ಕನ್ನಡಿಗ ಪ್ರಕಾಶ್ ನಂಜಪ್ಪ ಚಾಂಪಿಯನ್ ಆಫ್ ಚಾಂಪಿಯನ್
ಪುಣೆ, ಡಿ.19 : ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕ ಹಾಗೂ ಭಾರತಕ್ಕೆ ಕೀರ್ತಿ ತಂದ ಶೂಟರ್ ಪ್ರಕಾಶ್ ನಂಜಪ್ಪ ಅವರಿಗೆ ಚಾಂಪಿಯನ್ ಆಫ್ ಚಾಂಪಿಯನ್ ಎಂಬ ಕಿರೀಟ ತೊಡಿಸಲಾಗಿದೆ. 58ನೇ ರಾಷ್ಟ್ರೀಯ ಶೂಟಿಂಗ್ ಶೂಟಿಂಗ್ ಚಾಂಪಿಯನ್ ಶಿಪ್ ಗೆದ್ದ ಪ್ರಕಾಶ್ ಅವರಿಗೆ 50 ಸಾವಿರ ರು ನಗದು ನೀಡಿ ರಾಷ್ಟ್ರೀಯ ರೈಫಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್ ಆರ್ ಎಐ) ಗೌರವಿಸಿದೆ.
ಕಾಮನ್ವೆಲ್ತ್ ಕ್ರೀಡಾಕೂಟ 2014ರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ಹೆಮ್ಮೆಯ 38 ವರ್ಷದ ಪ್ರಕಾಶ್ ನಂಜಪ್ಪ ಅವರು ಒಟ್ಟು 198.2 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದಿದ್ದರು.

ಬೆಲ್ಸ್ ಪಾಲ್ಸಿ (ಒಂದು ಬಗೆಯ ಮೌಖಿಕ ಪಾರ್ಶ್ವವಾಯು) ಗೆ ತುತ್ತಾಗಿ ಕ್ರೀಡೆಯಿಂದ ಹೊರಗುಳಿದಿದ್ದ ಪ್ರಕಾಶ್ ಅವರು ಮತ್ತೊಮ್ಮೆ ಶೂಟಿಂಗ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೆನಡಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲ ಕಾಲ ದುಡಿದಿದ್ದ ಪ್ರಕಾಶ್ ಅವರು ಈಗ ಚಾಂಪಿಯನ್ ಆಫ್ ಚಾಂಪಿಯನ್.[ಕರ್ನಾಟಕದ ಹೆಮ್ಮೆಯ ಶೂಟರ್ ಪ್ರಕಾಶ್]
10 ಮೀಟರ್ ಮಹಿಳಾ ಪಿಸ್ತೂಲ್ ವಿಭಾಗದಲ್ಲಿ 199 ಅಂಕಗಳೊಂದಿಗೆ ಮಹಾರಾಷ್ಟ್ರದ ಶೀತಲ್ ಶಿವಾಜಿ ಥೋರಟ್ ಅವರು ಹೊಸ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂಜಾಬಿನ ಹರ್ವೀನ್ ಸರಾವೋ ಅವರು 197.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, ಉತ್ತರಾಖಂಡ್ ನ ಪ್ರೇರಣಾ ಗುಪ್ತಾ 173.9 ಅಂಕಗಳೊಂದಿಗೆ ಕಂಚಿನ ಪದಕ ಗಳಿಸಿದರು.
ಟೀಂ ಇವೆಂಟ್ ನಲ್ಲಿ ಸಿಆರ್ ಪಿಎಫ್ ನ ಪುಷ್ಪಾಂಜಲಿ ರಾಣಾ, ರಚನಾ ದೇವಿ ಹಾಗೂ ಸಾಕ್ಷಿ ದಾಗರ್ ಅವರು 1122 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರು. ಮಹಾರಾಷ್ಟ್ರ 1117 ಅಂಕಗಳೊಂದಿಗೆ ಬೆಳ್ಳಿ ಪದಕ ಗಳಿಸಿದರೆ, ಹರ್ಯಾಣ 1113 ಅಂಕ ಪಡೆದು ಕಂಚಿನ ಪದಕ ಗಳಿಸಿತು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications