* ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಗೆ ನವೆಂಬರ್ 5 ಜನ್ಮದಿನದ ಸಂಭ್ರಮ. ಈ ಬಾರಿ ಅವರು ತಮ್ಮ 35ನೇ ಹುಟ್ಟುಹಬ್ಬವನ್ನು ಶತಕದೊಂದಿಗೆ ಗೆಲುವಿನ ಮೂಲಕ ಆಚರಿಸಿಕೊಂಡರು. ನವೆಂಬರ್ 5ರಂದು ಭಾರತವು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿಯಿತು. ಕಳೆದ ಕೆಲವು ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಶತಕದ ಅಂಚಿನಲ್ಲಿ ಎಡವಿದ್ದರು. ಭಾನುವಾರ ಅವರಿಗೆ ಶಕತ ಬಾರಿಸುವ ಅವಕಾಶ ಲಭಿಸಿತು. ಹುಟ್ಟುಹಬ್ಬದಂದು ಶತಕ ಸಿಡಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
* "ವಿರಾಟ್ ಕೊಹ್ಲಿ ಅವರ ಈವರೆಗಿನ ವೃತ್ತಿ ಜೀವನ ನಿಜಕ್ಕೂ ಅದ್ಭುತ. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ಬಹುತೇಕ 60ರ ಸನಿಹದಲ್ಲಿ ಅವರ ಸರಾಸರಿ ಇರುವುದು ಹಾಸ್ಯಾಸ್ಪದ. ಆತ 90ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬಲಿಷ್ಠ ವಾಗಿ ಮುನ್ನುಗ್ಗುತ್ತಾರೆ. ಸಂಪೂರ್ಣ 50 ಓವರ್ ಆಡುವವರೆಗೂ ಆತನಲ್ಲಿ ರನ್ ದಾಹ ಇರುವುದನ್ನು ನೀವು ಕಾಣಬಹುದು" ಎಂದಿದ್ದಾರೆ ಅನಿಲ್ ಕುಂಬ್ಳೆ.

* ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ವಿರಾಟ್ ವೃತ್ತಿ ಬದುಕಿನ 49ನೇ ಏಕದಿನ ಶತಕ. ಏಕದಿನ ಮಾದರಿಯಲ್ಲಿ ವಿರಾಟ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಶತಕ ಬಾರಿಸಿದಾಗ ಟೀಮ್ ಇಂಡಿಯಾ ಶೇಕಡಾ 83 ರಷ್ಟು ಪಂದ್ಯಗಳನ್ನು ಗೆದ್ದಿದ್ದು, ಸಚಿನ್ ಶತಕ ಬಾರಿಸಿದಾಗ ಭಾರತ ಶೇಕಡಾ 67 ರಷ್ಟು ಪಂದ್ಯದಲ್ಲಿ ಜಯ ಸಾಧಿಸಿದೆ.
* ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಸ್ವಾರ್ಥಿ ಎಂದು ಟೀಕಿಸಿದವರಿಕೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕಟುವಾಗಿ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿ ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸನ್ನು ನನಸಾಗಿಸುವಷ್ಟು ಸಾರ್ಥಿ ಎಂದಿದ್ದಾರೆ ವೆಂಕಟೇಶ್ ಪ್ರಸಾದ್. ಜೊತೆಗೆ ಸಾಕಷ್ಟು ಶ್ರೇಷ್ಠ ಸಾಧನೆಗಳನ್ನು ಮಾಡಿದ ಹೊರತಾಗಿಯೂ ಮತ್ತಷ್ಟು ಸಾಧನೆಗಳನ್ನು ಮಾಡುವಷ್ಟು ಹಪಹಪಿಯಿರುವಷ್ಟು ಸಾರ್ಥಿ ಎಂದು ಕೊಹ್ಲಿ ಬಗ್ಗೆ ಸುಂದರವಾಗಿ ಬರೆದುಕೊಂಡಿದ್ದಾರೆ.
* "ವಿರಾಟ್ ಕೊಹ್ಲಿ ಸ್ವಾರ್ಥಿ ಮತ್ತು ವೈಯಕ್ತಿಕ ಮೈಲಿಗಲ್ಲುಗಳ ಮೇಲೆ ಮೋಹ ಹೊಂದಿದ್ದಾರೆ ಎನ್ನುವ ತಮಾಷೆಯ ವಾದಗಳನ್ನು ಕೇಳಿಸಿಕೊಂಡಿದ್ದೇನೆ. ಹೌದು.. ಕೊಹ್ಲಿ ಸ್ವಾರ್ಥಿ, ಕೋಟ್ಯಂತರ ಜನರ ಕನಸನ್ನು ನನಸಾಗಿಸುವಷ್ಟು ಸ್ವಾರ್ಥಿ, ಅದ್ಭುತ ಸಾಧನೆಗಳ ನಂತರವೂ ಮತ್ತಷ್ಟು ಶ್ರೇಷ್ಠ ಸಾಧನೆಗಾಗಿ ಶ್ರಮಿಸುವಷ್ಟು ಸ್ವಾರ್ಥಿ, ಹೊಸ ಬೆಂಚ್ ಮಾರ್ಕ್‌ಗಳನ್ನು ನಿರ್ಮಿಸುವಷ್ಟು ಸ್ವಾರ್ಥಿ, ತನ್ನ ತಂಡಕ್ಕೆ ಗೆಲುವು ಖಚಿತಪಡಿಸುವಷ್ಟು ಸ್ವಾರ್ಥಿ. ಹೌದು, ಕೊಹ್ಲಿ ಸ್ವಾರ್ಥಿ.." ಎಂದು ಬರೆದುಕೊಂಡಿದ್ದಾರೆ.
* ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾಗ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರನ್ನು ಮೆಸೆಂಜರ್ ಆಗಿ ಮೈದಾನಕ್ಕೆ ಕಳುಹಿಸಿದರು. ಇಶಾನ್ ಡ್ರಿಂಕ್ಸ್ ತೆಗೆದುಕೊಂಡು, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಬಹಳ ಹೊತ್ತು ಮಾತನಾಡುತ್ತಿದ್ದರು. ಇದಾದ ತಕ್ಷಣ ಮೈದಾನಕ್ಕೆ ತೆರಳಿದ ಇಶಾನ್ ಕೊಹ್ಲಿ ಮತ್ತು ಅಯ್ಯರ್ಗೆ ನಾಯಕ ಮತ್ತು ಕೋಚ್ ಸಂದೇಶವನ್ನು ನೀಡಿದರು.
* ಶ್ರೀಲಂಕಾ ಕ್ರೀಡಾ ಸಚಿವರು ಲಂಕಾ ಕ್ರಿಕೆಟ್ ಮಂಡಳಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದು ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಭಾರತದ ವಿರುದ್ಧದ ಭಾರೀ ಸೋಲಿನ ಬಳಿಕ ಕಳೆದ ಶುಕ್ರವಾರ ಲಂಕಾ ಮಂಡಳಿಯ ವಿರುದ್ಧ ಹರಿಹಾಯ್ದಿದ್ದ ಲಂಕಾ ಕ್ರೀಡಾ ಸಚಿವ ರೋಷನ್ ರಣಸಿಂಘೆ ಮಂಡಳಿಯ ಪದಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದು ಮಂಡಳಿಯ ಸದಸ್ಯರೆಲ್ಲರೂ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.
* ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ, ಹರಿಣ ಪಡೆ ವಿರುದ್ಧ ತಮ್ಮ 49ನೇ ಏಕದಿನ ಶತಕವನ್ನು ಸಿಡಿಸಿದರು. ಇದೀಗ ಭಾರತದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮರುದಿನವೇ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಏಕೆಂದರೆ, ಭಾರತ ತಂಡದ ಉಳಿದ ಆಟಗಾರರಿಗಿಂತ ಮೊದಲು ತಮ್ಮ ಮುಂದಿನ ಪಂದ್ಯಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
* ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಸ್ಪಿನ್ ಬೌಲರ್ ಕೇಶವ್ ಮಹರಾಜ್ ಭಾರತದ ವಿರುದ್ಧ ಅನುಭವಿಸಿದ ಸೋಲನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡದ ಹುಳುಕನ್ನು ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದ್ದು ಅದನ್ನು ಸರಿಪಡಿಸಿಕೊಂಡು ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ. "ನನ್ನ ಪ್ರಕಾರ ಇದು ಉತ್ತಮವಾದ ಸಿದ್ಧತೆ ಎಂದು ಕೊಳ್ಳುತ್ತೇನೆ. ಸೆಮಿಫೈನಲ್ ಹಂತದಲ್ಲಿ ಉತ್ತಮವಾದ ಪ್ರದರ್ಶನ ನೀಡಲು ಇದು ಸಹಕಾರಿಯಾಗಲಿದೆ. ನಾವು ಯಾವೆಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಿದೆ ಎನ್ನುವುದನ್ನು ಇದರಿಂದ ಅರಿತುಕೊಳ್ಳಬಹುದು" ಎಂದಿದ್ದಾರೆ ಕೇಶವ್ ಮಹರಾಜ್.
*ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಿರ್ಣಾಯಕ ಪಂದ್ಯ ಆಯೋಜನೆಯಾಗಲಿದೆ. ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಎರಡು ತಂಡಗಳಾದ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಕೆಲ ಬಲಿಷ್ಠ ತಂಡಗಳಿಗೆ ಸೋಲುಣಿಸಿರುವ ಅಫ್ಘಾನಿಸ್ತಾನ ತಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾಗೂ ತಿರುಗೇಟು ನೀಡುವ ಹುಮ್ಮಸ್ಸಿನಲ್ಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಗೆದ್ದು ಸೆಮಿ ಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಅಫ್ಘಾನಿಸ್ತಾನ ತಂಡಕ್ಕೆ ಅಂತಿಮ ಎರಡು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಸೆಮಿಫೈನಲ್ ಅವಕಾಶ ಖಚಿತವಾಗಲಿದ್ದು ಅದಕ್ಕಾಗಿ ತನ್ನ ಸರ್ವ ಪ್ರಯತ್ನ ನಡೆಸಲಿದೆ. ಹೀಗಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಎರಡು ತಂಡಗಳ ಮಧ್ಯೆ ಸಾಕಷ್ಟು ಜಿದ್ದಾಜಿದ್ದಿನ ಕದನ ನಡೆಯುವ ನಿರೀಕ್ಷೆಯಿದೆ.