'ಮೋಸದಾಟದಲ್ಲಿ ಪಾಲ್ಗೊಂಡಿದ್ದವನಿಗೆ ವಿದಾಯದ ಪಂದ್ಯ'?; ವಾರ್ನರ್ ವಿರುದ್ಧ ಮಿಚೆಲ್ ಜಾನ್ಸನ್ ವಾಗ್ದಾಳಿ!
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ತವರಿನಲ್ಲಿ ನಡೆಯಲ್ಲಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ, ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿರುವ 14 ಸದಸ್ಯರ ತಂಡದಲ್ಲಿ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಅವಕಾಶ ನೀಡಿದೆ.

ಗಮನಾರ್ಹವಾಗಿ, ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್ ಎದುರಿಸುತ್ತಿರುವ ಡೇವಿಡ್ ವಾರ್ನರ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬೇಕೆಂಬ ಕೂಗು ಜೋರಾಗಿ ಕೇಳಿಬರುತ್ತಿತ್ತು. ಆದರೂ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೀಗ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿರುವುದನ್ನು ಟೀಕಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಅವರು ವಾರ್ನರ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋಸದಾಟದಲ್ಲಿ ಪಾಲ್ಗೊಂಡಿದ್ದವನಿಗೆ ವಿದಾಯದ ಪಂದ್ಯ
ಡೇವಿಡ್ ವಾರ್ನರ್‌ಗೆ ವಿದಾಯದ ಟೆಸ್ಟ್ ಪಂದ್ಯವನ್ನಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿರುವ ಮಿಚೆಲ್ ಜಾನ್ಸನ್, "ಟೆಸ್ಟ್ ಮಾದರಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರನಿಗೆ ವಿದಾಯದ ಪಂದ್ಯವನ್ನು ಆಡಲು ಅವಕಾಶ ಮಾಡಿಕೊಡುವ ಅವಶ್ಯಕತೆ ಏನಿತ್ತು? ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದ ಆಟಗಾರನಿಗೆ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡುವ ಅಗತ್ಯವಿತ್ತೇ?," ಎಂದು ಪ್ರಶ್ನಿಸಿದ್ದಾರೆ.

ಸ್ಯಾಂಡ್ ಪೇಪರ್ ಗೇಟ್ ಹಗರಣ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸ್ಯಾಂಡ್ ಪೇಪರ್ ಗೇಟ್ ಹಗರಣದಲ್ಲಿ (ಚೆಂಡನ್ನು ವಿರೂಪಗೊಳಿಸಿದ ಆರೋಪ) ಕ್ಯಾಮರೂನ್ ಬ್ಯಾಂಕ್ರಾಫ್ಟ್, ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಅದರ ಪ್ರಕಾರ, ಈ ಮೂವರು ಆಟಗಾರರಿಗೆ ಅಮಾನತು ಶಿಕ್ಷೆ ನೀಡಲಾಗಿತ್ತು. ಆ ಬಳಿಕ ಅಮಾನತು ಅವಧಿ ಮುಗಿದ ನಂತರವೂ, ಸ್ಮಿತ್ ಮತ್ತು ವಾರ್ನರ್ ಅವರನ್ನು ಆಸ್ಟ್ರೇಲಿಯಾ ತಂಡದ ನಾಯಕತ್ವದಿಂದ ನಿರ್ಬಂಧಿಸಲಾಗಿತ್ತು.
ಈ ರೀತಿಯ ವಿದಾಯ ಸಿಗುತ್ತದೆ ಕೇಳಿ ಆಶ್ಚರ್ಯವಾಯಿತು
ಡೇವಿಡ್ ವಾರ್ನರ್ ಅವರ ಮೋಸದಾಟದ ಬಗ್ಗೆ ಬರೆದುಕೊಂಡಿರುವ ಮಾಜಿ ಮಿಚೆಲ್ ಜಾನ್ಸನ್, "ಸ್ಯಾಂಡ್ ಪೇಪರ್‌ಗೇಟ್ ಆರೋಪದಲ್ಲಿ ಡೇವಿಡ್ ವಾರ್ನರ್ ಒಬ್ಬಂಟಿಯಾಗಿಲ್ಲ. ಆದರೂ ಅವರು ಆ ಸಮಯದಲ್ಲಿ ತಂಡದ ಹಿರಿಯ ಆಟಗಾರನಾಗಿದ್ದರು, ಅಲ್ಲದೆ ತಂಡದ ನಾಯಕನೂ ಆಗಿದ್ದರು. ಇದೆಲ್ಲದರ ನಂತರವೂ ಡೇವಿಡ್ ವಾರ್ನರ್‌ಗೆ ಈ ರೀತಿಯ ವಿದಾಯ ಸಿಗುತ್ತದೆ ಎಂಬುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಎಂದರೆ, ಕೇವಲ ಬ್ಯಾಟ್ ಅಥವಾ ಬಾಲ್‌ನಲ್ಲಿನ ನಿಮ್ಮ ಸಾಧನೆಗಳಲ್ಲ. ನೀವು ನಿಮ್ಮನ್ನು ಹೇಗೆ ನಿಭಾಯಿಸಿದ್ದೀರಿ ಮತ್ತು ನೀವು ಆಟವನ್ನು ಹೇಗೆ ಆಡಿದ್ದೀರಿ ಎಂಬುದು ನೀವು ಹೋದ ನಂತರವೂ ಉಳಿಯುತ್ತದೆ," ಎಂದು ಮಿಚೆಲ್ ಜಾನ್ಸನ್ ಬರೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ಡೇವಿಡ್ ವಾರ್ನರ್ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಸರಣಿ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ವಾರ್ನರ್ ಬಹಿರಂಗವಾಗಿ ಖಚಿತಪಡಿಸಿಲ್ಲವಾದರೂ, ಈ ಸರಣಿಯು ಡೇವಿಡ್ ವಾರ್ನರ್ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಾಗಲಿದೆ ಎಂಬ ಮಾತುಗಳಿವೆ.
ಇನ್ನು ಆಸ್ಟ್ರೇಲಿಯಾದ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಪರ್ತ್‌ನಲ್ಲಿ ಆರಂಭವಾಗಲಿದೆ.
ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಮಿಚ್ ಸ್ಟಾರ್ಕ್, ಡೇವಿಡ್ ವಾರ್ನರ್ (ಮೊದಲ ಟೆಸ್ಟ್ಗೆ ಮಾತ್ರ), ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಲ್ಯಾನ್ಸ್ ಮೋರಿಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications