ಸಾಧ್ಯ? ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಆ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹಳ ಕಡಿಮೆ ಅನುಭವವಿದ್ದ ಕಾರಣ ಆ ಅನುಭವದ ಮೇಲೆಯೇ ನನ್ನ ದಿನಚರಿಯನ್ನು ಆರಮಭಿಸುತ್ತಿದ್ದೆ. ನಾನು ನನ್ನ ಸಿದ್ಧತೆಗೆ ಕಾತರಿಸುತ್ತಿದ್ದೆ. ಆ ಅನುಭವದಿಂದಾಗಿ ನಾನು ಹೋರಾಟದ ಮನೋಭಾವವನ್ನು ರೂಢಿಸಿಕೊಂಡೆ" ಎಂದು ಯುವರಾಜ್ ಸಿಂಗ್ ಅವರು 6 ಎಸೆತಗಳಿಗೆ 6 ಸಿಕ್ಸರ್ ಬಾರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಬ್ರಾಡ್.

* ಇಂಗ್ಲೆಂಡ್‌ನ ವಿಭಿನ್ನ ಲೀಗ್ ಟೂರ್ನಿ 'ದಿ ಹಂಡ್ರೆಡ್' ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುವ ಈ ಲೀಗ್ ಆಗಸ್ಟ್ 1ರಿಂದ ಈ ಆರಂಭವಾಗಲಿದ್ದು ಕುತೂಹಲ ಮೂಡಿಸಿದೆ. ಟ್ರೆಂಟ್ ರಾಕೆಟ್ಸ್ ಹಾಗೂ ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ.

Story first published: Sunday, July 30, 2023, 21:35 [IST]
Other articles published on Jul 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+