Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೇರಿ ಕೋಮ್‌ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮ ಭೂಷಣ ಪುರಸ್ಕಾರ

Mary Kom awarded Padma Vibhushan, PV Sindhu conferred Padma Bhushan

ನವದೆಹಲಿ, ಜನವರಿ 26: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್‌ ಅವರಿಗೆ ಪ್ರತಿಷ್ಠಿತ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುಗೆ ಪದ್ಮ ಭೂಷಣ ಪುರಸ್ಕಾರ ದೊರೆತಿದೆ. ಶನಿವಾರ (ಜನವರಿ 25) ಈ ಇಬ್ಬರೂ ಕ್ರೀಡಾ ಸಾಧಕಿಯರಿಗೆ ಪುರಸ್ಕಾರ ಘೋಷಿಸಲಾಗಿದೆ.

36ರ ಹರೆಯದ ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚು ಜಯಿಸಿದ್ದರು. ಕೋಮ್‌ಗೆ 2013ರಲ್ಲಿ ಪದ್ಮ ಭೂಷಣ ಮತ್ತು 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಮೇರಿ ಕೋಮ್, ಪಿವಿ ಸಿಂಧು ಸೇರಿದಂತೆ ಒಟ್ಟಿಗೆ 8 ಮಂದಿ ಕ್ರೀಡಾ ಸಾಧಕರಿಗೆ ಪದ್ಮ ಪುರಸ್ಕಾರ ಘೋಷಿಸಲಾಗಿದೆ.

ಪದ್ಮ ಭೂಷಣ ಪುರಸ್ಕಾರಕ್ಕಾಗಿ ಪ್ರಕಟಿಸಲಾದ 16 ಮಂದಿಯಲ್ಲಿ 24ರ ಹರೆಯದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೆಸರಿದೆ. ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಮೆರಗು ತಂದಿದ್ದರು. ಅಲ್ಲದೆ ಈ ಬಾರಿ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಕ್ರಿಕೆಟರ್ ಝಹೀರ್ ಖಾನ್, ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್, ಪುರುಷರ ಹಾಕಿ ತಂಡದ ಮಾಜಿ ನಾಯಕ ಎಂಪಿ ಗಣೇಶ್, ಶೂಟರ್ ಜಿತು ರಾಯ್, ಮಹಿಳಾ ಫುಟ್ಬಾಲ್ ತಂಡದ ಮಾಜಿ ನಾಯಕಿ ಒಯ್‌ನಮ್ ಬೆಂಬೆ ದೇವಿ ಮತ್ತು ಆರ್ಚರ್ ತರುಣ್‌ದೀಪ್ ರೈಗೆ ಕ್ರೀಡಾ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ಪ್ರಕಟಿಸಲಾಗಿದೆ.

Story first published: Sunday, January 26, 2020, 1:31 [IST]
Other articles published on Jan 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+