ಒಲಿಂಪಿಕ್ಸ್ ಆಯೋಜಿಸಲು ಜಂಟಿಯಾಗಿ ಹರಾಜು ಕೂಗಲಿದೆ ಕೊರಿಯಾ ರಾಷ್ಟ್ರಗಳು

ಸಿಯೋಲ್, ಸೆಪ್ಟೆಂಬರ್ 19: ಉತ್ತರ ಕೊರಿಯಾದ ಸಹಕಾರದಿಂದ ಕಳೆದ ವರ್ಷಾಂತ್ಯದಲ್ಲಿ ಚಳಿಗಾಳದ ಒಲಿಪಿಂಕ್ಸ್ ಆಯೋಜಿಸಿ ಭಾರಿ ಯಶಸ್ಸು ಕಂಡಿದ್ದ ದಕ್ಷಿಣ ಕೊರಿಯಾ. ಇದೀಗ ಎರಡೂ ಕೊರಿಯಾ ರಾಷ್ಟ್ರಗಳ ಸೇರಿ ಇನ್ನೂ ದೊಡ್ಡ ಕ್ರೀಡಾಕೂಟ ಆಯೋಜಿಸಲು ಸಜ್ಜಾಗಿವೆ.
ದಕ್ಷಿಣ ಮತ್ತು ಉತ್ತರ ಕೊರಿಯಾ ದೇಶಗಳು 2032ರ ಒಲಿಂಪಿಕ್ಸ್ ಅನ್ನು ತಮ್ಮ ದೇಶಗಳಲ್ಲಿ ಆಯೋಜಿಸಲು ಒಟ್ಟಾಗಿ ಹರಾಜು ಕೂಗಲು ನಿರ್ಧರಿಸಿವೆ. ಈ ನಿರ್ಧಾರವನ್ನು ಎರಡೂ ದೇಶಗಳ ಶೃಂಗ ಸಭೆಯಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾನ್ ಉಂಗ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಿ ಇನ್ ಪ್ರಕಟಿಸಿದ್ದಾರೆ.
ಅಷ್ಟೆ ಅಲ್ಲದೆ 2020ರಲ್ಲಿ ಟೊಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಎರಡೂ ದೇಶಗಳು ಒಟ್ಟಾಗಿ ಭಾಗಿಯಾಗುತ್ತವೆ ಎಂದೂ ಸಹ ಇದೇ ಸಮಯದಲ್ಲಿ ಪ್ರಕಟಿಸಲಾಗಿದೆ.
ಈ ಎರಡು ದೇಶಗಳ ನಡುವೆ ಭಾರಿ ವೈರತ್ವ ಇತ್ತು. ಆದರೆ ಕೆಲವೇ ತಿಂಗಳುಗಳ ಹಿಂದೆ ಎರಡೂ ದೇಶದ ನಾಯಕರುಗಳು ತೆಗೆದುಕೊಂಡ ದಿಟ್ಟ ಹೆಜ್ಜೆಯಿಂದಾಗಿ ಎರಡೂ ದೇಶಗಳು ಪರಸ್ಪರ ಸ್ನೇಹದ ಹಸ್ತ ಚಾಚುವುದಷ್ಟೆ ಅಲ್ಲದೆ ಪ್ರಪಂಚದ ಹಲವು ನೆರೆ ರಾಷ್ಟ್ರಗಳೊಂದಿಗೆ ವೈರತ್ವ ಸಾಧಿಸುವ ರಾಷ್ಟ್ರಗಳಿಗೆ ಮಾದರಿಯಾಗಿವೆ.
ಕೆಲವೇ ದಿನಗಳಲ್ಲಿ ದಕ್ಷಿಣ ಕೊರಿಯಾ ರಾಷ್ಟ್ರದ ಅಧ್ಯಕ್ಷ ಕಿಮ್ ಜಾನ್ ಉಂಗ್ ಅವರು ಉತ್ತರ ಕೊರಿಯಾದ ರಾಜಧಾನಿ ಸ್ಯುಯೆಲ್‌ಗೆ ಭೇಟಿ ನೀಡಲಿದ್ದಾರೆ ಇದು ಸಹ ಒಂದು ಐತಿಹಾಸಿಕ ಘಟನೆ ಎನಿಸಿಕೊಳ್ಳಲಿದೆ. 1945ರ ನಂತರ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ನಾಯಕರೋರ್ವರು ಉತ್ತರ ಕೊರಿಯಾದ ರಾಜಧಾನಿಗೆ ಭೇಟಿ ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications