* ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ತಮ್ಮ 77ನೇ ವಯಸ್ಸಿನಲ್ಲಿ ಸೋಮವಾರ, ಅಕ್ಟೋಬರ್ 23ರಂದು ಇಹಲೋಕ ತ್ಯಜಿಸಿದರು. 1967 ಮತ್ತು 1979ರ ನಡುವೆ, ಪ್ರಸಿದ್ಧ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಭಾರತ ತಂಡಕ್ಕಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 266 ವಿಕೆಟ್‌ಗಳನ್ನು ಕಬಳಿಸಿದರು. ಇದ ಜೊತೆಗೆ, ಬಿಷನ್ ಸಿಂಗ್ ಬೇಡಿ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.
* ಸೋಮವಾರ, ಅಕ್ಟೋಬರ್ 23ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ ಪುರುಷರ 5000 ಮೀಟರ್ ಟಿ11 ಸ್ಪರ್ಧೆಯಲ್ಲಿ ಭಾರತದ ಅಂಕುರ್ ಧಾಮ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 29 ವರ್ಷದ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂಕುರ್ ಧಾಮ 16:37.29 ನಿಮಿಷಗಳಲ್ಲಿ ಗುರಿಯನ್ನು ಪೂರ್ಣಗೊಳಿಸಿದ ನಂತರ ಪದಕದ ವೇದಿಕೆಯಲ್ಲಿ ಸ್ಥಾನವನ್ನು ಪಡೆದರು.

* ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಜೇಯ ಆಟ ಮುಂದುವರಿದಿದೆ. ಭಾನುವಾರ ನಡೆದ ಸಮಬಲದ ತಂಡಗಳ ಕಾದಾಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಮೋಘ ಗೆಲುವು ಸಾಧಿಸುವ ಮೂಲಕ ಈ ವಿಶ್ವಕಪ್‌ನಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಈ ಮೂಲಕ ಅಜೇಯವಾಗುಳಿದಿರುವ ಏಕೈಕ ತಂಡ ಎನಿಸಿಕೊಂಡಿದೆ. ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರ ಮತ್ತೊಂದು ಅಮೋಘ ರನ್ ಚೇಸಿಂಗ್ ಆಟ ಭಾರತಕ್ಕೆ ಮತ್ತೊಂದು ಅಮೂಲ್ಯ ಗೆಲುವು ತಂದುಕೊಟ್ಟಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟಕ್ಕೆ ಮತ್ತೊಮ್ಮೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಕೂಡ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನ ಆಟವನ್ನು ಮುಕ್ತಕಂಠದಿಂದ ಹೊಗಳಿ ಮೆಚ್ಚುಗೆ ಸೂಚಿಸಿದ್ದಾರೆ.
* ಕೊಹ್ಲಿಯ ಈ ಅದ್ಭುತ ಇನ್ನಿಂಗ್ಸ್ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದು ಹೀಗೆ: "ವಿರಾಟ್ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಕಳೆದ ಹಲವಾರು ವರ್ಷಗಳಿಂದ ನಾವು ಅವರ ಇಂಥಾ ಆಟವನ್ನು ನೋಡಿಕೊಂಡು ಬಂದಿದ್ದೇವೆ. ಇಂಥಾ ಸಂದರ್ಭದಲ್ಲಿ ಆತನಿಗೆ ಆತನೇ ಬೆಂಬಲವನ್ನು ನೀಡಿಕೊಂಡು ಬಂದಿದ್ದಾರೆ. ಕೊನೆಯ ಹಂತದಲ್ಲಿ ಕೆಲ ವಿಕೆಟ್‌ಗಳು ಉರುಳಿದಾಗ ನಮ್ಮ ಮೇಲೆ ಒತ್ತಡವಿತ್ತು. ಆದರೆ ಕೊಹ್ಲಿ ಹಾಗೂ ಜಡೇಜಾ ಈ ಗೆಲುವವನ್ನು ನಮ್ಮದಾಗಿಸಿದರು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
* ನ್ಯೂಜಿಲೆಂಡ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ ಮತ್ತು ಆತನಿಗಿಂತ ಉತ್ತಮ ಫಿನಿಶರ್ ಇರಲು ಸಾಧ್ಯವಿಲ್ಲ ಎಂದು ಗಮನ ಸೆಳೆದಿದ್ದಾರೆ. "10 ವರ್ಷಗಳ ಹಿಂದೆ ಬಹುಶಃ ಯಾವುದೇ ಫಿನಿಶರ್ ಇರಲಿಲ್ಲ, ವಿರಾಟ್ ಕೊಹ್ಲಿ ಅವರು ಗೆಲ್ಲಿಸಿರುವ ಪಂದ್ಯಗಳ ಸಂಖ್ಯೆಯಿಂದಾಗಿ ಅವರಿಗಿಂತ ಉತ್ತಮ ಫಿನಿಶರ್ ಇರಲು ಸಾಧ್ಯವಿಲ್ಲ. ಹೀಗಾಗಿ 5, 6 ಮತ್ತು 7ನೇ ಕ್ರಮಾಂಕಗಳನ್ನು ಮಾತ್ರ ಫಿನಿಶರ್ ಎಂದು ಕರೆಯಬೇಡಿ. ಕೊನೆಯ ರನ್ ಗಳಿಸುವವನು ಫಿನಿಶರ್,'' ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
* ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ದಿಗ್ಗಜ ವೇಗದ ಬೌಲರ್ ಶೇನ್ ಬಾಂಡ್ ಮುಂದಿನ ಐಪಿಎಲ್ ಆವೃತ್ತಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದು ಸಹಾಯಕ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖಚಿತಪಡಿಸಿದೆ.
* ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಟಗಾರ ವೇಗದ ಬೌಲರ್ ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಒಟ್ಟು ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪ್ರದರ್ಶನವನ್ನು ಹೊಗಳಿರುವ ಶೋಯೆಬ್ ಅಖ್ತರ್ ಈ ಬಾರಿ ಭಾರತ ಈ ವಿಶ್ವಕಪ್ ಟೂರ್ನಿ ಗೆಲ್ಲದೇ ಇರಲು ಕಾರಣಗಳೇ ಇಲ್ಲ ಎಂದಿದ್ದಾರೆ. "ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಪರಿಪೂರ್ಣವಾದ ತಂಡ ಎನಿಸಿಕೊಳ್ಳುತ್ತದೆ. ಹಾಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾತ ತಂಡ ಗೆಲುವು ಸಾಧಿಸದೇ ಇರಲು ಯಾವುದೇ ಕಾರಣಗಳು ಕೂಡ ನನಗೆ ಕಾಣಿಸುತ್ತಿಲ್ಲ" ಎಂದಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್.
* ಇಂಗ್ಲೆಂಡ್ ತಂಡಕ್ಕೆ ಗಾಯದ ಆಘಾತ ಎದುರಾಗಿದೆ. ತಂಡದ ವೇಗದ ಬೌಲರ್ ರೀಸ್ ಟೋಪ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೈಬೆರಳಿದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಿಗೆ ರೀಸ್ ಟೋಪ್ಲಿ ಅಲಭ್ತವಾಗುವುದು ದೃಢಪಟ್ಟಿದೆ. ಇದೀಗ ರೀಸ್ ಟೋಪ್ಲಿ ಬದಲಿಗೆ ಮತ್ತೋರ್ವ ವೇಗದ ಬೌಲರ್‌ಗೆ ತಂಡದಲ್ಲಿ ಅವಕಾಶ ದೊರೆತಿದೆ.
* ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಆಘಾತಕಾರಿ ಸೋಲಿನ ಬಳಿಕ ಮತ್ತೊಮ್ಮೆ ತಿರುಗಿ ಬಿದ್ದಿರುವುದು ಸ್ಪಷ್ಟವಾಗಿದೆ. ಇಂಗ್ಲೆಂಡ್ ವಿರುದ್ಧ ಭರ್ಜರಿ 229 ರನ್‌ಗಳನ್ನು ಬಾರಿಸುವ ಮೂಲಕ ಮತ್ತೆ ತನ್ನ ಗೆಲುವಿನ ಲಯಕ್ಕೆ ಮರಳಿದೆ. ಇದೀಗ ಟೂರ್ನಿಯಲ್ಲಿ ತನ್ನ ಐದನೇ ಪಂದ್ಯವನ್ನಾಡಲು ದಕ್ಷಿಣ ಆಫ್ರಿಕಾ ತಂಡ ಸಜ್ಜಾಗಿದ್ದು ಈ ಸಂದರ್ಭದಲ್ಲಿ ಬಾಂಗ್ಲಾದೇಶ ಎದುರಾಳಿಯಾಗಿ ಕಣಕ್ಕಿಳಿಯಲಿದೆ.