Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾರ್ವೆ ಚೆಸ್: ವಿಶ್ವ ಚಾಂಪಿಯನ್ ಕಾರ್ಲ್‌ಸನ್ ಮಣಿಸಿ ಅಗ್ರಸ್ಥಾನಕ್ಕೇರಿದ ವಿಶ್ವನಾಥನ್ ಆನಂದ್

Norway Chess: Viswanathan Anand won against World Champion Magnus Carlsen To Go Top

ಭಾರತದ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದ್ದಾರೆ. ಐದನೇ ಸುತ್ತಿನಲ್ಲಿ ನಡೆದ ಈ ಸೆಣೆಸಾಟದಲ್ಲಿ ಭಾರತದ ವಿಶ್ವನಾಥನ್ ಆನಂದ್ ವಿಶ್ವಚಾಂಪಿಯನ್ ಕಾರ್ಲ್ಸ್‌ಸನ್ ಅವರನ್ನು ಮಣಿಸುವ ಮೂಲಕ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆನಂದ್ ಮತ್ತು ಕಾರ್ಲ್‌ಸನ್ ನಡುವಿನ ಈ ಪಂದ್ಯ ವಿಶ್ವದ ಚೆಸ್ ಪ್ರೇಮಿಗಳಿಗೆ ರೋಮಾಂಚಕ ಅನುಭವ ನೀಡಿದೆ. ಇಬ್ಬರು ದಿಗ್ಗಜರ ಮುಖಾಮುಖಿ ದೊಡ್ಡ ಮಟ್ಟದ ಕದನಕ್ಕೆ ಸಾಕ್ಷಿಯಾಯಿತು. ಸಾಮಾನ್ಯ ಮುಖಾಮುಖಿ 40 ನಡೆಗಳಲ್ಲಿ ಡ್ರಾದಲ್ಲಿ ಅಂತ್ಯವಾದ ಬಳಿಕ ಥ್ರಿಲ್ಲರ್ ಆರ್ಮಗೆಡನ್‌ನಲ್ಲಿ ವಿಶ್ವನಾಥನ್ ಆನಂದ್ ರೋಚಕ ಜಯ ಸಾಧಿಸಿದರು. 50 ನಡೆಗಳಲ್ಲಿ ವಿಶ್ವನಾಥನ್ ಆನಂದ್ ಈ ಆರ್ಮಗೆಡನ್‌ನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.

ನಾರ್ವೆಯ ಈ ಚೆಸ್ ಟೂರ್ನಿಯಲ್ಲಿ ಎದುರಾಳಿಗಳ ವಿರುದ್ಧ ಭರ್ಜರಿ ಜಯ ಸಾಧಿಸಿದ ಆನಂದ್ 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ. ಮತ್ತೊಂದೆಡೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆನಂದ್ ವಿರುದ್ಧ ಸೋಲು ಅನುಭವಿಸಿದರೂ ಕೇವಲ 0.5 ಅಂಕ ಹಿಂದಿದ್ದಾರೆ. ನಾರ್ವೆಯ ಸ್ಟಾರ್ ಚೆಸ್ ಗ್ರ್ಯಾಂಡ್‌ಮಾಸ್ಟರ್ 9.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ದಿಗ್ಗಜ ಚೆಸ್ ಪಟು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಮೊದಲ ಮೂರು ಸುತ್ತುಗಳಲ್ಲಿ ಅಜೇಯವಾಗುಳಿದಿದ್ದರು. ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ವಿರುದ್ಧ ಮೊದಲ ಸುತ್ತಿನಲ್ಲಿ ಗೆದ್ದಿದ್ದ ಆನಂದ್ ಎರಡನೇ ಸುತ್ತಿನಲ್ಲಿ ಬಲ್ಗೇರಿಯಾದ ವೆಸೆಲಿನ್ ಟೋಪಾಲೋವ್ ಅವರನ್ನು ಮಣಿಸಿದರು. ಮೂರನೇ ಸುತ್ತಿನಲ್ಲಿ ಚೀನಾದ ಹಾವೋ ವಾಂಗ್ ವಿರುದ್ಧವೂ ಆನಂದ್ ಗೆದ್ದು ಬೀಗಿದ್ದರು. ಆದರೆ ನಾಲ್ಕನೇ ಸುತ್ತಿನಲ್ಲಿ ವಿಶ್ವನಾಥನ್ ಆನಂದ್ ಅಮೆರಿಕಾದ ವೆಸ್ಲಿ ಸೋ ವಿರುದ್ಧ ಸೋಲು ಅನುಭವಿಸಿದರು. ಇದೀಗ ಈ ಸೋಲಿನ ಬಳಿಕ ವಿಶ್ವ ಚಾಂಪಿಯನ್ ವಿರುದ್ಧ ಗೆದ್ದು ಬೀಗಿದ್ದಾರೆ.

ನಾರ್ವೆಯ ಈ ಚೆಸ್ ಟೂರ್ನಿಯಲ್ಲಿ ಇನ್ನೂ ನಾಲ್ಕು ಸುತ್ತಿನ ಪಂದ್ಯಗಳು ಬಾಕಿ ಇವೆ. ಆನಂದ್ ಮತ್ತು ಕಾರ್ಲ್‌ಸನ್ ಟೂರ್ನಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಮೂರನೇದಲ್ಲಿ ಸ್ಥಾನವನ್ನು ಅಮೆರಿಕಾದ ವೆಸ್ಲಿ ಸೋ ಹಾಗೂ ಅಜರ್ಬೈಜಾನ್‌ನ ಶಕ್ರಿಯಾ ಮಮೆಡಿಯರೊವ್ ಜಂಟಿಯಾಗಿದ್ದಾರೆ.

Story first published: Monday, June 6, 2022, 16:26 [IST]
Other articles published on Jun 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+