ಅಕ್ಟೋಬರ್ 12: ಪಾಕ್ ಪಂದ್ಯಕ್ಕೆ ಭಾರತ ಸಜ್ಜು; ಇಂದು ಆಸ್ಟ್ರೇಲಿಯಾ vs ಆಫ್ರಿಕಾ ಸೆಣೆಸಾಟ: ಕ್ರೀಡಾ ಲೋಕದ ಇಂದಿನ ಸುದ್ದಿ
* ಐಪಿಎಲ್‌ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಮಾತಿನ ಚಕಮಕಿಯ ಸಂದರ್ಭದಲ್ಲಿ ಅದಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಮಾತಿನ ಸಂಘರ್ಷ. ತನ್ನ ತಂಡದ ಆಟಗಾರ ನವೀನ್ ಉಲ್ ಹಕ್‌ಗೆ ಬೆಂಬಲವಾಗಿ ನಿಂತು ಕೊಹ್ಲಿಯ ವಿರುದ್ಧ ಮಾತಿನ ಸಮರಕ್ಕೆ ಇಳಿದಿದ್ದರು ಗೌತಮ್ ಗಂಭೀರ್. ಇದೀಗ ಭಾರತ vs ಅಫ್ಘಾನಿಸ್ತಾನ ಪಂದ್ಯದ ಸಂದರ್ಭದಲ್ಲಿ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಪರಸ್ಪರ ಹಸ್ತಲಾಘವ ಮಾಡಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
* "ನೀವು ಜಗಳ ಮಾಡಿಕೊಂಡಿರುವುದು ಮೈದಾನದ ಒಳಗೆ. ಮೈದಾನದ ಆಚೆ ಅಲ್ಲ. ತನ್ನ ತಂಡದ ಪರವಾಗಿ, ತನ್ನ ಗೌರವಕ್ಕಾಗಿ ಹಾಗೂ ಗೆಲುವಿಗಾಗಿ ಜಗಳ ಮಾಡಲು ಪ್ರತಿ ಆಟಗಾರನಿಗೂ ಹಕ್ಕಿದೆ. ಅದು ನೀವು ಯಾವುದೇ ದೇಶದ ಪರವಾಗಿ ಆಡುತ್ತಿದ್ದರೂ ಪರವಾಗಿಲ್ಲ. ಹಾಗೂ ಅದಕ್ಕಾಗಿ ನೀವು ಎಷ್ಟು ಉತ್ತಮ ಆಟಗಾರ ಎನ್ನುವುದು ಕೂಡ ಮುಖ್ಯವಾಗುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಕೂಡ ಆಗಿರುವ ಗೌತಮ್ ಗಂಭೀರ್.

* ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಬಳಿಗೆ ನವೀನ್ ಉಲ್ ಹಕ್ ಬಂದು ಕೈಕುಲುಕಿದಾಗ ಸಣ್ಣ ಸಂಭಾಷಣೆಯ ಜೊತೆಗೆ ನಗುಮುಖದಿಂದ ಇಬ್ಬರು ಆಟಗಾರರು ಸ್ಪಂದಿಸಿದ್ದಾರೆ. ಹಾಗಾದರೆ ಆ ಕ್ಷಣದಲ್ಲಿ ಇಬ್ಬರು ಆಟಗಾರರ ಮಧ್ಯೆ ನಡೆದ ಸಂಭಾಷಣೆ ಏನು ಎನ್ನುವುದು ಕೂಡ ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ವಿಚಾರವಾಗಿ ಸ್ವತಃ ನವೀನ್ ಉಲ್ ಹಕ್ ಅವರೇ ಮಾತನಾಡಿದ್ದು ಕೊಹ್ಲಿ ಹಾಗೂ ತಮ್ಮ ನಡುವೆ ಆ ಕ್ಷಣದಲ್ಲಿ ನಡೆದ ಸಂಭಾಷಣೆ ಏನು ಎನ್ನುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಘಟನೆಯ ಬಗ್ಗೆ ನವೀನ್ ಉಲ್ ಹಕ್ ಹೇಳಿಕೆ ನೀಡಿದ್ದಾರೆ. "ಮೈದಾನದಲ್ಲಿ ಏನು ಆಗಿದೆಯೋ ಅದು ಮೈದಾನದ ಒಳಗೆ ಆಗಿ ಹೋಗಿದೆ. ಹೊರಗಡೆ ಏನೂ ಆಗಿಲ್ಲ. ನಾವಿನಬ್ಬರೂ ಶೇಕ್ ಹ್ಯಾಂಡ್ ಮಾಡಿದ ಬಳಿಕ ಕೊಹ್ಲಿ ಇಲ್ಲಿಗೆ ಮುಗಿಸೋಣ ಎಂದರು. ನಾನು ಕೂಡ ಇಲ್ಲಿಗೆ ಮುಗಿಸೋಣ ಎಂದೆ" ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಜೊತೆಗಿನ ಸಂಘರ್ಷಕ್ಕೆ ನವೀನ್ ಉಲ್ ಹಕ್ ಅಂತ್ಯಹಾಡಿದ್ದಾರೆ.
* ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರು ಅಕ್ಟೋಬರ್ 12ರಂದು ನೇರವಾಗಿ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಇದೇ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಬಹು ನಿರೀಕ್ಷಿತ ಪಂದ್ಯದ ತಯಾರಿಯಲ್ಲಿ ಶುಭ್ಮನ್ ಗಿಲ್ ತೊಡಗಿಸಿಕೊಳ್ಳಲಿದ್ದಾರೆ.
* ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಬ್ಬರದ ಶತಕ ಸಿಡಿಸಿ ಭಾರತದ ಸುಲಭ ಗೆಲುವಿಗೆ ಕಾಣವಾದರು. ಆರಂಭದಿಂದಲೇ ಆಕ್ರಮಣಕಾರಿ ಆಟವನ್ನಾಡಿದ ರೋಹಿತ್ ಶರ್ಮಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಸಣ್ಣ ಅವಕಾಶವನ್ನೂ ನೀಡದಂತೆ ಅಬ್ಬರಿಸಿದರು. ಈ ಮೂಲಕ ಅಂತಾರಾಷ್ಟ್ರೀತ ಏಕದಿನ ಮಾದರಿಯಲ್ಲಿ 31ನೇ ಶತಕ ಸಿಡಿಸಿದ ರೋಹಿತ್ ಶರ್ಮಾ ವಿರ್ಶವಕಪ್ ಟೂರ್ನಿಯಲ್ಲಿಯೇ 7ನೇ ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.
* ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಟೂರ್ನಿಯ ಮೆಗಾ ಸೆಣೆಸಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಈ ಎರಡು ತಂಡಗಳ ನಡುವೆ ಅಹ್ಮದಾಬಾದ್‌ನಲ್ಲಿ ಮುಖಾಮುಖಿಯಾಗಲಿದ್ದು ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಈ ಪಂದ್ಯಕ್ಕಾಗಿ ಇದೀಗ ಟೀಮ್ ಇಂಡಿಯಾ ಸಜ್ಜಾಗಿದ್ದು ಈಗಾಗಲೇ ಅಹ್ಮದಾಬಾದ್‌ಗೆ ಆಗಮಿಸಿದೆ. ಎರಡನೇ ಪಂದ್ಯವನ್ನು ದೆಹಲಿಯಲ್ಲಿ ಆಡಿದ ಬಳಿಕರೋಹಿತ್ ಶರ್ಮಾ ಪಡೆ ಮೂರನೇ ಪಂದ್ಯಕ್ಕಾಗಿ ಅಹ್ಮದಾಬಾದ್‌ಗೆ ಬಂದಿಳಿದಿದೆ. ಅನಾರೋಗ್ಯದಿಂದ ಮೊದಲ ಎರಡು ಪಂದ್ಯಗಳಿಮದ ಹೊರಗುಳಿದಿದ್ದ ಶುಬ್ಮನ್ ಗಿಲ್ ಭಾರತ ತಂಡ ಈಗ ಇಲ್ಲಿಗೆ ಬಂದಿಳಿದಿದೆ.
* ಬುಧವಾರ, ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು 84 ಎಸೆತಗಳಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 131 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು. ಈ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಅಳಿಸಿ ಹಾಕಿದರು. ತಮ್ಮ 'ಸಿಕ್ಸರ್' ದಾಖಲೆ ಮುರಿದ ನಂತರ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ (ಟ್ವಿಟ್ಟರ್)ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾರನ್ನು ಶ್ಲಾಘಿಸಿದರು. "ಅಭಿನಂದನೆಗಳು, ರೋಹಿತ್ ಶರ್ಮಾ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲೆ ಮುರಿದಿರುವುದು ವಿಶೇಷವಾಗಿದೆ," ಎಂದು ಕ್ರಿಸ್ ಗೇಲ್ ಬುಧವಾರ ಟ್ವೀಟ್ ಮಾಡಿದ್ದಾರೆ.
* ದೆಹಲಿಯ ನೂತನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿಯೂ ಬೂಮ್ರಾ ಅದ್ಭುತ ಯಶಸ್ಸು ಸಾಧಿಸಿದ್ದು ನಾಲ್ಕು ವಿಕೆಟ್ ಕಬಳಿಸಿದರು. ಈ ಪ್ರದರ್ಶನದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಪಾನ್ ಪಠಾಣ್ ಬೂಮ್ರಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಇಡೀ ಜಗತ್ತಿನಲ್ಲಿ ನಿಮಗೆ ಬೂಮ್ರಾಗಿಂತ ಉತ್ತಮ ಬೌಲರ್ ಸಿಗುವುದಿಲ್ಲ. ನೀವು ಅವರ ಆಕ್ಷನ್ ಅನ್ನು ಗಮನದಲ್ಲಿಟ್ಟುಕೊಂಡರೆ ಆತ ತನ್ನ ಬೌಲಿಂಗ್‌ನಲ್ಲಿ ಹೇಗೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯುತ್ತದೆ. ತನ್ನ ಚಾಣಾಕ್ಷತನದ ಮೂಲಕ ವಿಕೆಟ್ ಪಡೆಯುತ್ತಾರೆ" ಎಂದು ಇರ್ಫಾನ್ ಪಠಾಣ್ ಬೂಮ್ರಾ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
* ಹಲವು ದಶಕಗಳಿಂದ ವೀಕ್ಷಕ ವಿವರಣೆಯ ಜಾದೂಗಾರ ಹರ್ಷಾ ಭೋಗ್ಲೆ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. 'ಕ್ರಿಕೆಟ್‌ನ ಧ್ವನಿ' ಎಂದು ಕರೆಯಲ್ಪಡುವ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ಗುರುವಾರ ಮಾಹಿತಿ ನೀಡಿದರು.
* ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಭರ್ಜರಿಯಾಗಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಬಾಂಗ್ಲಾದೇಶದ ವಿರುದ್ಧ ಕಿವೀಸ್ ಪಡೆ ಮೂರನೇ ಪಂದ್ಯವನ್ನಾಡಲಿದ್ದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications