Novak Djokovic: "ನನ್ನ ವಿರುದ್ಧ ನಡೆದಿತ್ತು...." ಶಾಕಿಂಗ್ ಸಂಗತಿ ಬಿಚ್ಚಿಟ್ಟ ಟೆನಿಸ್ ಸ್ಟಾರ್
ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾನ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಸಕಲ ಸಿದ್ಧತೆಗಳು ನಡೆದಿವೆ. ಇದೇ ವೇಳೆ ನೋವಾಕ್ ಜೋಕೊವಿಚ್ ನೀಡಿರುವ ಒಂದು ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ನೋವಾಕ್ ಆಶ್ಚರ್ಯಕರ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಹಾಗಿದ್ದರೆ ನೋವಾಕ್ ಹೇಳಿದ್ದಾದ್ರು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆಸ್ಟ್ರೇಲಿಯಾದಲ್ಲಿ 2022 ರಲ್ಲಿ ನಡೆದ ಘಟನೆಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಜೋಕೊ ಹೇಳುವ ಪ್ರಕಾರ ಅವರಿಗೆ ಆಹಾರದಲ್ಲಿ ವಿಷ ಸೇರಿಸಿ ನೀಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಭಾರೀ ಚರ್ಚೆಗಳು ನಡೆದಿದೆ.

ಆಗ ಆಗಿದ್ದೇನು?
ಅದು ಕೋವಿಡ್-19 ಸಮಯ ಈ ಸಮಯದಲ್ಲಿ ಎಲ್ಲರಿಗೂ ಲಸಿಕೆ ಪಡೆಯುವುದನ್ನು ಆಸ್ಟ್ರೇಲಿಯಾ ಕಡ್ಡಾಯ ಪಡಿಸಿತ್ತು. ಆಗಲೇ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳು ಸಹ ನಡೆದಿದ್ದವು. ಲಸಿಕೆ ಪಡೆಯದ ಕಾರಣ ಇವರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶವನ್ನು ನೀಡಲಾಗಲಿಲ್ಲ. ಅಲ್ಲದೆ ತಪ್ಪು ಮಾಹಿತಿ ನೀಡಿದ ಆರೋಪ ಸಹ ಇವರ ಮೇಲಿತ್ತು. ಈ ವೇಳೆ ಇವರನ್ನು ಮೆಲ್ಬೋರ್ನ್‌ನಲ್ಲಿ ಬಂಧಿಸಲಾಗಿತ್ತು. ನಾಲ್ಕು ದಿನಗಳ ಕಾಲ ಹೊಟೇಲ್‌ನಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಜೋಕೋ ನಿಯತಕಾಲಿಕೆ ಜಿಕ್ಯೂಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಲಸಿಕೆ ಪಡೆಯಲು ನಿರಾಕರಣೆ
ಆಗ ಕೋವಿಡ್ 19 ಮಹಾಮಾರಿ ಎಲ್ಲೆಡೆ ಭಾರೀ ಸದ್ದು ಮಾಡಿತ್ತು. ಅಲ್ಲದೆ ಜನರ ಜೀವನದ ಜೊತೆ ಚೆಲ್ಲಾಟವನ್ನು ಆಡಿತ್ತು. ಹೀಗಾಗಿ ಆಸ್ಟ್ರೇಲಿಯಾ ಟೆನಿಸ್ ಆಟಗಾರರಿಗೆ ಲಸಿಕೆ ಪಡೆಯುವುದನ್ನು ಕಡ್ಡಾಯ ಗೊಳಿಸಿತ್ತು. ಒಂದು ವೇಳೆ ಲಸಿಕೆ ಪಡೆಯದ ಆಟಗಾರರನಿಗೆ ಟೂರ್ನಿಯಲ್ಲಿ ಆಡುವ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಆದರೆ ನೋವಾಕ್ ಜೋಕೊವಿಚ್ ಮಾತ್ರ ಕೋವಿಡ್-19 ಲಸಿಕೆ ಪಡೆದರೆ, ಅದು ತಮ್ಮ ಕ್ರೀಡಾ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿ ಲಸಿಕೆ ಪಡೆದಿರಲಿಲ್ಲ. ಇದೇ ಕಾರಣಕ್ಕೆ ಆಯೋಜಕರು ಇವರಿಗೆ ಮೈದಾನಕ್ಕೆ ಇಳಿಯದಂತೆ ಸೂಚಿಸಿದರು. ಅಲ್ಲದೆ ಆಸ್ಟ್ರೇಲಿಯಾದ ಗಡಿ ಪಡೆ ನಾಲ್ಕು ದಿನಗಳ ಕಾಲ ಇವರನ್ನು ಬಂಧನದಲ್ಲಿಟ್ಟಿತ್ತು.
ಮೈದಾನಕ್ಕೆ ಇಳಿಯದೇ ತವರಿಗೆ ವಾಪಸ್
ತಮ್ಮನ್ನು ಬಂಧಿಸಿದ್ದ ಬಗ್ಗೆ ಜೋಕೊವಿಚ್ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಜೊಕೊವಿಚ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ನಂತರ ಜೊಕೊವಿಕ್ ತಮ್ಮ ಪ್ರಯಾಣದ ಇತಿಹಾಸ ಮತ್ತು ಕರೋನಾ ಸೋಂಕಿಗೆ ಒಳಗಾಗಿರುವ ಅಂಶವನ್ನು ಮರೆಮಾಚಿದ್ದಾರೆ ಎಂದು ತಿಳಿದುಬಂದಿತ್ತು. ಕೊರೊನಾ ಸೊಂಕಿಗೆ ಒಳಗಾದರೂ ಜೋಕೊ ಸಂದರ್ಶನ ನೀಡಿದ್ದರು. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಇವರ ವೀಸಾವನ್ನು ರದ್ದುಗೊಳಿಸಲಾಯಿತು. ಮತ್ತು ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡದೆ ಹಿಂತಿರುಗಬೇಕಾಯಿತು.
ತವರಿನಲ್ಲಿ ಪರೀಕ್ಷೆಯ ವೇಳೆ ಬಹಿರಂಗ
24 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಅವರು ಸೆರ್ಬಿಯಾಕ್ಕೆ ಹಿಂದಿರುಗಿದ ನಂತರ ಪರೀಕ್ಷೆಗೆ ಒಳಗಾದಾಗ ವಿಷಕಾರಿ ವಸ್ತು ಸೇವಿಸಿರುವುದು ಕಂಡುಬಂದಿದೆ ಎಂದು ನೋವಾಕ್ ಜೋಕೊವಿಚ್ ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಸದ್ಯ ಭಾರೀ ಚರ್ಚೆ ಮಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications