* ನವದೆಹಲಿಯಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳ ನಡುವಿನ 38ನೇ ಪಂದ್ಯವು ವಿವಾದದ ಕೇಂದ್ರ ಬಿಂದುವಾಗಿತ್ತು. ಏಕೆಂದರೆ, ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ನವೆಂಬರ್ 6ರಂದು 'ಟೈಮ್ ಔಟ್' ಮೂಲಕ ವಿಕೆಟ್ ಒಪ್ಪಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
* ಇದೀಗ ಸಾಮಾಜಿಕ ಜಾಲತಾಣದಲ್ಲಿ ಮ್ಯಾಥ್ಯೂಸ್ ತಾನು ಟೈಮ್‌ಡ್ ಔಟ್ ಆಗಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯೊಂದನ್ನು ನೀಡಿದ್ದಾರೆ. ಎಕ್ಸ್‌ನಲ್ಲಿ ಫೋಟೊವನ್ನು ಪೋಸ್ಟ್ ಮಾಡಿರುವ ಮ್ಯಾಥ್ಯೂಸ್ ಇದರಲ್ಲಿ ಹಿಂದಿನ ಬ್ಯಾಟರ್ ಕ್ಯಾಚ್ ನೀಡಿದ ಹಾಗೂ ನಂತರ ತಾನು ಹೆಲ್ಮೆಟ್ ಬದಲಾಯಿಸಿಕೊಂಡ ಬಳಿಕದ ಸಮಯವನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಕೂಡ ಟೈಮ್‌ಡ್ ಔಟ್‌ಗೆ ಐದು ಸೆಕೆಂಡ್‌ಗಳ ಕಾಲಾವಕಾಶವಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

* ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಪ್ಘಾನಿಸ್ತಾನ ತಂಡ ನೀಡಿರುವ ಅದ್ಭುತ ಪ್ರದರ್ಶನದ ಕಾರಣದಿಂದಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ. ಈ ಚಾಂಒಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಳ್ಳಲಿದ್ದು ವಿಶ್ವಕಪ್‌ನಲ್ಲಿ ಆಡುತ್ತಿರುವ ತಂಡಗಳ ಪೈಕಿ ಅಗ್ರ 7 ತಂಡಗಳು ಮತ್ತು ಆತಿಥೇಯ ಪಾಕಿಸ್ತಾನ ತಂಡ ಒಟ್ಟು 8 ತಂಡಗಳಿಗೆ ಮಾತ್ರ ಅರ್ಹತೆ ಪಡೆದುಕೊಳ್ಳಲಿದೆ. ಈಗಾಗಿ ಅಪ್ಘಾನಿಸ್ತಾನ ತಂಡ ತನ್ನ ಸ್ಥಾನವನ್ನು ಈಗ ಖಚಿತಪಡಿಸಿಕೊಂಡಿದೆ.
* ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಮಧ್ಯೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳು ಮುಂದಿನ ಪ್ರಮುಖ ಟೆಸ್ಟ್ ಸರಣಿಯೊಂದಕ್ಕೆ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್ ಟೂರ್ನಿಯ ಬಳಿಕ ನ್ಯೂಜಿಲೆಂಡ್ ಬಾಂಗ್ಲಾದೇಶ ಪ್ರವಾಸ ಕೈಕೊಳ್ಳಲಿದೆ. ಈ ಪ್ರವಾಸಕ್ಕೆ ಕಿವಿಸ್ ಪಡೆಯನ್ನು ಇಂದು ಘೋಷಣೆ ಮಾಡಲಾಗಿದೆ. ಈ ತಂಡಕ್ಕೆ ಸ್ಯಾಂಟ್ನರ್, ರಚಿನ್ ರವೀಂದ್ರ ಹಾಗೂ ಕೈಲ್ ಜೇಮಿಸನ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
* ಈ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಪಿನ್ ಬೌಲರ್ ಬ್ರಾಡ್ ಹಾಗ್ ಕುತೂಹಲಕಾರಿ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಅಬ್ಬರದ ಪ್ರದರ್ಶನವನ್ನು ಉಲ್ಲೇಖಿಸಿರುವ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದ ಅಗತ್ಯವಿಲ್ಲ ಎಂದಿದ್ದು ಭಾರತ ತಂಡಕ್ಕೆ ವಿಶ್ವಕಪ್ ನೀಡಿ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. "ಕೊನೆಯ ಪಂದ್ಯವನ್ನು ನೋಡಿದ ಬಳಿಕ ಫೈನಲ್ ಪಂದ್ಯದ ಎಂದು ಭಾಸವಾಗುತ್ತಿದೆ. ರೆಸ್ಟ್ ಆಫ್ ದಿ ವರ್ಲ್ಡ್‌ಗೆ ಮಾತ್ರವೇ ಈ ಭಾರತ ತಂಡಕೆ ಪೈಪೋಟಿ ನೀಡಲು ಸಾಧ್ಯ. ಅವರು ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ" ಎಂದಿದ್ದಾರೆ ಆಸಿಸ್ ಸ್ಟಾರ್ ಕ್ರಿಕೆಟಿಗ.
* ಬಹು ನಿರೀಕ್ಷಿತ 2023ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ 10) ಹತ್ತನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಮುಖ 12-ನಗರಗಳ ಕಾರವಾನ್ ಸ್ವರೂಪಕ್ಕೆ ಮರಳುತ್ತಿರುವ ಪಿಕೆಎಲ್, 2023ರ ಡಿಸೆಂಬರ್ 2ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದೆ. ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪೈಪೋಟಿಯ ಪುನರಾರಂಭದೊಂದಿಗೆ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಸೀಸನ್ ಆರಂಭವಾಗಲಿದೆ.
* ಜದ್ರಾನ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಶತಕವನ್ನು ಬಾರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ಪರವಾಗಿ ಶತಕವನ್ನು ಸಿಡಿಸಿದ ಪ್ರಪ್ರಥಮ ಆಟಗಾರ ಎನಿಸಿಕೊಂಡಿದ್ದಾರೆ. ಪಂದ್ಯದ 44ನೇ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್ ಎಸೆತದಲ್ಲಿ ಎರಡು ರನ್ ಪಡೆಯುವ ಮೂಲಕ ಜದ್ರಾನ್ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
* ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸ್ಪರ್ಧೆಯಿಂದ ಈಗಾಗಲೇ ಅಧಿಕೃತವಾಗಿ ಹೊರಬಿದ್ದಿರುವ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ತಂಡವನ್ನು ಬುಧವಾರ ಎದುರಿಸಲಿದೆ. ಹಾಲಿ ಚಾಂಪಿಯನ್ ಆಗಿ ಟೂರ್ನಿಯಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ತಂಡ ಅತ್ಯಂತ ಹೀನಾಯ ಪ್ರದರ್ಶನ ನೀಡಿ ತೀವ್ರ ಟೀಕೆಗೆ ಗುರಿಯಾಗಿದೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರವೇ ಸಾಧಿಸಿರುವ ಇಂಗ್ಲೆಂಡ್ ಎರಡನೇ ಗೆಲುವಿಗಾಗಿ ಹಪಹಪಿಸುತ್ತಿದೆ. ಇಂಗ್ಲೆಂಡ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ. ಉಳಿದಿರುವ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದು ಆ ಅವಕಾಶ ಗಿಟ್ಟಿಸಿಕೊಳ್ಳುವುದು ಇಂಗ್ಲೆಂಡ್ ಮುಂದಿರುವ ಗುರಿ.