ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್

ಆ ತಾಯಿಗೆ ಒಂದು ಕಡೆ ಅಮ್ಮನ ಕರ್ತವ್ಯ, ಮತ್ತೊಂದು ಕಡೆ ಜವಾಬ್ದಾರಿ ಈ ಎರಡನ್ನೂ ನಿರ್ವಹಿಸುವ ಅನಿವಾರ್ಯತೆ. ಈ ತಾಯಿ ಆ ಎರಡೂ ಜವಾಬ್ದಾರಿಯನ್ನು ಏಕಕಾಲದಲ್ಲಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಿಜೋರಾಮ್ ನ ವಾಲಿಬಾಲ್ ಆಟಗಾರ್ತಿ ಪಂದ್ಯದ ಬಿಡುವಿನ ವೇಳೆ ತನ್ನ ಕಂದಮ್ಮನಿಗೆ ಎದೆಹಾಲು ಉಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ನೆಟ್ಟಿಗರಿಂದ ಭಾರಿ ಪ್ರಶಂಸೆಗೆ ಒಳಗಾಗಿದೆ.
ಈ ಚಿತ್ರವನ್ನು ನಿಂಗ್ಲುನ್ ಹಂಗಲ್ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋವನ್ನು ಲಿಂಡಾ ಛಕ್ಚುಹಾಕ್ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಾಲಿಬಾಲ್ ಆಟಗಾರ್ತಿಯ ಹೆಸರು ಲಾಲ್ವೆಂಟ್ಲುವಾಂಗಿ. ಟುಯುಕುಮ್ ಎಂಬ ಸ್ಥಳೀಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಲಾಲ್ವೆಂಟ್ಲುವಾಂಗಿ ತನ್ನ ಏಳು ತಿಂಗಳ ಮಗುವಿನೊಂದಿಗೆ ಆಟಗಾರರ ಶಿಬಿರಕ್ಕೆ ಪ್ರವೇಶ ಪಡೆದಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಿಜೋರಾಂ ನ ಕ್ರೀಡಾ ಸಚಿವ ಕೂಡ ಲಾಲ್ವೆಂಟ್ಲುವಾಂಗಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ 10,000 ರುಪಾಯಿ ನೀಡಲು ನಿರ್ಧರಿಸಿದ್ದಾರೆ.
ಲಾಲ್ವೆಂಟ್ಲುವಾಂಗಿ ಅವರನ್ನು ನೆಟ್ಟಿಗರು ಮಾತ್ರವಲ್ಲದೇ ದೇಶದ ಜನ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಓರ್ವ ಕ್ರೀಡಾಪಟುವಾಗಿ ಹಾಗೂ ಮಗುವಿನ ತಾಯಿಯಾಗಿ ಆಕೆ ಕರ್ತವ್ಯ ನಿರ್ವಹಿಸಿತ್ತಿರುವ ಪರಿಯನ್ನು ಜನತೆ ಕೊಂಡಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications