
ನೈರೋಬಿ: 1500 ಓಟದ ಸ್ಪರ್ಧೆಯಲ್ಲಿನ ವಿಶ್ವ ಚಾಂಪಿಯನ್, ಕೀನ್ಯಾದ ಎಲೈಜ ಮನಂಗೋಯಿಗೆ 2 ವರ್ಷಗಳ ನಿಷೇಧ ಹೇರಲಾಗಿದೆ. ಉದ್ದೀಪನಾ ವಿರೋಧಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮನಂಗೋಯಿಗೆ ಶಿಕ್ಷೆ ವಿಧಿಸಿರುವುದಾಗಿ ಅಥ್ಲೆಟಿಕ್ಸ್ ಇಂಟಗ್ರಿಟಿ ಯುನಿಟ್ (ಎಐಯು) ಶುಕ್ರವಾರ (ನವೆಂಬರ್ 13) ಹೇಳಿದೆ.
ಎಲೈಜ ಮನಂಗೋಯಿ ಅವರು ಮೂರು ಬಾರಿ ಉದ್ದೀಪನ ಪರೀಕ್ಷೆಯನ್ನು ತಪ್ಪಿಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ. ಕಳೆದ ಜುಲೈನಲ್ಲೇ ಮನಂಗೋಯಿ ನಿಷೇಧಕ್ಕೀಡಾಗಿದ್ದರು. ಮನಂಗೋಯಿ ಪರೀಕ್ಷೆಯನ್ನು ತಪ್ಪಿಸಿಕೊಂಡಲ್ಲಿಂದ ನಿಷೇಧ ಆರಂಭವಾಗಲಿದೆ ಎಂದು ಎಐಯು ತಿಳಿಸಿದೆ.
ಎಐಯು ಹೇಳಿರುವಂತೆ ಮನಂಗೋಯಿ ಉದ್ದೀಪನಾ ಮದ್ದು ಪರೀಕ್ಷೆ ತಪ್ಪಿಸಿಕೊಂಡಿದ್ದು 2019 ಡಿಸೆಂಬರ್ 22ರಂದು. ಹೀಗಾಗಿ ಅಲ್ಲಿಂದಲೇ ನಿಷೇಧ ಶಿಕ್ಷೆ ಆರಂಭವಾಗಲಿದೆ. ಅಂದರೆ ಮುಂದಿನ ವರ್ಷ ಡಿಸೆಂಬರ್ 22ಕ್ಕೆ ಎಲೈಜ ಮೇಲಿನ ನಿಷೇಧ ಪೂರ್ಣಗೊಳ್ಳಲಿದೆ.
ಎಲೈಜಾ ನಿಷೇಧಕ್ಕೀಡಾಗಿರುವ ಸಂಗತಿಯನ್ನು ಅಥ್ಲೆಟಿಕ್ಸ್ ಇಂಟಗ್ರಿಟಿ ಯುನಿಟ್ ಟ್ವೀಟ್ ಮೂಲಕ ತಿಳಿಸಿದೆ.