* ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ನಂಬಲಸಾಧ್ಯವಾದ ಇನ್ನಿಂಗ್ಸ್‌ಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. 292 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗಲೂ ಎದೆಗುಂದದ ಮ್ಯಾಕ್ಸ್‌ವೆಲ್ ಅಮೋಘ ಆಟದ ಮೂಲಕ ಆಸಿಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 128 ಎಸೆತಗಳನ್ನು ಎದುರಿಸಿ ಬರೊಬ್ಬರಿ 201 ರನ್ ಬಾರಿಸಿದ್ದಲ್ಲದೆ ತಂಡವನ್ನು ಗೆಲ್ಲಿಸಿದ್ದರು. ಈ ಇನ್ನಿಂಗ್ಸ್‌ಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ದಿಗ್ಗಜರೂ ದಂಗಾಗಿದ್ದಾರೆ.
* "ಅಫ್ಘಾನಿಸ್ತಾನ ತಂಡವನ್ನು ಉತ್ತಮ ಸ್ಥಾನದಲ್ಲಿರಿಸಲು ಜದ್ರಾನ್ ಅವರಿಂದ ಬಂದ ಆಟ ಅದ್ಭುತವಾಗಿತ್ತು. ಅವರು ದ್ವಿತಿಯಾರ್ಧವನ್ನು ಕೂಡ ಅದ್ಭುತವಾಗಿ ಆರಂಭಿಸಿದರು. ಒಟ್ಟಾರೆಯಾಗಿ 70 ಓವರ್‌ಗಳಲ್ಲಿ ಅವರು ಅದ್ಭುತ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದರು. ಆದರೆ ಕೊನೆಯ 25 ಓವರ್‌ಗಳ ಆಟ ಅವರ ದೆಸೆಯನ್ನೇ ಬದಲಾಯಿಸಿತು. ಮ್ಯಾಕ್ಸ್ ಆಟಕ್ಕೆ ಇನ್ನಿಲ್ಲದಷ್ಟು ಒತ್ತಡವಿತ್ತು! ನಾನು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಏಕದಿನ ಬ್ಯಾಟಿಂಗ್ ಪ್ರದರ್ಶನ" ಎಂದು ಎಕ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.

* ಇನ್ನು ಟೀಮ್ ಇಂಡಿಯಾದ ಮತ್ತೋರ್ವ ದಿಗ್ಗಜ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂಥಾ ಇನ್ನಿಂಗ್ಸ್ ಎಂದು ಕೊಂಡಾಡಿದ್ದಾರೆ. ""ಇದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ರನ್ ಬೆನ್ನಟ್ಟುವಾಗ 200 ರನ್. ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಗಳಲ್ಲಿ ಮ್ಯಾಕ್ಸ್‌ವೆಲ್ ಅವರ ಈ ಪ್ರದರ್ಶನವೂ ಒಂದು. ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಂದ ಅದ್ಭುತ ಬೆಂಬಲ ಪಡೆದುಕೊಂಡು ಆವಾಹನೆಯಾದವರಂತೆ ಆಡಿದರು ಮ್ಯಾಕ್ಸ್‌ವೆಲ್. ಇದು ಸುದೀರ್ಘ ಕಾಲ ನೆನಪಿಸಿಕೊಳ್ಳುವಂಥಾ ಇನ್ನಿಂಗ್ಸ್" ಎಂದು ಪೋಸ್ಟ್ ಮಾಡಿದ್ದಾರೆ ವೀರೇಂದ್ರ ಸೆಹ್ವಾಗ್.
* ಆಸ್ಟ್ರೇಲಿಯಾ ತನ್ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ ಆದರೆ ಅಫ್ಘಾನಿಸ್ತಾನ ತಂಡದ ಸೆಮಿಫೈನಲ್ ಪಯಣದ ಹಾದಿ ದುರ್ಗಮವಾಗಿದೆ. ಹಾಗಿದ್ದರೂ ತಂಡಕ್ಕೆ ಇನ್ನೂ ಅವಕಾಶವಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ ಈ ಕನಸು ಜೀವಂತವಾಗಿರಲಿದೆ. ಆದರೆ ಸೆಮಿಫೈನಲ್ ಸ್ಪರ್ಧೆಯಲ್ಲಿರುವ ಉಳಿದ ಎರಡು ತಂಡಗಳಾದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ನೆಟ್‌ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ.
* ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಮೂರು ಆವೃತ್ತಿಗಳಿಂದ ಆರ್‌ಸಿಬಿ ತಂಡದ ಪರವಾಗಿ ಜೊತೆಯಾಗಿ ಆಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ನೀಡಿರುವ ಈ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.
* ಸತತ 8 ಗೆಲುವಿನ ಬಳಿಕ ತಂಡದ ಆಟಗಾರರು ಮೈ ಮರೆಯಬಾರದು. ಏಕೆಂದರೆ ಮುಂದಿನ ನಾಕೌಟ್ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಭಾರತ ತಂಡದ ಆಟಗಾರರಿಗೆ ಸಂದೇಶ ನೀಡಿದ್ದಾರೆ. "ದಕ್ಷಿಣ ಆಫ್ರಿಕಾ ವಿರುದ್ಧದ ಈ ಗೆಲುವು ಬಹಳ ಸಂತಸ ತಂದಿದೆ. ಭಾರತ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದೆ. ಅಂದಹಾಗೆ, ಈ ಗೆಲುವಿನೊಂದಿಗೆ ಮೈಮರೆಯುವಂತ್ತಿಲ್ಲ. ಏಕೆಂದರೆ ಬಹಳ ಮುಖ್ಯವಾದ ಪಂದ್ಯಗಳು ಮುಂದೆ ಬರಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಡುವುದಿದೆ. ಈ ಪಂದ್ಯಗಳಲ್ಲೂ ಶ್ರೇಷ್ಠ ಆಟವಾಡಲು ನಾವು ತಯಾರಿರಬೇಕು," ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ತಮ್ಮ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.
* ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರಿಂದ ನಂ.1 ಬ್ಯಾಟರ್ ಸ್ಥಾನವನ್ನು ಪಡೆದುಕೊಳ್ಳುವುದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಯುವ ಬ್ಯಾಟರ್ ಶುಭ್ಮನ್ ಗಿಲ್ ಆಳ್ವಿಕೆ ಶುರುವಾಗಿದೆ. ಇಷ್ಟು ಮಾತ್ರವಲ್ಲದೆ, ಐಸಿಸಿ ಪುರುಷರ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಅವರಿಂದ ನಂ.1 ಬೌಲರ್ ಸ್ಥಾನವನ್ನು ಮರಳಿ ಪಡೆಯುವ ಮೂಲಕ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ಹವಾ ಎಬ್ಬಿಸಿದ್ದಾರೆ.
* ಟೀಮ್ ಇಂಡಿಯಾದ ಭವಿಷ್ಯದ ತಾರೆ ಎನಿಸಿಕೊಂಡಿರುವ ಶುಬ್ಮನ್ ಗಿಲ್ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಹಿಂದಿಕ್ಕಿರುವ ಶುಬ್ಮನ್ ಗಿಲ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಈ ಸಾಧನೆ ಮಾಡಿರುವ ಕೇವಲ ನಾಲ್ಕನೇ ಕ್ರಿಕೆಟಿಗ ಶುಬ್ಮನ್ ಗಿಲ್. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮಾತ್ರವೇ ಈ ಸಾಧನೆ ಮಾಡಿರುವ ಭಾರತೀಯ ಬ್ಯಾಟರ್‌ಗಳಾಗಿದ್ದರು. ಇದೀಗ ಈ ದಿಗ್ಗಜ ಆಟಗಾರರ ಸಾಲಿಗೆ ಶುಬ್ಮನ್ ಗಿಲ್ ಕೂಡ ಸೇರಿಕೊಂಡಿರುವುದು ವಿಶೇಷ.
* ಗುರುವಾರ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣ ಪ್ರಮುಖ ಪಂದ್ಯವೊಂದಕ್ಕೆ ಸಾಕ್ಷಿಯಾಗಲಿದೆ. ಟೂರ್ನಿಯ 41ನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದ್ದು ಕಿವೀಸ್ ಪಡೆಗೆ ಈ ಪಂದ್ಯ ಅತ್ಯಂತ ನಿರ್ಣಾಯಕವೆನಿಸಿದೆ. ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿರುವ ನ್ಯೂಜಿಲೆಂಡ್ ತಂಡ ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
* ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೈಕಲ್ ವಾನ್, "ನಿನ್ನೆ ಆಸ್ಟ್ರೇಲಿಯಾ ಗೆದ್ದಿರುವುದು ಭಾರತ vs ಪಾಕಿಸ್ತಾನ ತಂಡಗಳ ಸೆಮಿಫೈನಲ್ ಕನಸನ್ನು ಸಾಧ್ಯವಾಗಿಸಿದೆ" ಎಂದಿದ್ದಾರೆ. ಈ ಮೂಲಕ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬದ್ಧ ಎದುರಾಳಿಗಳ ಕಾದಾಟವನ್ನು ಮತ್ತೊಮ್ಮೆ ನೋಡಲು ತಾನು ಕಾತರನಾಗಿರುವುದನ್ನು ವಾನ್ ವ್ಯಕ್ತಪಡಿಸಿದ್ದಾರೆ.