ನವೆಂಬರ್ 17: ವಿಶ್ವಕಪ್ ಫೈನಲ್‌ಗೆ ಭರದ ಸಿದ್ಧತೆ; ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ಸಾಕ್ಷಿ: ಕ್ರೀಡಾ ಲೋಕದ ಇಂದಿನ ಸುದ್ದಿ
* ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಗ್ರ್ಯಾಂಡ್ ಫೈನಲ್‌ನ ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ದೈನಿಕ್ ಜಾಗರಣ್ ವರದಿಯ ಪ್ರಕಾರ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಕ್ರಿಕೆಟ್‌ನ ಅತಿದೊಡ್ಡ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ಅಹಮದಾಬಾದ್‌ನ ಕ್ರಿಕೆಟ್ ಸ್ಟೇಡಿಯಮ್‌ಗೆ ನರೇಂದ್ರ ಮೋದಿ ಹೆಸರು ಇಡಲಾಗಿದ್ದು, 1.30 ಲಕ್ಷ ಪ್ರೇಕ್ಷಕರ ಆಸನ ಹೊಂದಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.
* "ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ಸಂಪೂರ್ಣವಾಗಿ ವಿಭಿನ್ನ ಆಟಗಾರರು. ರೋಹಿತ್ ತಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಿದರೆ, ತಮ್ಮ ವೃತ್ತಿಜೀವನವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು," ಎಂದು ಹೇಳಿದರು. 2019 ಮತ್ತು 2023ರ ಏಕದಿನ ವಿಶ್ವಕಪ್‌ಗಳಲ್ಲಿ ಸತತ ಎರಡು ಬಾರಿ 500ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ ಆಗಿದ್ದಾರೆ. "ರೋಹಿತ್ ಮತ್ತು ವಿರಾಟ್ ಸಂಪೂರ್ಣವಾಗಿ ವಿಭಿನ್ನ ಆಟಗಾರರು. ವಿರಾಟ್ ಅತ್ಯಂತ ಫಿಟ್, ರೋಹಿತ್ ಪ್ರತಿಭಾವಂತ. ಇಬ್ಬರೂ ಅದ್ಭುತವಾಗಿದ್ದಾರೆ. ರೋಹಿತ್ ತಮ್ಮ ಫಿಟ್‌ನೆಸ್‌ನಲ್ಲಿ ಶ್ರಮಿಸಿದರೆ, ಅವರು ಇನ್ನೂ ಐದು ವರ್ಷಗಳ ಕಾಲ ಆಡಬಹುದು," ಎಂದು ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಅಭಿಪ್ರಾಯಪಟ್ಟರು.

* ತವರಿನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಮೊಹಮ್ಮದ್ ಶಮಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಲೀಗ್ ಹಂತದ ಪಂದ್ಯಗಳ ಮೊದಲಾರ್ಧವನ್ನು ತಪ್ಪಿಸಿಕೊಂಡಿದ್ದರೂ, ನಂತರದ ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಭಾರತ ತಂಡ ಫೈನಲ್‌ಗೆ ಪ್ರಯಾಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
* ಸೆಮಿಫೈನಲ್ ನೋಡಲು ತೀರಾ ಸಿಂಪಲ್ ಆಗಿ ಬಂದ ಅನುಷ್ಕಾ ಶರ್ಮಾ ಧರಿಸಿದ ಈ ಕೋ-ಆರ್ಡರ್ ಸೆಟ್ ಬೆಲೆಯ ಬಗ್ಗೆ ಹೇಳುವುದಾದರೆ, ಇದು ಬರೋಬ್ಬರಿ 27,500 ರೂಪಾಯಿ. ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶರ್ಮಾ ತನ್ನ ಎರಡನೇ ಮಗುವಿಗೆ ತಾಯಿ ಆಗುವ ಸಂತಸದಲ್ಲಿದ್ದಾರೆ. ನಟಿಯ ವಿಡಿಯೋ ಕೂಡ ವೈರಲ್ ಆಗಿದೆ. ಇದರಲ್ಲಿ ಆಕೆ ತನ್ನ ಬೇಬಿ ಬಂಪ್ ಅನ್ನು ದುಪಟ್ಟಾದಿಂದ ಮರೆಮಾಡಿರುವುದು ಕಂಡುಬಂದಿದೆ. ಈ ವಿಡಿಯೋ ಟೀಮ್ ಇಂಡಿಯಾದ ದೀಪಾವಳಿ ಪಾರ್ಟಿಯ ವೇಳೆ ಕಂಡು ಬಂದಿದೆ. ಇದರಲ್ಲಿ ನಟಿ ತನ್ನ ಪತಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡಿದ್ದಾಳೆ.
* 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಭಾರತೀಯ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಅತ್ಯಂತ ಪ್ರಭಾವಶಾಲಿ ಆಟಗಾರ ಎಂದು ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ. "ಈ ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ನನ್ನ ಪಾಲಿಗೆ ದೊಡ್ಡ ಗೇಮ್ ಚೇಂಜರ್ ಆಗಿದ್ದಾರೆ ಎಂದು ಭಾವಿಸುತ್ತಾನೆ. ಅವರು ಗಾಯಗೊಂಡಿದ್ದರು ಮತ್ತು ತಮ್ಮ ಸ್ಥಾನಕ್ಕಾಗಿ ಹೋರಾಡಬೇಕಾಯಿತು. ಸೆಮಿಸ್‌ನಲ್ಲಿ 70 ಎಸೆತಗಳಲ್ಲಿ ಶತಕ ಗಳಿಸುವುದು ಅತ್ಯುತ್ತಮವಾಗಿದೆ. ಮ್ಯಾಕ್ಸ್‌ವೆಲ್ ಮತ್ತು ಝಂಪಾ ಬೌಲ್ ಮಾಡುವಾಗ ಅವರು ಫೈನಲ್‌ನಲ್ಲಿ ಭಾರತ ತಂಡಕ್ಕೆ ಪ್ರಮುಖರಾಗುತ್ತಾರೆ," ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
* ಭಾರತೀಯರ ಪಾಲಿಗೆ ದೊಡ್ಡ ಹಬ್ಬವೆಂದೇ ಕರಿಸಿಕೊಳ್ಳುವ ದೀಪಾವಳಿ ಈಗ ತಾನೇ ಮುಗಿದಿದೆ. ಆದರೆ. ಭಾರತದ ಜನರ ದೀಪಾವಳಿ ಮೂಡ್ ಇನ್ನೂ ಹಾಗೆ ಇದೆ. ಈ ಮೂಡ್ ಇದೇ ಭಾನುವಾರ ನಡೆಯುವ ವಿಶ್ವಕಪ್ ಫೈನಲ್‌ನಲ್ಲಿ ದ್ವಿಗುಣಗಳಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ದೇಶವಾಸಿಗಳು ಮನೆಯಲ್ಲಿ ದೀಪಾವಳಿ ಆಚರಿಸಿ ಆಗಿದೆ. ಇದೇ ಭಾನುವಾರದಂದು ಮತ್ತೊಮ್ಮೆ ಎಲ್ಲರೂ ಕೂಡಿ ದೀಪವಾಳಿ ಆಚರಣೆಗೆ ಮೆರಗು ತುಂಬಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅತ್ತ ವಿಶ್ವಕಪ್ ಫೈನಲ್ ನಡೆಯಲಿರುವ ಅಹಮದಾಬಾದ್ ಸಿಟಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
* ವಿಶ್ವಕಪ್ ಟೂರ್ನಿಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆಗಳಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಆಯ್ಕೆ ಮಂಡಳಿಯ ಮುಖ್ಯಸ್ಥನನ್ನಾಗಿ ಮಾಜಿ ಕ್ರಿಕೆಟಿಗ ವಾಹಬ್ ರಿಯಾಜ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೇಮಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ.
* ಐಸಿಸಿ ಶುಕ್ರವಾರ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಅಂಫೈರ್‌ಗಳು ಹಾಗೂ ಮ್ಯಾಚ್ ರೆಫ್ರಿಯನ್ನು ಬಹಿಂಗಪಡಿಸಿದೆ. ರಿಚರ್ಡ್ ಕೆಟಲ್‌ಬೊರೊ, ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯೆಲ್ ವಿಲ್ಸನ್ ಈ ಪಂದ್ಯವನ್ನು ಸಂಪೂರ್ಣವಾಗಿ ನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಆಂಡಿ ಪಿಕ್ರಾಫ್ಟ್ ಈ ಫೈನಲ್ ಪಂದ್ಯದ ರೆಫ್ರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications