Neeraj Chopra: ಮುಂದಿನ ಗುರಿಯ ಬಗ್ಗೆ ತುಟಿ ಬಿಚ್ಚಿರುವ ನೀರಜ್ ಚೋಪ್ರಾ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಮುಂಬರುವ ಕನಸಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರು ಈ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪೋಡಿಯಂ ಏರುವುದೇ ಕನಸಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ.
ನೀರಜ್ ಚೋಪ್ರಾ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್‌ನ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ನೀರಜ್ ಎರಡು ದೊಡ್ಡ ಈವೆಂಟ್‌ಗಳಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಇನ್ನು ಎರಡು ಒಲಿಂಪಿಕ್ಸ್ ಪದಕ ಹೊಂದಿರುವ ನೀರಜ್, ಎರಡು ಡೈಮಂಡ್ ಲೀಗ್ ಪದಕವನ್ನು ಸಹ ಹೊಂದಿದ್ದಾರೆ. ನೀರಜ್ ಸದ್ಯ ಬಿಡುವಿನ ಸಮಯವನ್ನು ಕಳೆಯುತ್ತಿದ್ದಾರೆ.

ಹರಿಯಾಣದ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕಮೊಂಡಿದ್ದ ಮಿಷನ್ ಒಲಿಂಪಿಕ್ಸ್ 2036 ಸಮ್ಮೇಳದಲ್ಲಿ ಭಾಗವಹಿಸಿದ್ದರು. ಅಲ್ಲದೆ ಇದೇ ವೇಳೆ ಮಾತನಾಡಿರುವ ಅವರು, ನನ್ನ ಸೀಸನ್ ಈಗ ಮುಗಿದಿದೆ. ಮುಂದಿನ ವರ್ಷದ ಬಹುದೊಡ್ಡ ಗುರಿ ವಿಶ್ವ ಚಾಂಪಿಯನ್‌ಶಿಪ್ ಎಂದಿದ್ದಾರೆ. ಅಲ್ಲದೆ ಆ ದೊಡ್ಡ ಟೂರ್ನಿಗಾಗಿ ಈಗಿನಿಂದಲೇ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಫಿಟ್ನೆಸ್‌ನತ್ತ ಗಮನ
ನೀರಜ್ ಚೋಪ್ರಾ ಪ್ರಸಕ್ತ ವರ್ಷ ಸ್ನಾಯು ಸೆಳೆತದ ಸಮಸ್ಯೆಯ ವಿರುದ್ಧ ಹೋರಾಡಿದ್ದರು. ಇವರ ಗಾಯದ ಸಮಸ್ಯೆ ನೇರವಾಗಿ ಆಟದ ಮೇಲೆ ಬಿದ್ದಿರುವುದು ಎದ್ದು ಕಂಡಿತು. ಡೈಮಂಡ್ ಲೀಗ್ ಫೈನಲ್ ವೇಳೆ ಅವರು ಎಡಗೈಗೆ ಗಾಯ ಮಾಡಿಕೊಂಡಿದ್ದರು. ಈ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆಯಾ ಎಂಬ ಬಗ್ಗೆ ವೈದ್ಯರೊಂದಿಗೆ ನೀರಜ್ ಚೋಪ್ರಾ ಸಮಾಲೋಚ ನಡೆಸಿದ್ದಾರೆ. ಫಿಟ್ನೆಸ್ ಸುಧಾರಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನೀರಜ್ ತಿಳಿಸಿದ್ದಾರೆ.

ಈ ವರ್ಷ ಗಾಯದ ಸಮಸ್ಯೆ ನನಗೆ ಬಹುವಾಗಿ ಕಾಡಿದೆ. ಮುಂದಿನ ಸೀಜನ್‌ಗೆ ನಾನು ಸಂಪೂರ್ಣ ಫಿಟ್ ಆಗುತ್ತೇನೆ. ಕೆಲವು ಸಮಸ್ಯೆಗಳು ಇದ್ದು, ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ನಾನು ನನ್ನ ಅಭ್ಯಾಸವನ್ನು ನನ್ನದೇ ದೇಶದಲ್ಲಿ ಮಾಡಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ನೀರಜ್ ಚೋಪ್ರಾ ಅವರು ಮುಂದಿನ ಸೀಜನ್‌ನಲ್ಲಿ ತಾವು 90 ಮೀಟರ್ ಮಾರ್ಕ್ ಮುಟ್ಟಲು ಸಿದ್ಧರಾಗಿರುವುದಾಗಿ ಪರೋಕ್ಷವಾಗಿ ತಿಳಿಸಿದಂತಿದೆ.
ನೀರಜ್ ಸಾಧನೆ
ನೀರಜ್ ಚೋಪ್ರಾ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಡಬಲ್ ಪದಕ ಗೆದ್ದ ಭಾರತದ ಮೊದಲ ಟ್ರ್ಯಾಕ್ ಆಂಡ್ ಫೀಲ್ಡ್ ಸಾಧಕ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಬಂಗಾರದ ಸಾಧನೆ ಮಾಡಿದರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಬೆಳ್ಳಿ ಸಾಧನೆ ಮಾಡಿದ್ದಾರೆ. ಇನ್ನು ವಿಶ್ವ ಚಾಂಪಿಯನ್ ಶಿಪ್ ಫೈನಲ್ ಬಂಗಾರ ಹಾಗೂ ಬೆಳ್ಳಿ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications