For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 20: ಕಿವೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್; ಪಾಕ್‌ ವಿರುದ್ಧ ಗೆದ್ದ ಆಸಿಸ್: ಕ್ರೀಡಾ ಲೋಕದ ಸುದ್ದಿ

* ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಹಾರ್ದಿಕ್ ಹಿಮಾಚಲ ಪ್ರದೇಶದಲ್ಲಿ ನಡೆಯುವ ಮುಂದಿನ ಪಂದ್ಯಕ್ಕೆ ತಂಡದೊಂದಿಗೆ ಪ್ರಯಾಣಿಸುವುದಿಲ್ಲ

* ಐಸಿಸಿ ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ 2023ರ ಇದುವರೆಗಿನ ಅತ್ಯಂತ ಬೆಸ್ಟ್ ಫೀಲ್ಡರ್ ಎಂದು ಪರಿಗಣಿಸಿದೆ. ICC ಪ್ರಕಾರ, ಪಂದ್ಯಾವಳಿಯ ಮೊದಲ 13 ದಿನಗಳಲ್ಲಿ, ವಿರಾಟ್ ಕೊಹ್ಲಿ ತಮ್ಮ ಫೀಲ್ಡಿಂಗ್ ಮೂಲಕ ಮೈದಾನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದ್ದಾರೆ. ಎಲ್ಲಾ ತಂಡಗಳ ಮೂರು ಲೀಗ್ ಪಂದ್ಯಗಳ ನಂತರ, ಐಸಿಸಿ ಮೈದಾನದಲ್ಲಿ ಅತ್ಯಂತ ಪರಿಣಾಮಕಾರಿ ಫೀಲ್ಡರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಂದ್ಯಾವಳಿಯಲ್ಲಿ ಕೊಹ್ಲಿ ಇಲ್ಲಿಯವರೆಗೆ ಮೂರು ಕ್ಯಾಚ್ ಗಳನ್ನು ಹಿಡಿದಿದ್ದಾರೆ.

October 20, what happened in sports World: Todays Top sports news and headlines

* 2023ರ ವಿಶ್ವಕಪ್‌ನಲ್ಲಿ ಸತತ ನಾಲ್ಕನೇ ಗೆಲುವಿನ ಹೊರತಾಗಿಯೂ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾಯಿತು. ನ್ಯೂಜಿಲೆಂಡ್ ನಂತರ, ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ತಾವು ಆಡಿದ ನಾಲ್ಕು ಪಂದ್ಯಗಳಿಂದ 8 ಪಾಯಿಂಟ್‌ಗಳನ್ನು ಹೊಂದಿವೆ. ಆದರೆ ನ್ಯೂಜಿಲೆಂಡ್ +1.923 ನೆಟ್ ರನ್-ರೇಟ್ ಹೊಂದಿದ್ದರೆ, ಭಾರತ +1.659 ನೆಟ್ ರನ್-ರೇಟ್ ಹೊಂದಿದೆ. ಇತ್ತಂಡಗಳು ಅಕ್ಟೋಬರ್ 22ರಂದು ಸೆಣಸಾಡಲಿವೆ.

* ಆಧುನಿಕ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರು ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಅತ್ಯಂತ ವೇಗವಾಗಿ 26,000 ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮೊದಲು, ವಿರಾಟ್ ಕೊಹ್ಲಿ 510 ಪಂದ್ಯಗಳಲ್ಲಿ 566 ಇನ್ನಿಂಗ್ಸ್‌ಗಳಿಂದ 25,923 ರನ್ ಗಳಿಸಿದ್ದರು. ಪುಣೆಯಲ್ಲಿ ಗೆಲುವಿನ ಸಿಕ್ಸರ್ ಸಿಡಿಸುವ ಮೂಲಕ ಅದ್ಭುತ ಶೈಲಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು.

* ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ಸುಲಭ ಗೆಲುವು ಸಾಧಿಸಿದ ಭಾರತ ಇದೀಗ ಮತ್ತೊಂದು ಕಠಿಣ ಪೈಪೋಟಿಗೆ ಸಿದ್ಧವಾಗಿದೆ. ನ್ಯೂಜಿಲೆಂಡ್ ತಂಡವನ್ನು ಮುಂದಿನ ಪಂದ್ಯದಲ್ಲಿ ಭಾರತ ಎದುರಿಸಲಿದ್ದು ಧರ್ಮಶಾಲಾದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯವನ್ನಾಡಲು ಭಾರತ ಇದೀಗ ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಪ್ರಯಾಣ ಬೆಳೆಸಿತು. ಪುಣೆಯ ಪ್ರಯಾಣ ಬೆಳೆಸಿದ ಭಾರತ ತಮಡ ಈಗಾಘಲೇ ಧರ್ಮಶಾಲಾಗೆ ತಲುಪಿದ್ದು ಶನಿವಾರ ಅಭ್ಯಾಸ ನಡೆಸಲಿದೆ. ಈ ಮೂಲಕ ಭಾನುವಾರ ನಡೆಯಲಿರುವ ಪೈಪೋಟಿಯ ಪಂದ್ಯಕ್ಕೆ ಸನ್ನಧವಾಗಲಿದೆ.

* ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೇವಿಡ್ ವಾರ್ನರ್ ಅವರು ತಮ್ಮ 21ನೇ ಏಕದಿನ ಶತಕವನ್ನು ದಾಖಲಿಸುವ ವೇಳೆ ಪಡೆದ ಜೀವದಾನವು ಅವರಿಗೆ ವರವಾಗಿ ಪರಿಣಮಿಸಿತು. ಪಾಕಿಸ್ತಾನದ ಬೌಲಿಂಗ್ ದಾಳಿ ಲಘುವಾಗಿ ಕೆಲಸ ಮಾಡಿದ ಕಾರಣ, ಡೇವಿಡ್ ವಾರ್ನರ್ ಕೇವಲ 85 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಡೇವಿಡ್ ವಾರ್ನರ್ ತಮ್ಮ 5ನೇ ವಿಶ್ವಕಪ್ ಶತಕ ಮತ್ತು ಪಾಕಿಸ್ತಾನದ ವಿರುದ್ಧ ಏಕದಿನದಲ್ಲಿ ಅವರ ಸತತ ನಾಲ್ಕನೇ ಶತಕವಾಗಿದೆ. ಇದು 2017ರಲ್ಲಿ ಪ್ರಾರಂಭವಾದ ಶತಕದ ಸರಣಿ ಮುಂದುವರೆದಿದೆ.

* ವಿಶ್ವಕಪ್‌ನಲ್ಲಿ ಮತ್ತೊಂದು ಜಿದ್ದಾಜಿದ್ದಿನ ಹೋರಾಟ ನಡೆದಿದ್ದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕದನದಲ್ಲಿ ಆಸಿಸ್ ಪಡೆ ಗೆದ್ದುಬೀಗಿದೆ. ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಸತತ ಸೋಲಿನ ಕಹಿ ಅನುಭವಿಸಿದ್ದ ಆಸ್ಟ್ರೇಲಿಯಾ ಇದೀಗ ಸತತ ಎರಡು ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಗಣನೀಯತ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಈಗ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

* ಈ ಸೋಲಿನ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪ್ರತಿಕ್ರಿಯೆ ನೀಡಿದ್ದು ಸೋಲಿಗೆ ಕಾರಣ ಯಾರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಸತತ ಎರಡನೇ ಸೋಲಿನ ಬಳಿಕ ಪಾಕ್ ನಾಯಕ ಬಾಬರ್ ಅಜಂ ತಂಡದ ಕೆಲ ವಿಭಾಗದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾವು ಬೌಲಿಂಗ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ಅಲ್ಲದೆ ನೀವು ವಾರ್ನರ್ ಅವರಂಥಾ ಆಟಗಾರರ ಕ್ಯಾಚನ್ನು ಕೈಚೆಲ್ಲಿದರೆ ಅವರು ನಿಮ್ಮಗೆ ಮತ್ತೆ ಅವಕಾಶ ನೀಡುವುದಿಲ್ಲ. ಇದು ದೊಡ್ಡ ರನ್‌ಗಳಿಸುವ ಮೈದಾನ. ಇಲ್ಲಿ ತಪ್ಪುಗಳನ್ನು ಮಾಡಲು ಬಹಳ ಕಡಿಮೆ ಅವಕಾಶವಿದೆ. ಹಾಗಿದ್ದರೂ ಕೊನೆಯ ಹಂತದಲ್ಲಿ ಪಂದ್ಯದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಲು ಕಾರಣವಾದ ವೇಗುಗಳಿಗೆ ಹಾಗೂ ಸ್ಪಿನ್ನರ್‌ಗಳಿಗೆ ಅದರ ಶ್ರೇಯಸ್ಸು ದೊರೆಯಬೇಕು" ಎಂದಿದ್ದಾರೆ.

* "ಇದೊಂದು ಅದ್ಭುತವಾದ ಗೆಲುವು. ಚಿನ್ನಸ್ವಾಮಿಯಲ್ಲಿ ಆಡುವುದು ಯಾವಾಗಲೂ ಕಠಿಣ. ಆದರೆ ಉತ್ತಮವಾದ ಗೆಲುವು ನಮ್ಮದಾಗಿದೆ. ಮಾರ್ಶ್ ಹಾಗೂ ವಾರ್ನರ್ ಈ ಪಂದ್ಯಕ್ಕೆ ಅದ್ಭುತವಾದ ಅಡಿಪಾಯ ಹಾಕಿಕೊಟ್ಟರು ಹಾಗೂ ನಾವು ನಮ್ಮ ಆಟವನ್ನು ಹೇಗೆ ಆಟಬೇಕೆಂದು ತೋರಿಸಿಕೊಟ್ಟರು" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.

Story first published: Friday, October 20, 2023, 23:57 [IST]
Other articles published on Oct 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+