Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೇರಿ ಕೋಮ್ ಗೆ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ ಶಿಪ್ ಕಿರೀಟ

ಬೆಂಗಳೂರು, ನವೆಂಬರ್ 08 : ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ಎಂಸಿ ಮೇರಿ ಕೋಮ್ ಅವರು ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ.

ವಿಯೆಟ್ನಾಂನಲ್ಲಿ ಮಂಗಳವಾರ ನಡೆದ ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತದ ಮೇರಿ ಕೋಮ್ ಜಪಾನಿನ ತುಬಸ ಕುಮುರ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು.

 Mary Kom wins Asian Boxing gold


ಅಂತಿಮ ಹಣಾಹಣಿಯಲ್ಲಿ ಎಂಸಿ ಮೇರಿ ಕೋಮ್ ಅವರು 48 ಕೆಜಿ ವಿಭಾಗದಲ್ಲಿ ಕೋರಿಯಾದ ಕಿಮ್ ಹ್ಯಾಂಗ್ ಮಿ ವಿರುದ್ಧ ಬುಧವಾರದಂದು 5-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದರು.

35 ವರ್ಷದ ರಾಜ್ಯಸಭೆ ಸದಸ್ಯೆಯಾಗಿರುವ ಮೇರಿ ಕೋಮ್, ಒಲಿಂಪಿಕ್ ನಲ್ಲಿ ಕಂಚು ಪದಕ ಜಯಿಸಿದ್ದಾರೆ. ವಿಯೆಟ್ನಾಂನ ಹೋ ಚೋ ಮಿನ್ ಸಿಟಿಯಲ್ಲಿ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ ಶಿಪ್ ಬಾಕ್ಸಿಂಗ್ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+