For Quick Alerts
ALLOW NOTIFICATIONS  
For Daily Alerts

ನವೆಂಬರ್ 21: ಪಂಕಜ್ ಅಡ್ವಾಣಿ ಐತಿಹಾಸಿಕ ಸಾಧನೆ; ಆಸಿಸ್ ವಿರುದ್ಧ ಟಿ20 ಸರಣಿಗೆ SKY ನಾಯಕ: ಕ್ರೀಡಾ ಲೋಕದ ಇಂದಿನ ಸುದ್ದಿ

* ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಹಲವು ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ, ಟಿ20 ತಂಡವು ತಾಜಾ ಮುಖಗಳನ್ನು ಹೊಂದಿದೆ.

* ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.

November 21, what happened in sports World: Todays Top sports news and headlines

* ವಿಶ್ವಕಪ್ ಪಂದ್ಯಾವಳಿಯ ಮುಕ್ತಾಯದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆಗಾರರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಅವರನ್ನು ಮತ್ತೊಮ್ಮೆ ಕೈಬಿಡಲಾಗಿದೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಸ್ಪಿನ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಯುಜ್ವೇಂದ್ರ ಚಹಾಲ್ ತಮ್ಮ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ.

* ಆತಿಥೇಯ ಭಾರತ ವಿರುದ್ಧ ನವೆಂಬರ್ 23ರಿಂದ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ತಪ್ಪಿಸಿಕೊಳ್ಳಲಿದ್ದು, ಇದೀಗ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ 535 ರನ್‌ಗಳನ್ನು ಗಳಿಸಿದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಶಕ್ತಿಯಾಗಿದ್ದರು.

* ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಮಡೀಸ್ ತಂಡವು ಡಿಸೆಂಬರ್ 3 ಮತ್ತು 6ರಂದು ಆಂಟಿಗುವಾದಲ್ಲಿ ಮತ್ತು ಡಿಸೆಂಬರ್ 9ರಂದು ಬಾರ್ಬಡೋಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ವಿರುದ್ಧದ ವೆಸ್ಟ್ ಇಂಡೀಸ್ ಏಕದಿನ ತಂಡ
ಶಾಯ್ ಹೋಪ್ (ನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಶೇನ್ ಡೌರಿಚ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮಿಯರ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಗುಡಾಕೇಶ್ ಮೋಟಿ, ಕ್ಜೋರ್ನ್ ಒಟ್ಲಿ, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಓಶೇನ್ ಥಾಮಸ್.

* ಭಾರತದಲ್ಲಿ ನಡೆದ ಅದ್ಭುತ ವಿಶ್ವಕಪ್ ನಂತರ 'ವಿವೇಕ ಮತ್ತು ಘನತೆ' ಮುಖ್ಯ ಎಂದು ಒತ್ತಿಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿ, ಆಟಗಾರರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಟ್ರೋಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. "ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುವ ವರದಿಗಳು ಸಂಪೂರ್ಣವಾಗಿ ಕೆಟ್ಟ ಅಭಿರುಚಿಯಿಂದ ಕೂಡಿವೆ. ನಾವು ಉತ್ತಮವಾಗಿ ಆಡಿದ್ದೇವೆ, ಆದರೆ ಆಸ್ಟ್ರೇಲಿಯಾ ತಂಡದ ಉತ್ತಮ ಕ್ರಿಕೆಟ್‌ಗೆ ಫೈನಲ್‌ನಲ್ಲಿ ಸೋತಿದ್ದೇವೆ, ಅಷ್ಟೇ. ಆಟಗಾರರು ಮತ್ತು ಅವರ ಕುಟುಂಬಗಳನ್ನು ಏಕೆ ಟ್ರೋಲ್ ಮಾಡಬೇಕು? ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಇಂತಹ ವರ್ತನೆಯನ್ನು ನಿಲ್ಲಿಸಬೇಕೆಂದು ವಿನಂತಿಸುತ್ತೇನೆ. ವಿವೇಕ ಮತ್ತು ಘನತೆ ಹೆಚ್ಚು ಮುಖ್ಯ," ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ 34 ವರ್ಷದ ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾಗಿರುವ ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿರುವ ಊರ್ಮಿಳಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೇರ್ ಟೇಕರ್ ಆಗಿದ್ದಾರೆ. ಉರ್ಮಿಳಾ ರೊಸಾರಿಯೋ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗದ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸ್ತವ್ಯವಾಗಿದ್ದರು. ಉರ್ಮಿಳಾ ಅವರ ಜನನವಾಗಿದ್ದು ಕೂಡಾ ಕತಾರ್‌ನಲ್ಲಿಯೇ. ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ, ಮೊದಲು ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದರು.

* ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಉಮರ್ ಗುಲ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೇಗದ ಬೌಲಿಂಗ್ ಕೋಚ್ ಆಗಿ ನೇಮಿಸಿದ್ದು ಸಯೀದ್ ಅಜ್ಮಲ್ ಅವರನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಮುಂದಿನ ಡಿಸೆಂಬರ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಈ ಇಬ್ಬರು ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಿಸಿಬಿ ಮಾಹಿತಿ ನೀಡಿದೆ.

* ಏಕದಿನ ವಿಶ್ವಕಪ್ ಟೂರ್ನಿ ಅಂತ್ಯವಾಗಿದ್ದು ಭಾರತ ತಂಡ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಆಘಾತದಲ್ಲಿದೆ. ಇದರ ಬೆನ್ನಲ್ಲೇ ಇದೀಗ ಭಾರತ ತಂಡಕ್ಕೆ ಮುಂದಿನ ಆರು ತಿಂಗಳಿನ ಅಂತರದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಯಾರಿ ಆರಂಭಿಸುವ ಸಂದರ್ಭವೂ ಇದೆ. ವಿಶ್ವಕಪ್ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಸಜ್ಜಾಗಿದ್ದು ಸೂರ್ಯಕುಮಾರ್ ನೇತೃತ್ವದ ಭಾರತ ತಂಡವನ್ನು ಈಗಾಗಲೇ ಹೆಸರಿಸಲಾಗಿದೆ. ನವೆಂಬರ್ 23ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಈ ಸರಣಿ ಆರಂಭವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸರಣಿಯ ಕೊನೆಯ ಪಂದ್ಯ ಆಯೋಜನೆಯಾಗಲಿದೆ.

* ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವ ಆಟಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 'ಟೀಮ್ ಆಫ್ ದಿ ಟೂರ್ನಮಂಟ್' ಹೆಸರಿಸಿದ್ದಾರೆ. ಈ ತಂಡದಲ್ಲಿ ಭಾರತದ ಐವರು ಕ್ರಿಕೆಟಿಗರು ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

* ಭಾರತದ ಕ್ಯೂಯೆಸ್ಟ್ ಪಂಕಜ್ ಅಡ್ವಾಣಿ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ದಾಖಲೆಯ 26ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ದೋಹಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಸೌರವ್ ಕೊಥಾರಿ ಅವರನ್ನು ಮಣಿಸುವ ಮೂಲಕ ಈ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಕೌಲಲಾಂಪುರದಲ್ಲಿ ನಡೆದ ಪಂದ್ಯದ ಪುನರಾವರ್ತನೆಯಂತೆ ಕಂಡು ಬಂದ ಈ ಫೈನಲ್ ಸೆಣೆಸಾಟದಲ್ಲಿ ಸೌರವ್ ಕೊಥಾರಿ ವಿರುದ್ಧ ಪಂಕಜ್ ಅಡ್ವಾಣಿ 1000-416 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಾಖಲೆಯ 26ನೇ ಬಾರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

* ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ ನಡೆಗೆ ಅಲಾನ್ ಬಾರ್ಡರ್ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ನಾಯಕನೊಬ್ಬ ಮಾಡಿದ ಅತ್ಯಂತ ಧೈರ್ಯಶಾಲಿ ನಿರ್ಧಾರ ಅದು ಎಂದು ಕೊಂಡಾಡಿದ್ದಾರೆ ಅಲಾನ್ ಬಾರ್ಡರ್. ಟಾಸ್ ಸಂದರ್ಭದಲ್ಲಿ ಕಮ್ಮಿನ್ಸ್ ತಗೆದುಕೊಂಡ ನಿರ್ಧಾರ ಆರಂಭದಲ್ಲಿ ಬಹುತೇಕರನ್ನು ಅಚ್ಚರಿಗೆ ದೂಡಿತ್ತು. ಆಸಿಸ್ ಪರ ಅನೇಕ ಕ್ರಿಕೆಟಿಗರು ಈ ನಿರ್ಧಾರಕ್ಕೆ ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಈ ನಿರ್ಧಾರವೇ ಪಂದ್ಯದ ಮಾಸ್ಟಸ್ಟ್ರೋಕ್ ಎಂದು ಪ್ರಶಂಸಿಸಲ್ಪಡುತ್ತಿದೆ.

Story first published: Tuesday, November 21, 2023, 23:50 [IST]
Other articles published on Nov 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+