ಒಲಿಂಪಿಕ್ಸ್‌ನಲ್ಲಿ ಹಿಮಾ ದಾಸ್ ಬದಲು ಕರ್ನಾಟಕದ ಓಟಗಾರ್ತಿಗೆ ಸ್ಥಾನ ಸಾಧ್ಯತೆ!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿ ಹಿಮಾ ದಾಸ್ ಬದಲಿಗೆ ಕರ್ನಾಟಕದ ಅಥ್ಲೀಟ್ ಎಟಿ ಧನೇಶ್ವರಿಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಪಾಟಿಯಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ ರಾಜ್ಯ ಮಟ್ಟದ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2021ರಲ್ಲಿ ಧನೇಶ್ವರಿ ಟೋಕಿಯೋ ಟಿಕೆಟ್ ಪಡೆದುಕೊಳ್ಳುವುದರಲ್ಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದ 4x100 ಮೀ. ರಿಲೇ ಸ್ಪರ್ಧೆಗೆ ಆಯ್ಕೆಯಾಗಿರುವ ಭಾರತದ ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಹಿಮಾ ಬದಲಿಗೆ ಭಾರತ ರಿಲೇ ತಂಡದಲ್ಲಿ ಧನೇಶ್ವರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ.
ಶನಿವಾರ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳಾ 100 ಮೀ. ಓಟದ ಸ್ಪರ್ಧೆಯಲ್ಲಿ 5ನೇ ಸ್ಥಾನ (11.71 ಸೆಕೆಂಡ್) ಪಡೆದಿದ್ದರು. ಈ ವಿಭಾಗದಲ್ಲಿ ತಮಿಳುನಾಡಿನ ಎಸ್ ಧನಲಕ್ಷ್ಮಿ 11.52 ಸೆಕೆಂಡ್ ಸಾಧನೆಯೊಂದಿಗೆ ಚಿನ್ನ ಬಾಚಿಕೊಂಡಿದ್ದರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4x100 ಮೀ. ರಿಲೇಗಾಗಿ ಭಾರತ ಮಹಿಳಾ ತಂಡದಲ್ಲಿ ಈಗಾಗಲೇ ದ್ಯುತೀ ಚಂದ್, ಧನಲಕ್ಷ್ಮೀ ಮತ್ತು ಅರ್ಚನಾ ಸುಸೀಂದ್ರನ್ ಇದ್ದಾರೆ. ಇವರಲ್ಲಿ ಹಿಮಾ ದಾಸ್ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಹಮಾ ಸ್ಥಾನಕ್ಕೆ ಧನೇಶ್ವರಿ ಬರುವ ನಿರೀಕ್ಷೆಯಿದೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications