Diamond League 2025: ನೀರಜ್ ಚೋಪ್ರಾ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ
ಭಾರತದ ಸ್ಟಾರ್ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಅವರು ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ 2025ರ ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಅರ್ಹತೆ ಪಡೆದಿದ್ದಾರೆ. ಇವರು ಶನಿವಾರ ನಡೆದ ಸಿಲೇಸಿಯಾ ಲೆಗ್‌ನಲ್ಲಿ ಭಾಗವಹಿಸಿರಲಿಲ್ಲ. ಆದರೆ ನೀರಜ್ ಈ ಮೊದಲು 2 ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ 15 ಅಂಕಗಳನ್ಉ ಕಲೆ ಹಾಕಿ ಬೀಗಿದ್ದರು. ಶನಿವಾರದ ಲೀಗ್ ನಂತರ ಬಿಡುಗಡೆ ಆದ ಫೈನಲ್ ಪಟ್ಟಿಯಲ್ಲಿ ನೀರಜ್ ಚೋಪ್ರಾ ಅವರಿಗೆ ಸ್ಥಾನ ಲಭಿಸಿದೆ.
ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ನಲ್ಲಿ ಆಗಸ್ಟ್ 27 ಮತ್ತು 28 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ನೀರಜ್ ಚೋಪ್ರಾ ಈ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇನ್ನು ಡೈಮಂಡ್ ಲೀಗ್ ಪ್ರಶಸ್ತಿ ಸುತ್ತಿನ ಪಂದ್ಯ ಅಗಸ್ಟ್ 28 ರಂದು ನಡೆಯಲಿದೆ. ಹಾಲಿ ವಿಶ್ವ ಚಾಂಪಿಯನ್ ಭಾರತದ ನೀರಜ್ ಚೋಪ್ರಾ ಡೈಮಂಡ್ ಲೀಗ್ 2024ರಲ್ಲಿ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದರು. ಇವರು ಜಾವೆಲಿನ್ 88.16 ಮೀಟರ್ ಎಸೆದು ಪದಕ ಸಾಧನೆ ಮಾಡಿದ್ದಾರೆ.

ಭಾರತದ ನೀರಜ್ ಚೋಪ್ರಾ ದೋಹಾದಲ್ಲಿ ನಡೆದ ಟೂರ್ನಿಯಲ್ಲಿ ವೃತ್ತಿಜೀವನದ ಅಮೋಘ ಪ್ರದರ್ಶನ ನೀಡಿದ್ದರು. ಇವರು ಈ ಟೂರ್ನಿಯಲ್ಲಿ 90.23 ಮೀಟರ್ ಎಸೆದರು. ಆದರೆ ಈ ಲೀಗ್‌ನ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ವಿಫಲರಾಗಿದ್ದರು. ಜರ್ಮನಿಯ ಜೂಲಿಯನ್ ವೆಬರ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ 17 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ನೇರವಾಗಿ ಡೈಮಂಡ್ ಲೀಗ್‌ಗೆ ಅರ್ಹತೆ ಪಡೆದಿದ್ದಾರೆ.ಇನ್ನು ನೀರಜ್ ಚೋಪ್ರಾ, ಜೂಲಿಯನ್ ವೆಬರ್ 15 ಅಂಕಗಳೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ನೀರಜ್ ಚೋಪ್ರಾ 2022ರಲ್ಲಿ ಡೈಮಂಡ್ ಲೀಗ್ ಪ್ರಶಸ್ತಿ ಪಡೆದು ಬೀಗಿದ್ದರು. ಇನ್ನು 2023 ಹಾಗೂ 2024ರಲ್ಲಿ ಇವರು ರನ್ನರ್ ಅಪ್ ಸ್ಥಾನ ಪಡೆದಿದ್ದರು.
ನೀರಜ್ ಸಾಧನೆ
ಭಾರತದ ಸ್ಟಾರ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದ ನೀರಜ್, ಪ್ಯಾರಿಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು. ಅಲ್ಲದೆ ವಿಶ್ವ ಟೂರ್ನಿಯ ಫೈನಲ್‌ನಲ್ಲಿ ಇವರು 2023ರಲ್ಲಿ ಬಂಗಾರ, 2022ರಲ್ಲಿ ಬೆಳ್ಳಿ ಪದಕದ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications