ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮಣಿಕಾ ಬಾತ್ರಾ, ಶರತ್ ಕಮಲ್

ದೋಹಾ: ಕತಾರ್‌ನ ದೋಹಾದಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಟೇಬಲ್ ಟೆನಿಸ್ ಮಿಕ್ಸ್ಡ್ ಜೋಡಿಯಾದ ಮಣಿಕಾ ಬಾತ್ರಾ ಮತ್ತು ಶರತ್ ಕಮಲ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೇಬಲ್ ಟೆನಿಸ್ ಮಿಕ್ಸ್ಡ್ ಡಬಲ್ಸ್‌ನಲ್ಲಿ ಇಬ್ಬರೂ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಖಾತರಿಪಡಿಸಿಕೊಂಡಿದ್ದಾರೆ.
ಶನಿವಾರ (ಮಾರ್ಚ್ 20) ನಡೆದ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಟೇಬಲ್ ಟೆನಿಸ್ ಮಿಕ್ಸ್ಡ್ ಡಬಲ್ಸ್ ವಿಶ್ವ ನಂ.19 ಶ್ರೇಯಾಂಕದ ಮಣಿಕಾ ಬಾತ್ರ ಮತ್ತು ಶರತ್ ಕಮಲ್ ಜೋಡಿ, ವಿಶ್ವ ನಂ.8 ಕೊರಿಯನ್ ಜೋಡಿಯಾದ ಸಾಂಗ್-ಸು ಲೀ ಮತ್ತು ಜಿಹೀ ಜೀನ್ ವಿರುದ್ಧ ಗೆಲುವು ಕಂಡಿದೆ.
ಆರಂಭಿಕ ಎರಡು ಸೆಟ್‌ಗಳಲ್ಲಿ ಭಾರತೀಯ ಜೋಡಿ 8-11, 6-11ರ ಅಂತರದಲ್ಲಿ ಸೋತು ಪರಾಭವದ ಭೀತಿ ಎದುರಿಸಿತ್ತು. ಆದರೆ ಮುಂದಿನ ನಾಲ್ಕು ಸೆಟ್‌ಗಳಲ್ಲಿ 11-5, 11-6, 13-11, 11-8ರ ಗೆಲುವು ದಾಖಲಿಸುವುದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ ಮಣಿಕಾ-ಶರತ್ ಜೋಡಿ ಕಂಚಿನ ಪದಕ ಗೆದ್ದಿತ್ತು. ಭಾರತೀಯ ಟೇಬಲ್ ಟೆನಿಸ್ ಆಟಗಾರರಾದ ಸತಿಯನ್ ಜ್ಞಾನಶೇಖರನ್ ಮತ್ತು ಸುತೀರ್ಥಾ ಮುಖರ್ಜೀ ಕೂಡ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications