For Quick Alerts
ALLOW NOTIFICATIONS  
For Daily Alerts

ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ರೂಪಾಯಿ ವಂಚಿಸಿದ ಸಹೋದರನ ಬಂಧಿಸಿದ ಮುಂಬೈ ಪೊಲೀಸ್

ಭಾರತ ತಂಡದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರಿಗೆ ವೈಯಕ್ತಿಕ ವ್ಯವಹಾರದಲ್ಲಿ ಸುಮಾರು 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರ ಮಲ-ಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಇತ್ತೀಚಿಗೆ ಬಂಧಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 37 ವರ್ಷದ ವೈಭವ್ ಪಾಂಡ್ಯ ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಿದ ಆರೋಪ ಹೊಂದಿದ್ದು, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ಭಾರೀ ನಷ್ಟವನ್ನುಂಟು ಮಾಡಿದರು.

Mumbai Police Arrests Hardik Pandya s Stepbrother Vaibhav Pandya on Charges of Cheating 4 3 Crore

ವೈಭವ್ ಪಾಂಡ್ಯ ವಿರುದ್ಧ ವಂಚನೆ ಮತ್ತು ನಕಲಿ ವ್ಯವಹಾರ ಆರೋಪವನ್ನು ಕ್ರಿಕೆಟಿಗ ಪಾಂಡ್ಯ ಸಹೋದರರು ಹೊರಿಸಿದ್ದಾರೆ ಎಂದು ಮುಂಬೈ ಪೊಲೀಸ್‌ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ವೈಭವ್ ಪಾಂಡ್ಯ ಮೂವರು ಸಹೋದರರು 2021ರಲ್ಲಿ ಪಾಲಿಮರ್ ಎಂಬ ವ್ಯವಹಾರವನ್ನು ಸ್ಥಾಪಿಸಿದರು.

ವ್ಯವಹಾರದ ನಿಯಮಗಳ ಪ್ರಕಾರ, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರು ತಲಾ 40 ಪ್ರತಿಶತದಷ್ಟು ಬಂಡವಾಳವನ್ನು ಹೂಡಿಕೆ ಮಾಡಿದ್ದರೆ, ವೈಭವ್ ಪಾಂಡ್ಯ 20 ಪ್ರತಿಶತದಷ್ಟು ಬಂಡವಾಳವನ್ನು ಹೂಡಿದ್ದರು.

ಆದಾಗ್ಯೂ, ವೈಭವ್ ಪಾಂಡ್ಯ ಆ ಬಳಿಕ ಕ್ರಿಕೆಟಿಗ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ತಿಳಿಸದೆ, ಷರತ್ತುಗಳನ್ನು ಉಲ್ಲಂಘಿಸಿ ಅದೇ ವ್ಯಾಪಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ.

2024ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. ಇಬ್ಬರೂ ಸಹೋದರರು ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಪರವಾಗಿ ಒಟ್ಟಿಗೆ ಆಡಿದ್ದಾರೆ.

Story first published: Thursday, April 11, 2024, 12:41 [IST]
Other articles published on Apr 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+