ಭಾರತ ವಿಶ್ವಕಪ್ ತಂಡಕ್ಕೆ ಪರಿಸರ ಪ್ರೇಮದ ಜರ್ಸಿ
ಮೆಲ್ಬೋರ್ನ್, ಜ.15: ಮುಂದಿನ ವಿಶ್ವಕಪ್ ಗೆ ಭಾರತೀಯ ಆಟಗಾರರು ಹೊಸ ಜರ್ಸಿಯೊಂದಿಗೆ ಮಿಂಚಲಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಜತೆಗಿನ ತ್ರೀಕೋನ ಸರಣಿಯನ್ನು ಇದೇ ಜರ್ಸಿಯಲ್ಲಿ ಆಡಲಿದ್ದಾರೆ.
ಭಾರತದ ಆಟಗಾರರು ಗುರುವಾರ ಮೆಲ್ಬೋರ್ನ್ ನಲ್ಲಿ ನೈಕ್ ಪ್ರಾಯೋಜಕತ್ವದ ಜೆರ್ಸಿ ತೊಟ್ಟು ಪ್ರದರ್ಶಿಸಿದರು. ಅಲ್ಲದೇ ನೈಕ್ ಕಂಪನಿ ಆಟಗಾರರಿಗೆ ಕಿಟ್ ಕೂಡಾ ಕೊಡಮಾಡಿದೆ.[ಐಸಿಸಿ ವಿಶ್ವಕಪ್ 2015: ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಕಿಟ್ ನ್ನು ಸಂಪೂರ್ಣವಾಗಿ ಪರಿಸರ ಕಾಳಜಿ ಇಟ್ಟುಕೊಂಡು ತಯಾರಿಸಲಾಗಿದೆ. ಆಟಗಾರರಿಗೆ ಉತ್ತಮ ವಾತಾವರಣ ಕಲ್ಪಿಸುವುದರ ಜತೆಗೆ ಆಹ್ಲಾದದಾಯಕವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ಎದೆಯ ಮೇಲಿರುವ ಅಶೋಕ ಚಕ್ರದ ಚಿಹ್ನೆ ಹೊಸ ಸ್ಫೂರ್ತಿಯನ್ನು ತುಂಬಲಿದೆ. ಇದನ್ನು ತೊಟ್ಟು ಆಡಲಿಳಿದರೆ ನಿಜವಾಗಿಯೂ ದೇಶಪ್ರೇಮ ಜತೆಯಲ್ಲೇ ಸಾಗುವುದು ಎಂದು ನಾಯಕ ಎಂ ಎಸ್ ಧೋನಿ ಹೇಳಿದ್ದಾರೆ.
ಒಬ್ಬ ಆಟಗಾರ ಫಿಟ್ ಆಗಿದ್ದು ಆಡಲಿಳಿಯಬೇಕಾದರೆ ಇಂಥ ಜರ್ಸಿ ಧರಿಸಬೇಕು. ಇದು ಆತನಲ್ಲಿ ಮತ್ತಷ್ಟು ಉತ್ಸಾಹ ತರುತ್ತದೆ. ಇದನ್ನು ಧರಿಸಿ ವಿಶ್ವಕಪ್ ಆಡಲು ಸಂತಸವಾಗುತ್ತಿದೆ. ಇಂಥ ಜರ್ಸಿ ನೀಡಿದ ನೈಕ್ ಕಂಪನಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಹೇಳಿದರು.[ವಿಶ್ವಕಪ್ 2015: ಕದನಕ್ಕಿಳಿಯುವ 14 ತಂಡಗಳ ವಿವರ]
ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ಧರಿಸಿ ಆಡುವುದೇ ವಿನೂತನ ಅನುಭವ, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಿದ್ದು ಎಂಬುದೇ ಇದಕ್ಕೆ ಸಾಕ್ಷಿ ಎಂದು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications