For Quick Alerts
ALLOW NOTIFICATIONS  
For Daily Alerts

ಮೊದಲ ಎಸೆತದಲ್ಲೇ 88.39 ಮೀ. ಎಸೆದ ನೀರಜ್ ಚೋಪ್ರ: WAC ಫೈನಲ್‌ಗೆ ನೇರ ಪ್ರವೇಶ

Neeraj Chopra enters finals of World Athletics Championships javelin with first attempt

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರ ಮತ್ತೊಂದು ದೊಡ್ಡ ಸಾಧನೆ ಮಾಡುವ ಸನಿಹದಲ್ಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಾವು ಎಸೆದ ಮೊದಲ ಎಸೆತವನ್ನು 88.39 ಮೀಟರ್ ದೂರಕ್ಕೆ ಎಸೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆಯೇ ಫೈನಲ್‌ಗೇರಿದ್ದಾರೆ.

ಯುಎಸ್‌ಎಯಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಎಸೆತದ ಅರ್ಹತಾ ಸುತ್ತು ಹೇವಾರ್ಡ್ ಫೀಲ್ಡ್‌ನಲ್ಲಿ ನಡೆಯಿತು. ಅರ್ಹತಾ ಸುತ್ತಿನ ಗ್ರೂಪ್‌ ಎ ವಿಭಾಗದಲ್ಲಿ ಕಣಕ್ಕಿಳಿದ ನೀಜ್ ಚೋಪ್ರ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.39 ಮೀಟರ್‌ನಷ್ಟು ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆಯನ್ನು ಪಡೆಯಲು ಇರುವ 83.0 ಮೀಟರ್‌ಗಳ ಗುರಿಯಿಣತ ಬಹಳ ಮುಂದಿರುವ ಕಾರಣ ನೀರಜ್ ಮೊದಲ ಪ್ರಯತ್ನದಲ್ಲಿಯೇ ಫೈನಲ್ ಹಂತಕ್ಕೆ ಅರ್ಹತೆಯನ್ನು ಸಂಪಾದಿಸಿಕೊಂಡರು.

ಕುತೂಹಲಕಾರಿ ಸಂಗತಿಯೆಂದರೆ ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಮೊದಲ ಪ್ರಯತ್ನದಲ್ಲಿಯೇ ನೀರಜ್ ಫೈನಲ್ ಹಂತಕ್ಕೇರಿದ್ದರು. ಅಂದು ನೀರಜ್ ಚೋಪ್ರ 86.50 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಈ ಸಾಧನೆ ಮಾಡಿದ್ದರು. ಈ ಬಾರಿ ಅದನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.

ನೀರಜ್ ಚೋಪ್ರ 88.39 ಮೀ ಎಸೆಯುವ ಮೂಲಕ ಜೂನ್‌ನಲ್ಲಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ದೂರ ಎಸೆದು ರಾಷ್ಟ್ರೀಯ ದಾಖಲೆಯ ಸಾಧನೆಗಿಂತ ಒಂದು ಮೀಟರ್‌ಗಿಂತಲೂ ಕಡಿಮೆ ದೂರ ಎಸೆದಂತಾಗಿದೆ. ಇದು ನೀರಜ್ ಮೇಲೆ ಮತ್ತಷ್ಟು ಭರವಸೆ ಮೂಡಿಸಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೇವಲ ಇಬ್ಬರು ಜಾವೆಲಿನ್ ಎಸೆತಗಾರರು ಮಾತ್ರವೇ ನೇರವಾಗಿ ಫೈನಲ್ ಹಂತಕ್ಕೆ ಅರ್ಹತೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜೇಕಬ್ ವೆಡ್ಲೇಜ್ 85.23 ಮೀಟರ್ ದೂರಕ್ಕೆ ಎಸೆಯುವ ಮೂಲಕ ಫೈನಲ್ ಹಂತಕ್ಕೆ ನೇರವಾಗಿ ಪ್ರವೇಶ ಪಡೆದ ಎರಡನೇ ಅಥ್ಲೀಟ್ ಎನಿಸಿದ್ದಾರೆ. ಇನ್ನು ಈ ಸುತ್ತಿನಲ್ಲಿ ಕೇವಲ ಮೂರು ಅಥ್ಲೀಟ್‌ಗಳು ಮಾತ್ರವೇ 80 ಮೀಟರ್‌ಗಿಂತ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ ಎಂಬುದು ಗಮನಾರ್ಹ. ಈ ಮೂಲಕ ಭಾರತದ ಕ್ರೀಡಾಪಡು ನೀರಜ್ ಚೋಪ್ರ ಅವರ ಪರಿಶ್ರಮ ಅರಿವಿಗೆ ಬರುತ್ತದೆ.

Story first published: Friday, July 22, 2022, 10:54 [IST]
Other articles published on Jul 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+