For Quick Alerts
ALLOW NOTIFICATIONS  
For Daily Alerts

Manu Bhaker: ಒಲಿಂಪಿಕ್ಸ್‌ ಬಳಿಕ ಮತ್ತೆ ಮೈದಾನದಲ್ಲಿ ಅಬ್ಬರಿಸಿದ ಮನು ಭಾಕರ

ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಸಾಧನೆ ಮಾಡಿರುವ ಮನು ಭಾಕರ್, ಭರ್ಜರಿಯಾಗಿ ಅಂಗಳ ಪ್ರವೇಶಿಸಿದ್ದಾರೆ. ಕೆಲವು ದಿನಗಳ ವಿರಾಮದ ಬಳಿಕ ಮನು ಮತ್ತೆ ಗ್ರೌಂಡ್‌ಗೆ ಎಂಟ್ರಿ ಹೊಡೆದಿದ್ದಾರೆ. ಅವರು ಇದೇ ವರ್ಷದ ಜನೆವರಿಯಲ್ಲಿ ಮತ್ತೆ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟು ಅಭ್ಯಾಸ ಆರಂಭಿಸಿದ್ದರು. ಇನ್ನೇನು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳು ಆರಂಭವಾಗುತ್ತವೆ. ಇದಕ್ಕೂ ಮುನ್ನ ಮನು ಅಭ್ಯಾಸ ಆರಂಭಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಿಗೂ ಮುಂಚಿತವಾಗಿ ಮನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು. ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ 25 ಮೀಟರ್‌ ಪಿಸ್ತೂಲ್‌ ಈವೆಂಟ್‌ನಲ್ಲಿ ಮನು ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡಿದ್ದಾರೆ. ಇವರು ಒಟ್ಟು 587 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು.

Manu Bhaker Shines in National Trials After Historic Double Medal Win at Paris Olympics

ಭರ್ಜರಿ ಕಂ ಬ್ಯಾಕ್

ಅರ್ಹತಾ ಸುತ್ತುಗಳಲ್ಲಿ ಅಮೋಘ ಲಯದಲ್ಲಿ ಕಾಣಿಸಿಕೊಂಡ ಮನು ಅಂಕಗಳ ಬೇಟೆ ನಡೆಸಿದರು. ಈ ವೇಳೆ 587 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡು, ಅಂತಿಮ ಸುತ್ತು ಪ್ರವೇಶಿಸಿದರು. ಆದರೆ ಫೈನಲ್‌ನಲ್ಲಿ ಮನು ಕೊಂಚ ಎಡವಿದರು. ಪರಿಣಾಮ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಈ ಸ್ಪರ್ಧೆಯಲ್ಲಿ ಪಂಜಾಬ್‌ನ ಸಿಮ್ರಾನ್‌ ಪ್ರೀತ್ ಕೌರ್‌ ಬ್ರಾರ್ ಟಿ 1 ವಿಭಾಗದಲ್ಲಿ 36 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದರು. ತೆಲಂಗಾಣದ ಇಶಾ ಸಿಂಗ್ ಎರಡನೇ ಸ್ಥಾನ ಪಡೆದರು ಮತ್ತು 2024 ರ ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ 31 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಈ ಟ್ರಯಲ್ಸ್‌ ಬಹು ಮುಖ್ಯ ಆಗಿವೆ.

ಭಾರತದ ಪರ ಮನು ಭಾಕರ್ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಮನು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕದ ಸಾಧನೆ ಮಾಡಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. ಈ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.

Manu Bhaker Shines in National Trials After Historic Double Medal Win at Paris Olympics

ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆಯನ್ನು ಮಾಡಿದ ಮೊದಲ ಮಹಿಳಾ ಶೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಇದೇ ಒಲಿಂಪಿಕ್ಸ್‌ನ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು. ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಬಾಚಿಕೊಂಡ ಸ್ವತಂತ್ರ್ಯ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಿವಿ ಸಿಂಧು ಅವರ ಬಳಿಕ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮಹಿಳಾ ಕ್ರೀಡಾ ಪಟು ಎಂಬ ಹಿರಿಮೆ ಸಹ ಮನು ಅವರದ್ದಾಗಿದೆ.

Story first published: Monday, February 10, 2025, 23:41 [IST]
Other articles published on Feb 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+