Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾಂಗ್‌ಜಂಪ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕೇರಳದ ಶ್ರೀಶಂಕರ್

Long jumper Sreeshankar qualifies for Tokyo Olympics

ಯುವ ಲಾಂಗ್‌ಜಂಪ್ ಪಟು 21ರ ಹರೆಯದ ಶ್ರೀಶಂಕರ್ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ದಾಖಲೆ ನಿರ್ಮಾಣ ಮಾಡಿ ಶ್ರೀಶಂಕರ್ ಈ ಅರ್ಹತೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಟಿಯಾಲದಲ್ಲಿ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯರ ಆಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಯುತ್ತಿದ್ದು ಇದರಲ್ಲಿ ಕೇರಳ ಮೂಲಕ ಮುರಳಿ ಶ್ರೀಶಂಕರ್ 8.26 ಮೀಟರ್ ದೂರಕ್ಕೆ ನೆಗೆದು ಈ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆಯಲು 8.22 ಮೀಟರ್ ಜಿಗಿಯುವ ಮಾನದಂಡಕ್ಕಿಂತ ದೂರ ಜಿಗಿದಿದ್ದಾರೆ ಶ್ರೀಶಂಕರ್.

ಲಾಂಗ್‌ಜಂಪ್‌ನಲ್ಲಿ ಈ ಹಿಂದೆ ರಾಷ್ಟ್ರೀಯ ದಾಖಲೆಯನ್ನು ಶ್ರೀಶಂಕರ್ ಅವರೇ ಹೊಂದಿದ್ದರು. 2018ರಲ್ಲಿ 8.20 ಮೀಟರ್ ಜಿಗಿದು ಈ ಮೊದಲು ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು ಶ್ರೀಶಂಕರ್ ಈಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಲ್ಲದೆ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡು ಭರವಸೆ ಮೂಡಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಐದನೇ ಪ್ರಯತ್ನದಲ್ಲಿ ಶ್ರೀಶಂಕರ್ ಈ ಸಾಧನೆಯನ್ನು ಮಾಡಿದ್ದಾರೆ. ಆರಂಭದ ಪ್ರಯತ್ನದಲ್ಲಿ 8.02, ನಂತರ 8.04, 8.07 ಮತ್ತು 8.09 ದೂರ ಜಿದಿದ್ದರು. ಆದರೆ ಅಂತಿಮ ಪ್ರಯತ್ನದಲ್ಲಿ 8.26 ಮೀಟರ್ ದೂರಕ್ಕೆ ಜಿಗಿಯಲು ಯಶಸ್ವಿಯಾದರು.

ಇನ್ನೋರ್ವ ಕೇರಳದ ಲಾಂಗ್‌ಜಂಪ್ ಪಟು ಮುಹಮ್ಮದ್ ಅನೀಸ್ 8 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರೆ ಕರ್ನಾಟಕದ ಎಸ್ ಲೋಕೇಶ್ 7.60 ಮೀಟರ್ ಜಿಗಿದು ಕಂಚಿನ ಪದಕ ಪಡೆದಿದ್ದಾರೆ.

Story first published: Wednesday, March 17, 2021, 15:24 [IST]
Other articles published on Mar 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+