ನವೆಂಬರ್ 9: ಮೆಗ್ ಲ್ಯಾನ್ನಿಂಗ್ ನಿವೃತ್ತಿ ಘೋಷಣೆ: ಕೊಹ್ಲಿ ಬಗ್ಗೆ ಯುವಿ ಸ್ಪೋಟಕ ಹೇಳಿಕೆ: ಕ್ರೀಡಾ ಲೋಕದ ಇಂದಿನ ಸುದ್ದಿ
* ಆಸ್ಟ್ರೇಲಿಯಾ ಕ್ರಿಕೆಟ್ ನಾಯಕಿ ಮೆಗ್ ಲ್ಯಾನಿಂಗ್ ಅವರು 31 ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಲ್ಯಾನಿಂಗ್ 2010 ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೆ ಒಟ್ಟು ಆರು ಟೆಸ್ಟ್, 103 ಏಕದಿನ ಪಂದ್ಯ ಹಾಗೂ 132 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆಯಾಗಿ ಲ್ಯಾನ್ನಿಂಗ್ ಆಸ್ಟ್ರೇಲಿಯಾ ಪರವಾಗಿ 241 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
* ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಪೂರ್ಣಗೊಳಿಸುವ ಸಲುವಾಗಿ ಸ್ವಾರ್ಥದ ಆಟಕ್ಕೆ ಮುಂದಾದರು ಎಂದು ಹಫೀಜ್ ಮತ್ತೊಮ್ಮೆ ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಕಲ್ ವಾನ್ ಮತ್ತೊಮ್ಮೆ ಕೊಹ್ಲಿಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಬೆನ್ ಸ್ಟೋಕ್ಸ್ ಅವರ ಆಟ ವಿರಾಟ್ ಕೊಹ್ಲಿಯ ಇನ್ನಿಂಗ್ಸ್‌ನಷ್ಟೇ ಅದ್ಭುತವಾಗಿತ್ತು ಎಂದಿದ್ದಾರೆ ಮೈಕಲ್ ವಾನ್. ಕೊಲ್ಕತ್ತಾದ ಕಠಿಣ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಆಡಿದಷ್ಟೇ ಅದ್ಭುತವಾಗಿ ಬೆನ್ ಸ್ಟೋಕ್ಸ್ ಕೂಡ ಆಡಿದ್ದಾರೆ. ಆದರೆ ಕೊಹ್ಲಿ ನೆದರ್ಲೆಂಡ್ಸ್ ತಂಡಕ್ಕಿಂತ ಬಲಿಷ್ಠವಾದ ಬ್ಯಾಟಿಂಗ್ ವಿಭಾಗದೊಂದಿಗೆ ಆಡಿದ್ದರು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

* ವಿಶ್ವಕಪ್‌ನ ಆರಂಭಿಕ 8 ಪಂದ್ಯಗಳ್ನು ಗೆದ್ದು ಅಗ್ರ ಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿರುವ ಟೀಮ್ ಇಂಡಿಯಾ ಕೊನೆಯ ಲೀಗ್ ಪಂದ್ಯವನ್ನು ಮುಂದಿನ ಭಾನುವಾರ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ಬೆಂಗಳೂರಿಗೆ ಆಗಮಿಸಿ ಸಿದ್ಧತೆ ನಡೆಸುತ್ತಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕಿಂತಲೂ ಭಾರತದ ಆಟಗಾರರ ಚಿತ್ತ ಈಗ ಮುಂದಿನ ಸೆಮಿಫೈನಲ್ ಪಂದ್ಯ ಮೇಲೆ ನೆಟ್ಟಿರುವುದು ಸ್ಪಷ್ಟವಾಗಿದೆ.
* ಕೊಹ್ಲಿ ಭಾರತ ತಂಡಕ್ಕ ಸೇರಿಕೊಂಡ ಬಳಿಕ ಯುವಿ ಹಾಗೂ ಕೊಹ್ಲಿ ಜೊತೆಗಿನ ಒಡನಾಟ ಅದ್ಭುತವಾಗಿತ್ತು ಎನ್ನುವುದು ಕೂಡ ಅಭಿಮಾನಿಗಳಿಗೆ ಗೊತ್ತೇ ಇದೆ. ವಿರಾಟ್ ಕೊಹ್ಲಿ ಭಾರತ ತಂಡವನ್ನು ಸೇರಿದ ಬಳಿಕ ತನ್ನ ಸಾಮರ್ಥ್ಯ ಮೂಲಕ ದೊಡ್ಡ ಛಾಪು ಮೂಡಿಸುತ್ತಾ ಸಾಗಿದರು. ಮ್ಯಾಚ್ ವಿನ್ನರ್‌ಗಳಾದ ಇಬ್ಬರು ಆಟಗಾರರು ಅತ್ಯಂತ ಆಪ್ತವಾಗಿದ್ದುಕೊಂಡು ಸುದೀರ್ಘ ಕಾಲ ತಂಡದಲ್ಲಿ ಕೊಡುಗೆ ನೀಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳಿ ಕೂಡ ಸಾಕ್ಷಿಯಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಜೊತೆಗಿನ ಬಾಂಧವ್ಯ ಈಗ ಈ ಮೊದಲಿನಂತೆ ಇಲ್ಲ ಎನ್ನುವ ವಿಚಾರವನ್ನು ಯುವರಾಜ್ ಸಿಂಗ್ ಸೂಚ್ಯವಾಗಿ ಹೇಳಿಕೊಂಡಿದ್ದು ಅಚ್ಚರಿ ಮೂಡಿಸಿದೆ.
* ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯದಲ್ಲಿ ಸೆಣೆಸಾಟ ನಡೆಸುತ್ತಿದೆ. ಸೆಮಿಫೈನಲ್ ಪ್ರವೇಶಕ್ಕೆ ಈ ಪಂದ್ಯದಲ್ಲಿ ಕಿವೀಸ್ ಪಡೆಗೆ ಗೆಲುವು ಅಗತ್ಯವಾಗಿದ್ದು ಅದಕ್ಕಾಗಿ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಕಿವೀಸ್ ತಮಡದ ವೇಗದ ಬೌಲರ್ ಟ್ರೆಂಟ್ ಬೋಲ್ಟ್ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಬೋಲ್ಟ್ 50 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
* ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟರ್ ಕುಸಾಲ್ ಪೆರೇರಾ ಅವರು ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದರು. ಎಡಗೈ ಬ್ಯಾಟರ್ ಕುಸಾಲ್ ಪೆರೇರಾ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ, ಕುಸಾಲ್ ಪೆರೆರಾ 28 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 51 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು.
* ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಐಸಿಸಿ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಆದರೆ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿರುವುದು ಏನೂ ಬದಲಾವಣೆ ಮಾಡುವುದಿಲ್ಲ ಎಂದು ಸಿರಾಜ್ ಹೇಳಿಕ ನೀಡಿದ್ದು ವಿಶ್ವಕಪ್‌ನಲ್ಲಿ ಗೆಲುವು ಸಾಧಿಸುವುದೇ ತಮ್ಮ ಗುರಿಯಾಗಿದೆ ಎಂದಿದ್ದಾರೆ.
* ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ ಅವರು 25ನೇ ವರ್ಷಕ್ಕೆ ಕಾಲಿಡುವ ಮೊದಲೇ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. 1996ರ ವಿಶ್ವಕಪ್‌ನಲ್ಲಿ 23 ವರ್ಷದವರಾಗಿದ್ದ ಸಚಿನ್ ತೆಂಡೂಲ್ಕರ್ ಅವರ 523 ರನ್‌ಗಳ ದಾಖಲೆಯನ್ನು ಎಡಗೈ ಆಟಗಾರ ರಚಿನ್ ರವೀಂದ್ರ ಇದೀಗ ಹಿಂದಿಕ್ಕಿದರು. ರವೀಂದ್ರ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮಹೀಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವುದರೊಂದಿಗೆ ಈ ಸಾಧನೆ ಮಾಡಿದರು.
* ಆಸ್ಟ್ರೇಲಿಯಾ ವಿರುದ್ಧ ಭಾರೀ ಅಂತರದಿಂದ ಗೆದ್ದೇ ಬಿಟ್ಟೆವು ಎನ್ನುವ ಸ್ಥಿತಿಯಿಂದ ಸೋಲು ಅನುಭವಿಸಿದ ಆಘಾತದಿಂದ ಅಫ್ಘಾನಿಸ್ತಾನ ಹೊರಗೆ ಬರಲೇ ಬೇಕಿದೆ. ಸೆಮಿಫೈನಲ್‌ಗೇರುವ ಅವಕಾಶವನ್ನು ಇನ್ನೂ ಉಳಿಸಿಕೊಂಡಿರುವ ಅಫ್ಘಾನಿಸ್ತಾನ ತಂಡಕ್ಕೆ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತಂಡ ಸವಾಲೊಡ್ಡಿದೆ. ಆದರೆ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಗೆಲುವು ಮಾತ್ರವೇ ಸಾಧಿಸಿದರೆ ಸಾಕಾಗದು. ಭಾರೀ ಅಂತರದಿಂದ ಗೆದ್ದು ನೆಟ್ ರನ್‌ರೇಟ್ ಕೂಡ ಉತ್ತಮ ಪಡಿಸಿಕೊಳ್ಳುವ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications