ವಿಂಬಲ್ಡನ್, ಜುಲೈ 15: ವಿಂಬಲ್ಡನ್ ನಲ್ಲಿ ಬಿಳಿ ಉಡುಪು ವಸ್ತ್ರಸಂಹಿತೆ ಕಡ್ಡಾಯವಾಗಿರುವುದು ಗೊತ್ತಿರುವ ವಿಷಯ. ಬೆಲ್ಜಿಯಂನ ಟೆನಿಸ್ ಆಟಗಾರ್ತಿ ಕಿಮ್ ಕ್ಲೈಸ್ಟರ್ಸ್, ಅಭಿಮಾನಿಯೊಬ್ಬನಿಗೆ ಬಿಳಿ ಸ್ಕರ್ಟ್ ತೊಡಿಸಿದ ಪ್ರಸಂಗ ನಡೆದಿದೆ.
ಮಹಿಳೆಯರ ಡಬಲ್ಸ್ ಪ್ರದರ್ಶನ ಪಂದ್ಯದ ವೇಳೆ ಕಿಮ್ ಕ್ಲೈಸ್ಟರ್ಸ್ ಮ್ಯಾಚ್ ಪಾಯಿಂಟ್ ಗಾಗಿ ಸರ್ವ್ ಮಾಡಬೇಕಿತ್ತು. ಈ ವೇಳೆ ಅಭಿಮಾನಿಗಳಿಗೆ ಒಂದಷ್ಟು ಮನರಂಜನೆ ನೀಡುವ ನಿಟ್ಟಿನಲ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ತಿರುಗಿ ಮ್ಯಾಚ್ ಪಾಯಿಂಟ್ ಗೆ ಯಾವ ಕಡೆ ಸರ್ವ್ ಮಾಡಲಿ ಅಂತಾ ಕೇಳುತ್ತಾರೆ.
