Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮನು ಭಾಕರ್

ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಮನು ಭಾಕರ್ ಅವರು 2024ರ ಒಲಿಂಪಿಕ್ಸ್ ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ನಲ್ಲಿ 11ನೇ ಕೋಟಾ ಫಿಕ್ಸ್ ಆಗಿದೆ. ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸಿಪ್ ನಲ್ಲಿ, ಅವರು 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ನಲ್ಲಿ ಮನು ಭಾಕರ್ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಮನು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಮನು 24 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಮೊದಲ ನಾಲ್ಕು ಶೂಟರ್ ಗಳ ಪೈಕಿ 3 ಶೂಟರ್ ಗಳು ಚೀನಾದವರು. ಚೀನಾದ ಆಟಗಾರರು ಮೊದಲ, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

Manu Bhaker Secures India’s 11th Paris Olympic Quota in Shooting

ಇರಾನ್ ಆಟಗಾರ ಎರಡನೇ ಸ್ಥಾನದಲ್ಲಿದ್ದರು. ಒಂದು ದೇಶವು ಒಂದು ಈವೆಂಟ್ ನಲ್ಲಿ ಎರಡು ಕೋಟಾಗಳನ್ನು ಮಾತ್ರ ಪಡೆಯಬಹುದು. ಚೀನಾ ಈಗಾಗಲೇ ಕೋಟಾವನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಟಾಪ್-2ರಲ್ಲಿ ಬರುವ ಮೂಲಕ ಕೋಟಾ ಪಡೆದುಕೊಂಡಿದೆ.

ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಭಾರತ ಇದುವರೆಗೆ ನಾಲ್ಕು ಕೋಟಾಗಳನ್ನು ಪಡೆದುಕೊಂಡಿದೆ. ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಸರಬ್ಜೋತ್ ಸಿಂಗ್ ಭಾರತದ ಪರವಾಗಿ ಕೋಟಾವನ್ನು ಪಡೆದರು.

ನಂತರ, ಶುಕ್ರವಾರ, ಅರ್ಜುನ್ ಬಾಬುಟಾ 10 ಮೀಟರ್ ಏರ್ ರೈಫಲ್ ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ, ಒಲಿಂಪಿಕ್ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದ್ದಾರೆ. ತಿಲೋತ್ತಮ ಸೇನ್ ಮೂಲಕ 10 ಮೀಟರ್ ಏರ್ ರೈಫಲ್ ನಲ್ಲೂ ಭಾರತ ಒಲಿಂಪಿಕ್ಸ್ ಗೆ ಅರ್ಹತೆ ಪಡೆದು ಕೊಂಡಿದೆ.

ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಭಾರತ 28 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಇದುವರೆಗೆ 11 ಚಿನ್ನ, 11 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದೆ. ಚೀನಾ 36 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೊರಿಯಾ 23 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಕಜಕಿಸ್ತಾನ್ 12 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Story first published: Sunday, October 29, 2023, 10:34 [IST]
Other articles published on Oct 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+