ಮುಂದಿನ ವರ್ಷದ ಆರಂಭದಲ್ಲಿ 2024ರ ಇಂಡಿಯನ್ಸ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಪ್ರಾರಂಭವಾಗುವಾಗ ಎಲ್ಲರ ಕಣ್ಣುಗಳು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮೇಲೆ ನೆಟ್ಟಿರುತ್ತವೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ಪ್ರಬಲ ಉಪಸ್ಥಿತಿ ಹೊಂದಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2023ರ ಐಪಿಎಲ್ ಪ್ರಶಸ್ತಿಗೆ ಎತ್ತಿಹಿಡಿಯಿತು. ಇದು ಶ್ರೀಮಂತ ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಅವರ ಐದನೇ ಪ್ರಶಸ್ತಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ 2023ರ ಐಪಿಎಲ್‌ನ ಫೈನಲ್ ಗೆಲುವಿನ ನಂತರ ಎಂಎಸ್ ಧೋನಿ ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಘೋಷಿಸಿದರು. ಆ ಕ್ಷಣ ಅವರನ್ನು ಹುರಿದುಂಬಿಸಲು ಉತ್ತಮ ಕ್ಷಣವಾಗಿತ್ತು. ಆದರೆ, ಎಂಎಸ್ ಧೋನಿಗೆ 42 ವರ್ಷ ಮತ್ತು ಅವರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.
ಎಂಎಸ್ ಧೋನಿಗೆ ಕ್ರಿಕೆಟ್ ಹೊರತುಪಡಿಸಿ ಅವರ ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಇದೇ ರೀತಿಯ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಧೋನಿ ಸ್ವಾರಸ್ಯಕರವಾಗಿ ಉತ್ತರಿಸಿದರು.
"ನಾನು ಅದರ ಬಗ್ಗೆ ಎಂದಿಗೂ ಯೋಚಿಸಿಲ್ಲ, ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ, ನಾನು ಇನ್ನೂ ಐಪಿಎಲ್ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂದು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ನಾನು ಖಚಿತವಾಗಿ ಭಾವಿಸುತ್ತೇನೆ, ನಾನು ಸೇನೆಯೊಂದಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ," ಎಂದು ಭಾರತೀಯ ಸೇನೆಯಲ್ಲಿ ಕರ್ನಲ್ ಸಹ ಆಗಿರುವ ಎಂಎಸ್ ಧೋನಿ ಹೇಳಿದ ವಿಡಿಯೋ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗೆ ಸಜ್ಜಾಗುತ್ತಿರುವಾಗ, ಎಂಎಸ್ ಧೋನಿಯ ಉತ್ತರಾಧಿಕಾರಿಯ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿದೆ.
ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು 2022ರಲ್ಲಿ ಸಿಎಸ್‌ಕೆ ನಾಯಕರಾಗಿ ಪ್ರಯತ್ನಿಸಲಾಯಿತು. ಆದರೆ ಅವೃತ್ತಿ ಮಧ್ಯದಲ್ಲಿ ಎಂಎಸ್ ಧೋನಿ ಅವರನ್ನು ಫ್ರಾಂಚೈಸಿ ನಾಯಕರಾಗಿ ಮರುನೇಮಿಸಬೇಕಾದ ಮಟ್ಟಿಗೆ ಕಾರ್ಯತಂತ್ರವು ವಿಫಲವಾಯಿತು.
ಸಿಎಸ್‌ಕೆ ತಂಡದ ನಾಯಕನಾಗಿ ರವೀಂದ್ರ ಜಡೇಜಾ ಮರಳುವುದು ಅಸಂಭವವಾದರೂ, ಸಿಎಸ್‌ಕೆ ಹೊಸ ನಾಯಕನ ಹುಡುಕಾಟವನ್ನು ಮುಂದುವರೆಸಿದೆ. ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಐಪಿಎಲ್ 2024ರ ಹರಾಜಿನಲ್ಲಿ ಎಂಎಸ್ ಧೋನಿ ಅವರ ಉತ್ತರಾಧಿಕಾರ ಯೋಜನೆ ಕುರಿತು ಕೇಳಿದಾಗ, ಅನಿರೀಕ್ಷಿತ ಪ್ರತಿಕ್ರಿಯೆಯನ್ನು ನೀಡಿದರು.
ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನ ಪತ್ರಿಕಾಗೋಷ್ಠಿಯಲ್ಲಿ ಸ್ಟೀಫನ್ ಫ್ಲೆಮಿಂಗ್ ಮಾತನಾಡಿ, ಕಳೆದ 10 ವರ್ಷಳ ಹಿಂದೆ ಎಂಎಸ್ ಧೋನಿಗಾಗಿ ಸಿಎಸ್‌ಕೆ ಉತ್ತರಾಧಿಕಾರಿ ಯೋಜನೆಗಳನ್ನು ಹೊಂದಿತ್ತು. ಆದರೆ ಅವರು ಎಂದಿನಂತೆ ಉತ್ಸಾಹದಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
"ನಾವು ಸುಮಾರು 10 ವರ್ಷಗಳಿಂದ ಎಂಎಸ್ ಧೋನಿಗಾಗಿ ಉತ್ತರಾಧಿಕಾರಿ ಯೋಜನೆಗಳನ್ನು ಹೊಂದಿದ್ದೇವೆ. ಆದರೆ ನಾನು ಅವರನ್ನು ಸ್ವಲ್ಪ ಸಮಯದವರೆಗೆ ನೋಡಿದಷ್ಟು ಕಾಲ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಉತ್ಸಾಹಭರಿತರಾಗಿದ್ದಾರೆ. ಆ ಉತ್ಸಾಹ ತಂಡ ಮತ್ತು ಫ್ರಾಂಚೈಸಿಗೆ ಇದ್ದರೂ, ನಾವು ಅವರೊಂದಿಗೆ ಮುಂದುವರಿಯುತ್ತೇವೆ," ಎಂದು ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯಿಸಿದರು.