For Quick Alerts
ALLOW NOTIFICATIONS  
For Daily Alerts

ಕೊಹ್ಲಿ, ಧೋನಿ ಪುತ್ರಿಯರ ಕುರಿತು ಅಶ್ಲೀಲ ಕಾಮೆಂಟ್; ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸ್

Obscene Remark Makes About Virat Kohli And MS Dhonis Daughters; FIR Registered By Delhi Police

ಭಾರತ ಕ್ರಿಕೆಟ್ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಪುತ್ರಿಯರ ಕುರಿತು ಆನ್‌ಲೈನ್‌ನಲ್ಲಿ ಮಾಡಿದ ಅಶ್ಲೀಲ ಹೇಳಿಕೆಗಳ ವಿರುದ್ಧ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ನೋಟಿಸ್ ನೀಡಿದ ನಂತರ ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ ಘಟಕವು ಎಫ್‌ಐಆರ್ ದಾಖಲಿಸಿದೆ.

ಈ ಪ್ರಕರಣ ತನಿಖೆಯನ್ನು ಟ್ವಿಟ್ಟರ್ ಮೂಲಕ ಮುಂದುವರಿಸಲಾಗುತ್ತಿದೆ ಎಂದು ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೂಡ ಟ್ವಿಟರ್‌ನಲ್ಲಿ, ""ನನ್ನ ಸೂಚನೆಯ ನಂತರ, ದೆಹಲಿ ಪೊಲೀಸರು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಪುತ್ರಿಯರ ಮೇಲೆ ಅಸಭ್ಯ ಕಾಮೆಂಟ್ ಹಾಕಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು,'' ಎಂದು ಬರೆದುಕೊಂಡಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಕಳೆದ ವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ಪುತ್ರಿಯರ ವಿರುದ್ಧ ನೀಡಿರುವ ಅಶ್ಲೀಲ ಹೇಳಿಕೆಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಆಕೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಅಭಿಮಾನಿಗಳ ನಿಂದನೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾಳೆ ಮತ್ತು ಎಫ್‌ಐಆರ್‌ಗಳನ್ನು ದಾಖಲಿಸುವಂತೆ ಟ್ವಿಟ್ಟರ್‌ನಲ್ಲಿ ಕರೆ ನೀಡಿದ್ದಾಳೆ.

"2 ವರ್ಷದ ಮಗು ಮತ್ತು 7 ವರ್ಷದ ಬಾಲಕಿಯ ಬಗ್ಗೆ ಇಂತಹ ಅಸಹ್ಯ ಶಬ್ದಗಳೇ? ನೀವು ಆಟಗಾರನನ್ನು ಇಷ್ಟಪಡದಿದ್ದರೆ, ನೀವು ಅವರ ಮಗಳನ್ನು ನಿಂದಿಸುತ್ತೀರಾ? ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದ ಹಾಲಿ ಸ್ಟಾರ್ ಆಟಗಾರ ವಿರಾಟ್ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾ ಕಳೆದ ವಾರ 2023ರ ಜನವರಿ 11ರಂದು 2ನೇ ವರ್ಷದ ಜನ್ಮದಿನ ಆಚರಿಸಿಕೊಂಡಳು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಗಳ ಚಿತ್ರವನ್ನು ಸಾರ್ವಜನಿಕರಿಗೆ ತೋರಿಸದಿರಲು ನಿರ್ಧರಿಸಿದ್ದು, ಅವರು ಎಲ್ಲಿಗೆ ಹೋದರೂ, ಫೋಟೋ ಕ್ಲಿಕ್ಕಿಸಬಾರದೆಂದು ಅವರು ಟಿವಿ ಮಾಧ್ಯಮವನ್ನು ವಿನಂತಿಸುತ್ತಾರೆ. ಸರಳ ಜೀವನ ಕಲಿಸಿಕೊಡುವುದಕ್ಕಾಗಿ ಮಗಳನ್ನು ಕ್ಯಾಮರಾಗಳಿಂದ ದೂರವಿಡಲು ಬಯಸಿದ್ದಾರೆ.

ಮತ್ತೊಂದೆಡೆ, ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ಮಗಳು ಝಿವಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈಗಾಗಲೇ 1.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಈಗಾಗಲೇ ಝಿವಾ ಐಪಿಎಲ್ ಪಂದ್ಯಗಳ ಸಮಯದಲ್ಲಿ ತನ್ನ ತಂದೆ ಎಂಎಸ್ ಧೋನಿ ಮುನ್ನಡೆಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹುರಿದುಂಬಿಸುವುದನ್ನು ನೋಡಿದ್ದೇವೆ. ಝಿವಾ ಇತ್ತೀಚೆಗೆ ಫಿಫಾ ಫುಟ್ಬಾಲ್ ವಿಶ್ವಕಪ್ ನಂತರ ಲಿಯೋನೆಲ್ ಮೆಸ್ಸಿ ಸಹಿ ಮಾಡಿದ ಅರ್ಜೆಂಟೀನಾ ಜೆರ್ಸಿಯನ್ನು ಧರಿಸಿದ್ದರು. ಈ ಚಿತ್ರವನ್ನು ಸಾಕ್ಷಿ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪುತ್ರಿ ಸಮೈರಾ ವಿರುದ್ಧವೂ ಅಶ್ಲೀಲ ಹೇಳಿಕೆಗಳನ್ನು ನೀಡಿರುವವರ ವಿರುದ್ಧ ಕ್ರಮಕ್ಕೆ ಸ್ವಾತಿ ಮಲಿವಾಲ್ ಸೂಚಿಸಿದ್ದಾರೆ.

Story first published: Monday, January 16, 2023, 16:08 [IST]
Other articles published on Jan 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+