ನವೆಂಬರ್ 22: ಕೆಕೆಆರ್‌ಗೆ ಮರಳಿದ ಗೌತಿ; ಮತ್ತೆ ನಂಬರ್ 1 ಪಟ್ಟದ ಸನಿಹ ಕೊಹ್ಲಿ: ಕ್ರೀಡಾ ಲೋಕದ ಇಂದಿನ ಸುದ್ದಿ
* ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟ್ರಾವಿಡ್ ಹೆಡ್ ನೀಡಿರುವ ಈ ಪ್ರದರ್ಶನವನ್ನು ಉಲ್ಲೇಖಿಸಿ ಮೈಕಲ್ ವಾನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂದಿನ ಐಪಿಎಲ್ ಆವೃತ್ತಿಗಾಗಿ ನಡೆಯಲಿರುವ ಹರಾಜಿನಲ್ಲಿ ಟ್ರಾವಿಸ್ ಹೆಡ್ ಅವರೊಗೆ ದೊಡ್ಡ ಮೊತ್ತಕ್ಕೆ ಹರಾಜಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. "ಆಸ್ಟ್ರೇಲಿಯಾದ ಬೌಲರ್‌ಗಳೆಲ್ಲಾ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇನ್ನು ಅವರು ಫೀಲ್ಡಿಂಗ್‌ನಲ್ಲಿಯೂ ಅಮೋಘ. ರೋಹಿತ್ ಶರ್ಮಾ ಅವರ ಕ್ಯಾಚನ್ನು ಪಡೆಯುವ ಮೂಲಕ ಟ್ರಾವಿಸ್ ಹೆಡ್ ಅದಕ್ಕೆ ಮುನ್ನುಡಿ ಬರೆದರು. ಅದುವೇ ಪಂದ್ಯದ ದೊಡ್ಡ ಸಂದರ್ಭ. ಬಳಿಕ ಅವರು ಬ್ಯಾಟಿಂಗ್‌ನಲ್ಲಿ ವಿಶೇಷ ಇನ್ನಿಂಗ್ಸ್ ಆಡಿದರು. ವಿಶ್ವಕಪ್‌ನಂಥಾ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವುದು ಬಹಳ ವಿಶೇಷ" ಎಂದಿದ್ದಾರೆ ಮೈಕಲ್ ವಾನ್.
* ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ನಾಯಕನನ್ನಾಗಿ ನೇಮಕ ಮಾಡಿದ ಬಳಿಕ ಅನುಭವಿ ಆಟಗಾರ ಆರ್ ಅಶ್ವಿನ್ ಅಭಿನಂದನೆ ಸಲ್ಲಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಸೂರ್ಯಕುಮಾರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. "ಅಭಿನಂದನೆಗಳು ಸೂರ್ಯಕುಮಾರ್ ಯಾದವ್. ಮುನ್ನುಗ್ಗು ಗೆಳೆಯ" ಎಂದು ಬರೆದುಕೊಂಡಿದ್ದಾರೆ. ಅದರ ಜೊತೆಗೆ "ದೇಶವನ್ನು ಮುನ್ನಡೆಸುವುದು ದೊಡ್ಡ ಗೌರವ" ಎಂದು ಕೂಡ ಬರೆದುಕೊಂಡಿದ್ದಾರೆ.

* ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಆವೃತ್ತಿಯ ಮೂಲಕವೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಕಾಣಿಸುತ್ತಿದೆ. ವಿಶ್ವಕಪ್ ಟೂರ್ನಿಯನ್ನು ಬಹುತೇಕ ಕಳೆದುಕೊಂಡ ಬಳಿಕ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಹಾರ್ದಿಕ್ ಪಾಂಡ್ಯ ಹೊರಗುಳಿಯಲಿದ್ದಾರೆ. ಆದರೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಸಿದ್ಧವಾಗುವ ಸಾಧ್ಯತೆಯಿದ್ದರೂ ಅವರಿಗೆ ಮತ್ತಷ್ಟು ಕಾಲಾವಕಾಶ ನೀಡಿ ಚೇತರಿಕೆಗೆ ಹಾಗೂ ರಿಹ್ಯಾಬ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ.
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿದ್ದ ನಾಯಕ ಗೌತಮ್ ಗಂಭಿರ್ ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೌತಮ್ ಗಂಭೀರ್ ಆ ತಂಡವನ್ನು ತೊರೆದಿದ್ದಾರೆ. ಇದೀಗ ಅವರು ಮರಳಿ ಕೆಕೆಆರ್ ಫ್ರಾಂಚೈಸಿಯನ್ನು ಸೇರಿಕೊಂಡಿದ್ದು 2024ರ ಐಪಿಎಲ್ ಟೂರ್ನಿಗೆ ತಂಡದ ಮೆಂಟರ್ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. 2012ರಲ್ಲಿ ಮತ್ತು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಒಟ್ಟವನ್ನು ಅಲಂಕರಿಸಿತ್ತು. ಆದರೆ ಅದಾದ ಬಳಿಕ ಕೆಕೆಆರ್ ತಂಡದಿಂದ ಆ ಸಾಧನೆ ಸಾಧ್ಯವಾಗಿಲ್ಲ. ಇದೀಗ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಮೆಂಟರ್ ಆಗಿ ತಂಡವನ್ನು ಮತ್ತೆ ಕಟ್ಟುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.
* ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸ್ತುತ 36ರ ಹರೆಯದಲ್ಲಿದ್ದಾರೆ. ಹೀಗಾಗಿ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೂತನ ನಾಯಕ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ವೈಟ್‌ಬಾಲ್ ಮಾದರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
* ನೂತನವಾಗಿ ಬಿಡುಗಡೆಯಾಗಿರುವ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದು ಫೈನಲ್‌ನಲ್ಲಿ ಅರ್ಧ ಶತಕ ಸಿಡಿಸದ್ದರು. ಈ ಮೂಲಕ ಭಾರೀ ಏರಿಕೆ ಕಂಡಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಮೊದಲ ಎರಡು ಸ್ಥಾನಗಳಲ್ಲಿರುವ ಶುಬ್ಮನ್ ಗಿಲ್ ಹಾಗೂ ಪಾಕಿಸ್ತಾನದ ಬಾಬರ್ ಅಜಂ ಸ್ಥಾನಕ್ಕೆ ಮತ್ತಷ್ಟು ಸನಿಹದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುಡ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಕ್ವಿಂಟನ್ ಡಿಕಾಕ್ ಅವರನ್ನು ಹಿಂದಿಕ್ಕಿ ಟಾಪ್ 4ಗೆ ಲಗ್ಗೆಯಿಟ್ಟಿದ್ದಾರೆ ರೋಹಿತ್ ಶರ್ಮಾ.
* ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೆಣೆಸಾಡಿದ್ದ ಈ ಎರಡು ತಂಡಗಳು ಇದೀಗ ಚುಟುಕು ಮಾದರಿಯಲ್ಲಿ ಕದನಕ್ಕಿಳಿದಿರುವುದು ಕುತೂಹಲ ಮೂಡಿಸಿದೆ. ಯುವ ಆಟಗಾರರನ್ನೇ ಒಳಗೊಂಡಿರುವ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದರೆ ಆಸ್ಟ್ರೇಲಿಯಾ ತಂಡ ಕೂಡ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದು ಮ್ಯಾಥ್ಯೂ ವೇಡ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications