MS Dhoni Income Tax: ಜಾರ್ಖಂಡ್‌ನಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟೋದು ಧೋನಿ!
ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಕಳೆದ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ ಹೊರಹೊಮ್ಮಿದ್ದಾರೆ. ಆದಾಯ ತೆರಿಗೆ ಇಲಾಖೆ ಪ್ರಕಾರ, ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಧೋನಿ 38 ಕೋಟಿ ರುಪಾಯಿ ಮುಂಗಡ ತೆರಿಗೆ ಪಾವತಿಸಿದ್ದಾರೆ. ಧೋನಿಯ ವಾರ್ಷಿಕ ಆದಾಯ ಸುಮಾರು 130 ಕೋಟಿ ರುಪಾಯಿ ಎಂದು ನಿರೀಕ್ಷೆ ಮಾಡಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಧೋನಿ ಅವರ ವಾರ್ಷಿಕ ಆದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದು ಅವರ ತೆರಿಗೆ ಪಾವತಿಯನ್ನು ನೋಡಿದರೆ ಅರ್ಥವಾಗುತ್ತದೆ. ಧೋನಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದಾಗಿನಿಂದ ನಿರಂತರವಾಗಿ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆದಾರರಾಗಿದ್ದಾರೆ. ಆಗರ್ಸ್ 15, 2020ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಎಂಎಸ್ ಧೋನಿ ಕಳೆದ ವರ್ಷ ಕೂಡ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದರು. 2020-21ರ ಸಾಲಿನಲ್ಲಿ ಅವರು ಸುಮಾರು 30 ಕೋಟಿ ರುಪಾಯಿಗಳನ್ನು ಮುಂಗಡ ತೆರಿಗೆಯಾಗಿ ಪಾವತಿ ಮಾಡಿದ್ದರು. ಅಚ್ಚರಿ ಎಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಕೂಡ ಅವರ ಆದಾಯದಲ್ಲಿ ಏರಿಕೆಯಾಗಿದೆ, ಕಟ್ಟು ಟ್ಯಾಕ್ಸ್ ಮೊತ್ತ ಕೂಡ ಹೆಚ್ಚಳವಾಗಿದೆ. ಈ ಬಾರಿ ಅವರು ತಮ್ಮ ಐಪಿಎಲ್ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚಿನದಾಗಿದೆ ತೆರಿಗೆಯನ್ನು ಪಾವತಿ ಮಾಡಿದ್ದಾರೆ.

ಭಾರತದ ಅತಿ ಹೆಚ್ಚು ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನ
ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರವಾಗಿ ಆಡಲು 12 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ವಿವಿಧ ಬ್ಯ್ರಾಂಡ್‌ಗಳಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ. ಆದರೂ, ವಿವಿಧ ಉತ್ಪನ್ನಗಳ ಕಂಪನಿಗಳು, ಧೋನಿಯವರ ಜಾಹೀರಾತಿಗಾಗಿ ದುಂಬಾಲು ಬೀಳುತ್ತವೆ. ಇದೇ ಕಾರಣಕ್ಕೆ ಧೋನಿ ಆದಾಯ ಪ್ರತಿ ವರ್ಷ ಹೆಚ್ಚಳವಾಗುತ್ತಿದೆ.
ಭಾರತದ ಅತಿ ಹೆಚ್ಚು ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ 1,394 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ. ಎಂಎಸ್ ಧೋನಿಯವರ ಒಟ್ಟಾರೆ ಆಸ್ತಿ ಮೌಲ್ಯ 943 ಕೋಟಿ ರುಪಾಯಿಗಳಾಗಿದೆ. 918 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಮುಖಾಮುಖಿ
ಇಂಡಿಯನ್ ಪ್ರೀಮಿಯರ್ ಲೀಗ್ 2023 ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿದ ಬಳಿಕ ತವರಿನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್‌ಗಳ ಗೆಲುವು ಸಾಧಿಸುವ ಮೂಲಕ, ಈ ಆವೃತ್ತಿಯಲ್ಲಿ ಮೊದಲ ಗೆಲುವು ಕಂಡಿದೆ. ಮುಂದಿನ ಪಂದ್ಯದಲ್ಲಿ ಸಿಎಸ್‌ಕೆ ತಂಡ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಸಿಎಸ್‌ಕೆ ತಂಡದ ಆಟಗಾರರು ಮುಂಬೈಗೆ ತೆರಳಿದ್ದಾರೆ. ಶನಿವಾರ ಏಪ್ರಿಲ್ 8ರಂದು ನಡೆಯುವ ಪಂದ್ಯದಲ್ಲಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್‌ನ ಎರಡು ಯಶಸ್ವೀ ತಂಡಗಳು ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications