For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಕರ್ನಾಟಕದ ಎಂ.ಆರ್ ಪೂವಮ್ಮ

Nammura Pratibhe: Indian athlete M.R Poovamma life story and her achivement

ಇತ್ತೀಚಿನ ದಶಕದಲ್ಲಿ ಕರ್ನಾಟಕದಿಂದ ಬಂದ ಅಥ್ಲೆಟಿಕ್ಸ್‌ನಲ್ಲಿ ಖ್ಯಾತರಾದ ಕ್ರೀಡಾಪಟುಗಳಲ್ಲಿ ಎಂ. ಆರ್ ಪೂವಮ್ಮ ಕೂಡ ಒಬ್ಬರು. ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದುಕೊಂಡಿರುವ ಎಂ.ಆರ್ ಪೂವಮ್ಮ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತದ ಪರವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. 100 ಮೀ, 200 ಮೀ ಹಾಗೂ 400 ಮೋಟರ್ ಓಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸಿದ್ದು ಮಾತ್ರವಲ್ಲದೆ ಅನೇಕ ಪದಕಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಕರ್ನಾಟಕ ಕಂಡ ಅತ್ಯುತ್ತಮ ಅಥ್ಲೀಟ್‌ಗಳಲ್ಲಿ ಒಬ್ಬರಾಗಿರುವ ಎಂಆರ್ ಪೂವಮ್ಮ ಅವರ ಕ್ರೀಡಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಾತ್ರವಲ್ಲದೆ ಸಾವಿರಾರೂ ಯುವ ಅಥ್ಲೀಟ್‌ಗಳಿಗೆ ಪೂವಮ್ಮ ಪ್ರೇರಣೆಯಾಗಿದ್ದಾರೆ. ಈ ಶ್ರೇಷ್ಠ ಓಟಗಾರ್ತಿಯ ಸಾಧನೆಯ ಹಾದಿ ಹೇಗಿತ್ತು? ಅವರ ಸಾಧನೆಗಳೇನು? ಮೈಖೇಲ್ ಕನ್ನಡದ ಈ ವಿಶೇಷ ಮಾಲಿಕೆ ನಮ್ಮೂರ ಪ್ರತಿಭೆಯಲ್ಲಿ ವಿವರವಾಗಿ ನೋಡೋಣ.

ಕುಟುಂಬದಿಂದ ಪ್ರೋತ್ಸಾಹ

ಕುಟುಂಬದಿಂದ ಪ್ರೋತ್ಸಾಹ

ಎಂ.ಆರ್ ಪೂವಮ್ಮ ಹುಟ್ಟಿದ್ದು ಕೊಡಗಿನ ಗೋಣಿಕೊಪ್ಪಲಿನಲ್ಲಿ. ಆದರೆ ಅವರ ಬಹುತೇಕ ವಿದ್ಯಾಭ್ಯಾಸ ಹಾಗೂ ಕ್ರೀಡಾ ತರಬೇತಿ ಮಂಗಳೂರಿನಲ್ಲಿ ಆಯಿತು. ಎಂ.ಜಿ ರಾಜು ಹಾಗೂ ಶ್ರೀಮತಿ ಜಾಜಿ ದಂಪತಿಯ ಪುತ್ರಿ ಪೂವಮ್ಮ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರೆ. ತನ್ನಲ್ಲಿನ ಪ್ರತಿಭೆಯನ್ನು ಗಮನಿಸಿ ತಂದೆ ತಾಯಿ ಆರಂಭದಿಂದಲೇ ಪ್ರೋತ್ಸಾಹವನ್ನು ನೀಡಿದ ಕಾರಣದಿಂದಾಗಿ ಪೂವಮ್ಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣವಾಗಿದ್ದಾರೆ.

2005ರಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗಿ

2005ರಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗಿ

ಪೂವಮ್ಮ 2005ರಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಆರಂಭಿಸಿದ್ದಾರೆ. ಆರಂಭಿಕ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೂ ತಂದೆಯ ಸಂಬಳ ಹಾಗೂ ಪಡೆದ ಪ್ರಶಸ್ತಿಗಳ ಮೊತ್ತದಿಂದಲೇ ಹಣವನ್ನು ಹೊಂದಿಸಿಕೊಂಡು ತಮ್ಮ ಸಾಧನೆಗೆ ವೇದಿಕೆಯನ್ನು ರೂಪಿಸಿಕೊಂಡ ಸಾಧಕಿ ಎಂಆರ್ ಪೂವಮ್ಮ. ಆದರೆ ನಂತರ ಉತ್ತಮ ತರಬೇತಿ, ಸೌಲಭ್ಯ, ಆಧುನಿಕ ತಂತ್ರಜ್ಞಾನದ ನೆರವು ದೊರೆತಿದ್ದು ಅಥ್ಲೆಟಿಕ್ಸ್ ಫೆಡರೇಷನ್ ಕೂಡ ಬೆಂಬಲಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಸಾಧನೆಗಳು

ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಸಾಧನೆಗಳು

ಪೂವಮ್ಮ 100 ಮೀಟರ್, 200 ಮೀಟರ್ ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 4×400 ರಿಲೇ ಸ್ಪರ್ಧೆಯಲ್ಲಿ ಪೂವಮ್ಮ ಅತಿ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಈ ವಿಭಾಗದಲ್ಲಿ ಭಾರತಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ ಪೂವಮ್ಮ. 2014ರಲ್ಲಿ ದಕ್ಷಣ ಕೊರಿಯಾದ ಇಂಚೇನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಪೂವಮ್ಮ 4×400 ರಿಲೇಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರೆ ವೈಯಕ್ತಿಕ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು. ಅದಾದ ಬಳಿಕ 2018ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿಯೂ ಪೂವಮ್ಮ ಪ್ರತಿನಿಧಿಸಿದ ಭಾರತದ ರಿಲೇ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರೆ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪೂವಮ್ಮ

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪೂವಮ್ಮ

2008ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ಪೂವಮ್ಮ ಭಾರತವನ್ನು ಪ್ರತಿನಿಧಿಸಿದ ಸಾಧನೆ ಮಾಡಿದ್ದಾರೆ. ಆದರೆ 2012ರಲ್ಲಿ ಗಾಯದ ಕಾರಣದಿಂದಾಗಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಗಾಯದಿಂದ ಚೇತರಿಸಿಕೊಂಡ ಪೂವಮ್ಮ ಅನೇಕ ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಪೂವಮ್ಮ 2021ರ ಡಿಸೆಂಬರ್ 31ರಂದು ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳ ಅಥ್ಲೀಟ್ ಜತಿನ್ ಜೊತೆಗೆ ಪೂವಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Story first published: Monday, May 30, 2022, 15:52 [IST]
Other articles published on May 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+