Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನವೆಂಬರ್ 3: ನಾಲ್ಕನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ; ಶನಿವಾರ ನಡೆಯಲಿದೆ ಡಬಲ್ ಹೆಡ್ಡರ್: ಕ್ರೀಡಾ ಲೋಕದ ಇಂದಿನ ಸುದ್ದಿ

* ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಮುಂದುವರಿದಿದೆ. ನೆದರ್ಲೆಂಡ್ಸ್ ವಿರುದ್ಧವೂ ಅದ್ಭುತ ಪ್ರದರ್ಶನ ನೀಡಿರುವ ಅಫ್ಘನ್ ಪಡೆ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಅಬ್ಬರಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿರುವ ಅಫ್ಘನ್ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

* ಈ ವಿಶ್ವಕಪ್ ಟೂರ್ನಿಯ 35ನೇ ಪಂದ್ಯ ಶನಿವಾರ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಗೆಲುವು ಎರಡು ತಂಡಗಳಿಗೂ ಮಹತ್ವದ್ದಾಗಲಿದೆ. ಸೆಮಿಫೈನಲ್ಗೇರುವ ಸ್ಪರ್ಧೆಯಲ್ಲಿ ಪಾಕಿಸ್ತಾನ ತಂಡ ಮುಂದುವರಿಯಬೇಕಿದ್ದರೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದ್ದು ನ್ಯೂಜಿಲೆಂಡ್‌ಗೂ ಈ ಗೆಲುವು ನಿರ್ಣಾಯಕವೆನಿಸಿದೆ.

November 3, what happened in sports World: Todays Top sports news and headlines

* ಅಂದಹಾಗೆ ಶುಕ್ರವಾರ ಬೆಂಗಳೂರು ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಸಂಜೆ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಪಂದ್ಯ ನಡೆಯುವ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಕವರ್‌ನಿಂದ ಮುಚ್ಚಲಾಗಿತ್ತು. ಹೀಗಾಗಿ ಪಂದ್ಯದ ದಿನವಾದ ಶನಿವಾರವೂ ಮಳೆ ಸುರಿಯುವ ಆತಂಕವಿದ್ದು ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಎನ್ನುವ ಪ್ರಶ್ನೆ ಉಂಟಾಗಿದೆ.

* ವಿಶ್ವಕಪ್‌ನಲ್ಲಿ ಶನಿವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದ್ದು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು ಟೂರ್ನಿಯ 36ನೇ ಪಂದ್ಯ ಇದಾಗಿರಲಿದೆ. ಸೆಮಿಫೈನಲ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಅಂಕಪಟ್ಟೊಯಲ್ಲಿ ಕೊನೆಯಲ್ಲಿರುವ ಇಂಗ್ಲೆಂಡ್ ಸವಾಲೊಡ್ಡಲಿದೆ.

* 2024ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೂ ಮುನ್ನ ನಡೆಯುತ್ತಿರುವ ಟ್ರೇಡಿಂಗ್ ವಿಂಡೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದಿಂದ ರೊಮಾರಿಯೊ ಶೆಫರ್ಡ್ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ವ್ಯಾಪಾರ ಮಾಡಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳನ್ನು ಪ್ರತಿನಿಧಿಸುವ 4 ಐಪಿಎಲ್ ಪಂದ್ಯಗಳನ್ನು ಆಡಿರುವ ರೊಮಾರಿಯೋ ಶೆಫರ್ಡ್, ಅಸ್ತಿತ್ವದಲ್ಲಿರುವ 50 ಲಕ್ಷ ರೂಪಾಯಿ ಶುಲ್ಕಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಾಪಾರ ಮಾಡಲಾಯಿತು.

* ಮುಂದಿನ ವರ್ಷ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದ್ದು ಈ ವಿಶ್ವಕಪ್‌ಗೆ ನೇಪಾಳ ಹಾಗೂ ಒಮಾನ್ ತಂಡಗಳು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಏಷ್ಯಾ ಭಾಗದ ಅರ್ಹತಾಸುತ್ತಿನ ಸ್ಪರ್ಧೆಯಲ್ಲಿ ನೇಪಾಳ ಹಾಗೂ ಒಮಾನ್ ತಂಡಗಳು ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.

* ಶನಿವಾರ, ನವೆಂಬರ್ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವೇಗದ ಬೌಲರ್ ಮ್ಯಾಟ್ ಹೆನ್ರಿ ಗಾಯದಿಂದ ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದು, ಇದು ಕಿವೀಸ್ ತಂಡಕ್ಕೆ ದೊಡ್ಡ ಆಘಾತವಾಗಿದೆ.

* ಭಾರತ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಇತಿಹಾಸದ ಮೊದಲ ಪವರ್‌ಪ್ಲೇನಲ್ಲಿ ಮೂರನೇ ಅತಿ ಕಡಿಮೆ ರನ್‌ ದಾಖಲಿಸಿತು. ಭಾರತ ತಂಡದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಧ್ವಂಸಕ ದಾಳಿಗೆ ಸಿಕ್ಕಿ ನಲುಗಿದ ಶ್ರೀಲಂಕಾ ತಂಡವು ಮೊದಲ 10 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 14 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೆಟ್ಟ ದಾಖಲೆ ಬರೆದಿದೆ.

* ಗೋವಾದ ಫಟೋರ್ಡಾದ ಬಹುಪಯೋಗಿ ಮೈದಾನದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನ್ನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪುರುಷರ ಡಬಲ್ಸ್ ತಂಡ ಮತ್ತು ಮಿಶ್ರ ಡಬಲ್ಸ್ ತಂಡ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್ ಹಂತ ಪ್ರವೇಶಿಸಿದೆ. ಮೊದಲಿಗೆ ಎಸ್‌ಡಿ ಪ್ರಜ್ವಲ್ ದೇವ್ ಮತ್ತು ಆದಿಲ್ ಕಲ್ಯಾಣಪುರ ಜೋಡಿಯು ಗೋವಾದ ಜೋಡಿ ಕ್ರಿಸ್ಟೋಫರ್ ಮಾರ್ಕ್ವಿಸ್ ಮತ್ತು ತೇಜಸ್ ಶೆವ್ಡೆ ಅವರನ್ನು 6-2, 6-1 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

Story first published: Friday, November 3, 2023, 23:45 [IST]
Other articles published on Nov 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+