ಗೋಲು ಬಾರಿಸಿ, ಪಲ್ಟಿ ಹೊಡಿ, ಕ್ಲೋಸ್ ಕಮಾಲ್
ಪೋರ್ಟಲಿಜಾ(ಬ್ರೆಜಿಲ್), ಜೂ.23: ಜರ್ಮನಿಯ ಹಿರಿಯ ಸ್ಟ್ರೈಕರ್ ಮಿರೊಸ್ಲಾವ್ ಕ್ಲೋಸ್ ಈ ಬಾರಿಯ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದ್ದಾರೆ. ಘಾನಾ ವಿರುದ್ಧದ ವಿಶ್ವಕಪ್‌ನ 'ಜಿ' ಗುಂಪಿನ ಪಂದ್ಯದಲ್ಲಿ ಕ್ಲೋಸ್ ಹೊಡೆದ ಗೋಲ್ ಜರ್ಮನಿಗೆ ಆಸರೆಯಾಯಿತು, ಬ್ರೆಜಿಲ್ ದಿಗ್ಗಜ ರೊನಾಲ್ಡೊ ದಾಖಲೆ ಸರಿಗಟ್ಟಿತು. ಎಂದಿನಂತೆ ಕ್ಲೋಸ್ ಟ್ರೇಡ್ ಮಾರ್ಕ್ ಲಾಗ ಹಾಕಿ ಕುಣಿದಾಡಿದರು.
ಘಾನ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ 36ರ ಹರೆಯದ ಕ್ಲೋಸ್ 71ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟಾರೆ 15 ಗೋಲು ದಾಖಲಿಸಿ ಆಟಗಾರ ಎಂಬ ಸಾಧನೆ ಮೆರೆದರು. [ಮುಲ್ಲರ್ ಮ್ಯಾಜಿಕಿಗೆ ಮಕಾಡೆ ಮಲಗಿದ ಪೋರ್ಚುಗೀಸರು]
ಮಾರಿಯೊ ಗೊಟ್ಜೆ ಬದಲಿಗೆ ಕಣಕ್ಕಿಳಿದ ಕ್ಲೋಸ್ ಗೋಲು ದಾಖಲಿಸಿದ್ದರಿಂಡ ಜರ್ಮನಿ ತಂಡ ಘಾನ ವಿರುದ್ಧ 2-2 ರಿಂದ ಪಂದ್ಯ ಡ್ರಾಗೊಳಿಸಲು ಸಾಧ್ಯವಾಯಿತು.
2006ರ ವಿಶ್ವಕಪ್‌ನಿಂದ ರೊನಾಲ್ಡೊ ದಾಖಲೆಯತ್ತ ಯಾರೂ ಸುಳಿದಿರಲಿಲ್ಲ. ಇದೀಗ ತನ್ನ ನಾಲ್ಕನೆ ವಿಶ್ವಕಪ್‌ನಲ್ಲಿ ಕ್ಲೋಸ್ ಈ ದಾಖಲೆಯನ್ನು ಮುರಿದರು. ಅನುಭವಿ ಫಾರ್ವರ್ಡ್ ಆಟಗಾರ ಕ್ಲೋಸ್ 2002ರ ವಿಶ್ವಕಪ್‌ನಲ್ಲಿ 5 ಗೋಲು, 2006ರ ವಿಶ್ವಕಪ್‌ನಲ್ಲಿ 5 ಗೋಲು, 2010ರ ವಿಶ್ವಕಪ್‌ನಲ್ಲಿ ನಾಲ್ಕು ಗೋಲು ಹಾಗೂ ಪ್ರಸ್ತುತ ವಿಶ್ವಕಪ್‌ನಲ್ಲಿ ಒಂದು ಗೋಲು ಬಾರಿಸಿ ರೊನಾಲ್ಡೊ ದಾಖಲೆ ಸರಿಗಟ್ಟಿದ್ದಾರೆ.[ಫುಟ್ಬಾಲ್ ಕ್ರೇಜಿ ಫ್ಯಾನ್ಸ್ ಚಿತ್ರಗಳು]
ರೊನಾಲ್ಡೊ ಸಾಧನೆ ವಿವರ, ಜರ್ಮನಿ ದಿಗ್ಗಜ ಗೆರ್ಡ್ ಮುಲ್ಲರ್ ದಾಖಲೆ, ವಿಶ್ವಕಪ್ ಟೂರ್ನಿಯ ಅತ್ಯಧಿಕ ಗೋಲು ವಿವರ, ಘಾನಾ ವಿರುದ್ಧ ಪಂದ್ಯದ ರೋಚಕ ಚಿತ್ರಗಳು ಮುಂದಿದೆ...

ಘಾನಾ ವಿರುದ್ಧದ ಪಂದ್ಯದಲ್ಲಿ ಕ್ಲೋಸ್ ಪಲ್ಟಿ
ಘಾನಾ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ 36ರ ಹರೆಯದ ಕ್ಲೋಸ್ 71ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟಾರೆ 15 ಗೋಲು ದಾಖಲಿಸಿ ಆಟಗಾರ ಎಂಬ ಸಾಧನೆ ಮೆರೆದರು.

ರೊನಾಲ್ಡೊ ಸಾಧನೆ ಸರಿಗಟ್ಟಿದ ಕ್ಲೋಸ್
ಬ್ರೆಜಿಲ್ಲಿನ ರೊನಾಲ್ಡೊ 1998, 2002 ಹಾಗೂ 2006ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. 12 ವರ್ಷಗಳ ಹಿಂದೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು.

ಗೆರ್ಡ್ ಮುಲ್ಲರ್ ದಾಖಲೆ ಮುರಿದ ಕ್ಲೋಸ್
ಕ್ಲೋಸ್ ತಮ್ಮದೇ ದೇಶದ ಗೆರ್ಡ್ ಮುಲ್ಲರ್ (14 ಗೋಲು) ಗರಿಷ್ಠ ಗೋಲು ದಾಖಲೆಯನ್ನು ಮುರಿದರು. ಮುಲ್ಲರ್ 1970 ಹಾಗೂ 1974ರ ವಿಶ್ವಕಪ್‌ನಲ್ಲಿ ಪ್ರತಿ ವಿಶ್ವಕಪ್ ಪಂದ್ಯಗಳಲ್ಲಿ 1.08ರ ಅನುಪಾತದಲ್ಲಿ ಗೋಲು ಬಾರಿಸಿದ್ದರು.

ವಿಶ್ವಕಪ್ ನಲ್ಲಿ ಈ ಹಿಂದಿನ ಸಾಧಕರು
1958ರಲ್ಲಿ ಫ್ರಾನ್ಸ್‌ನ ಮಾಜಿ ಸ್ಟ್ರೈಕರ್ ಜಸ್ಟ್ ಫೋಂಟೇನ್(13) ನಿರ್ಮಿಸಿದ್ದ ದಾಖಲೆ ಒಂದೇ ಆವೃತ್ತಿಯಲ್ಲಿ ಮುರಿದುಬಿತ್ತು. 1958 ಹಾಗೂ 1970ರ ನಡುವೆ ನಾಲ್ಕು ವಿಶ್ವಕಪ್‌ನಲ್ಲಿ 12 ಗೋಲು ದಾಖಲಿಸಿದ ಬ್ರೆಜಿಲ್ಲಿನ ದಂತಕತೆ ಪೀಲೆ ಈ ಅವಧಿಯಲ್ಲಿ ಮೂರು ವಿಶ್ವಕಪ್‌ನ್ನು ಎತ್ತಿ ಹಿಡಿದಿದ್ದರು.
ಹಂಗೇರಿಯದ ಸ್ಯಾಂಡರ್ ಕಾಕ್‌ಸಿಸ್, ಜರ್ಮನಿಯ ಹೀರೊ ಜರ್ಜನ್ ಕ್ಲಿನ್ಸ್‌ಮನ್ ತಲಾ 11 ಗೋಲು, ಮತ್ತೋರ್ವ ಜರ್ಮನಿಯ ಹೆಲ್ಮಟ್ ರಾಹನ್, ಇಂಗ್ಲೆಂಡ್‌ನ ಗ್ಯಾರಿ ಲೆನೆಕೆರ್, ಅರ್ಜೆಂಟೀನದ ಗ್ಯಾಬ್ರಿಯೆಲ್ ಬ್ಯಾಟಿಸ್ಟುಟ ತಲಾ 10 ಗೋಲು ದಾಖಲಿಸಿದ್ದಾರೆ.

ಕ್ಲೋಸ್‌ಗೆ ರೊನಾಲ್ಡೊ ಅಭಿನಂದನೆ
ವಿಶ್ವಕಪ್‌ನಲ್ಲಿ ತಾನು ದಾಖಲಿಸಿದ್ದ 15 ಗೋಲುಗಳ ದಾಖಲೆಯನ್ನು ಸರಿಗಟ್ಟಿದ ಜರ್ಮನಿ ಆಟಗಾರ ಮಿರೊಸ್ಲಾವ್ ಕ್ಲೋಸ್‌ಗೆ ಬ್ರೆಝಿಲ್‌ನ ಮಾಜಿ ಸ್ಟ್ರೈಕರ್ ರೊನಾಲ್ಡೊ ಅಭಿನಂದಿಸಿದ್ದಾರೆ. 'ನನ್ನ ಕ್ಲಬ್‌ಗೆ ಕ್ಲೋಸ್‌ಗೆ ಸ್ವಾಗತ, ನಾನು ಮಾತ್ರ ನಿಮ್ಮ ಖುಷಿಯನ್ನು ಊಹಿಸಲು ಸಾಧ್ಯ. ನಿಮಗಿದು ಶ್ರೇಷ್ಠ ವಿಶ್ವಕಪ್' ಎಂದು ರೊನಾಲ್ಡೊ ಟ್ವಿಟ್ ಮಾಡಿದರು.

ಜರ್ಮನಿ ಅಭಿಮಾನಿಗಳ ಸಂಭ್ರಮ
ವಿಶ್ವಕಪ್ ನ ಟಾಪ್ 10 ಅತ್ಯಧಿಕ ಗೋಲು ಸ್ಕೋರರ್ ಗಳಲ್ಲಿ ನಾಲ್ವರು ಜರ್ಮನಿ, ಇಬ್ಬರು ಬ್ರೆಜಿಲಿಯನ್, ಫ್ರಾನ್ಸ್, ಹಂಗೇರಿ, ಅರ್ಜೆಂಟಿನಾ, ಇಂಗ್ಲೆಂಡ್, ಪೆರು ಹಾಗೂ ಪೋಲ್ಯಾಂಡ್ ನ ಒಬ್ಬ ಆಟಗಾರರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications