ಅಕ್ಟೋಬರ್ 17: ವಿಶ್ವಕಪ್‌ನಲ್ಲಿ ಮತ್ತೊಂದು ಶಾಕಿಂಗ್ ಫಲಿತಾಂಶ; ಐಸಿಸಿಗೆ ಪಿಸಿಬಿ ದೂರು!: ಕ್ರೀಡಾ ಲೋಕದ ಇಂದಿನ ಸುದ್ದಿ
* ಭಾರತ ವಿರುದ್ಧ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಸಮುದಾಯವು ತಂಡಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಶೀಲಿಸುತ್ತಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವಮಾನವನ್ನು ಅನುಭವಿಸುತ್ತಿದ್ದಾರೆ. ಪಾಕಿಸ್ತಾನ ತಂಡದಲ್ಲಿನ ಹಲವಾರು ನ್ಯೂನತೆಗಳನ್ನು ಕ್ರಿಕೆಟ್ ತಜ್ಞರು ಗಮನ ಸೆಳೆದಿದ್ದು ಅದು ಹಿನ್ನಡೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇಂತಹ ವಾತಾವರಣದ ನಡುವೆ, ತನ್ನ ಪ್ರತಿಕ್ರಿಯೆ ಮತ್ತು ವಿವಾದಗಳಿಂದಾಗಿ ಆಗಾಗ್ಗೆ ಗಮನ ಸೆಳೆಯುವ ಪ್ರಸಿದ್ಧ ಟಿಕ್‌ಟಾಕರ್ ಹರೀಮ್ ಶಾ ಆಶ್ಚರ್ಯಕರ ಆರೋಪವನ್ನು ಮಾಡಿದ್ದಾಳೆ.
*"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ದುಷ್ಕೃತ್ಯ ಎಸಗಲು ಮಾಟ-ಮಂತ್ರದ ಅಭ್ಯಾಸ ಮಾಡುವವರ ಸೇವೆಯನ್ನು ಕೋರಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತನಗೆ ಮಾಹಿತಿ ಸಿಕ್ಕಿದೆ. ಪಾಕಿಸ್ತಾನ ತಂಡದ ಮೇಲೆ ಮಾಟ-ಮಂತ್ರ ಮಾಡಲು ಪ್ರಸಿದ್ಧ ಜಾದೂ ತಜ್ಞ ಕಾರ್ತಿಕ್ ಚಕ್ರವರ್ತಿ ಅವರಿಗೆ ಜಯ್ ಶಾ ಈ ಕೆಲಸವನ್ನು ನೀಡಿದ್ದಾರೆ." ಎಂದು ಟ್ವಿಟ್ಟರ್‌ನಲ್ಲಿ ಹರೀಮ್ ಶಾ ಪ್ರತಿಪಾದಿಸಿದ್ದಾಳೆ.

* ಭಾನುವಾರವೇ ಬೆಂಗಳೂರಿಗೆ ಬರುತ್ತಿದ್ದಂತೆಯೇ ರೆಸಿಡೆನ್ಸಿ ರಸ್ತೆಯಲ್ಲಿರುವ ಐಷಾರಾಮಿ ರಿಟ್ಜ್ ಕಾರ್ಲ್ಟನ್ ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ 29ನೇ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿತು. "ಇದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸಿದ ಸಣ್ಣ ಸಮಾರಂಭವಾಗಿತ್ತು. ಇಂದು ಪ್ರಯಾಣದ ದಿನವಾದ್ದರಿಂದ ಹೆಚ್ಚಿನ ಚಟುವಟಿಕೆಗಳು ಇರಲಿಲ್ಲ ಮತ್ತು ಮುಂಬರುವ ಪಂದ್ಯಗಳಿಗೆ ತಂಡವು ಶೀಘ್ರದಲ್ಲೇ ಸಿದ್ಧತೆಗಳನ್ನು ಪ್ರಾರಂಭಿಸುತ್ತದೆ," ಎಂದು ಪಾಕಿಸ್ತಾನ ತಂಡದೊಂದಿಗೆ ಪ್ರಯಾಣಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
* 1983 ಮತ್ತು 2011ರಲ್ಲಿ ಐಸಿಸಿ ಟ್ರೋಫಿ ಗೆಲುವು ಸಾಧಿಸಿದ ನಂತರ, ತಮ್ಮ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯುವ ಆಕಾಂಕ್ಷೆಯೊಂದಿಗೆ, ಭಾರತ ತಂಡ ಅಗಾಧ ಭರವಸೆಯನ್ನು ಮೂಡಿಸಿದೆ. "ಭಾರತ ಸೋಲಿಸುವ ತಂಡವಾಗಲಿದೆ ಎಂದು ಭಾವಿಸುತ್ತೇನೆ ಎಂದು ನಾನು ಆರಂಭದಿಂದಲೂ ಹೇಳಿದ್ದೆ. ಭಾರತ ಅತ್ಯಂತ ಪ್ರತಿಭಾವಂತ ತಂಡವನ್ನು ಹೊಂದಿದೆ. ಅವರು ತಮ್ಮ ವೇಗದ ಬೌಲಿಂಗ್, ಅವರ ಸ್ಪಿನ್ ಮತ್ತು ಅವರ ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಎಲ್ಲಾ ಬೇಸ್‌ಗಳನ್ನು ಆವರಿಸಿದ್ದಾರೆ," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಐಸಿಸಿಗೆ ತಿಳಿಸಿದರು
* ಮಾಧ್ಯಮಗೋಷ್ಠಿಯಲ್ಲಿ ಪಾಕಿಸ್ತಾನ ತಂಡದ ಕ್ರಿಕೆಟ್ ನಿರ್ದೇಶಕನಾಗಿರುವ ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆಯನ್ನು ಐಸಿಸಿ ಇದೀಗ ಗಂಭೀರವಾಗಿ ಪರಿಗಣಿಸಿದೆ. ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆ ಐಸಿಸಿಯನ್ನು ಮುಜುಗರಕ್ಕೀಡು ಮಾಡಿದೆ. ಹೀಗಾಗಿ ಈ ಅಭಿಪ್ರಾಯವನ್ನು ಪರಾಮರ್ಶಿಸಲು ಐಸಿಸಿ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಿಕ್ಕಿ ಆರ್ಥರ್ ನೀಡಿರುವ ಈ ಹೇಳಿಕೆಯನ್ನು ಸಮರ್ಥಿಸಲು ವಿಫಲವಾದರೆ ದಂಡನೆಗೂ ಒಳಗಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
* ಪಾಕಿಸ್ತಾನ ತಂಡದ ಪ್ರಮುಖ ಆಟಗಾರರು ಬೆಂಗಳೂರಿನ ಹೋಟೆಲ್‌ನಲ್ಲಿ ತಂಗಿರುವಾಗ ವೈರಲ್ ಎದೆಯ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ನಾಲ್ಕರಿಂದ ಐದು ಆಟಗಾರರು ತೀವ್ರವಾದ ಎದೆಯ ಸೋಂಕಿನಿಂದ ಬಳಲುತ್ತಿದ್ದಾರೆ. ಇದು ತೀವ್ರ ಜ್ವರ ಮತ್ತು ಅನಾರೋಗ್ಯಕ್ಕೆ ಕಾರಣವಾಗಿದೆ. ಆಟಗಾರರಾದ ಶಾಹೀನ್ ಅಫ್ರಿದಿ, ಅಬ್ದುಲ್ಲಾ ಶಫೀಕ್, ಜಮಾನ್ ಖಾನ್ ಮತ್ತು ಉಸಾಮಾ ಮಿರ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.
* ವಿಶ್ವಕಪ್ ಟೂರ್ನಿಯ 16ನೇ ಪಂದ್ಯ ಬುಧವಾರ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ನಡೆಯಲಿದ್ದು ಚೆನ್ನೈನ ಚೆಪಾಕ್ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅಫ್ಘಾನಿಸ್ತಾನ ತಂಡ ಕಳೆದ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಆಘಾತಕಾರಿ ಸೋಲುಣಿಸಿದ್ದು ಅದೇ ಫಲಿತಾಂಶವನ್ನು ಮತ್ತೆ ಪುನರಾವರ್ತಿಸುವ ಆತ್ಮವಿಶ್ವಾಸದಲ್ಲಿದೆ. ಚೆನ್ನೈನ ಸ್ಪಿನ್ ಸ್ನೇಹಿ ಪಿಚ್ ಅಫ್ಘನ್ ಪಡೆಗೆ ಮತ್ತಷ್ಟು ನೆರವು ನೀಡುವ ನಿರೀಕ್ಷೆಯೂ ಇದೆ ಎನ್ನುವುದು ಗಮನಾರ್ಹ ಅಂಶ.
* ಈ ಬಾರಿಯ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ದುರ್ಬಲ ತಂಡ ಎನಿಸಿಕೊಂಡಿರುವ ನೆದರ್ಲೆಂಡ್ಸ್ ತಂಡದ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲಿಗೆ ನೆದರ್ಲೆಂಡ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ ನಿಗದಿಪಡಿಸಿತು. ಮಳೆಯಿಂದಾಗಿ ಅಡ್ಡಿಯಾದ ಪಂದ್ಯದಲ್ಲಿ 43 ಓವರ್‌ಗಳಲ್ಲಿ 246 ರನ್‌ಗಳನ್ನು ಗಳಿಸುವ ಗುರಿ ಪಡೆದುಕೊಂಡಿತ್ತು. ಆದರೆ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದ್ದು 38 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications