For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 29: ಇಂಗ್ಲೆಂಡ್‌ಗೆ ಸೋಲುಣಿಸಿದ ಭಾರತ; ಸತತ 6ನೇ ಪಂದ್ಯ ಗೆದ್ದ ರೋಹಿತ್ ಪಡೆ: ಕ್ರೀಡಾ ಲೋಕದ ಇಂದಿನ ಸುದ್ದಿ

* ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಜೈತಯಾತ್ರೆಗೆ ಮುಂದುವರಿದಿದೆ. ಏಕಾನ ಕ್ರೀಡಾಂಗಣದಲ್ಲಿ ನಡದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 100 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

* ಟೀಮ್ ಇಂಡಿಯಾ ನೀಡಿದ 230 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ನೀಡುವ ಮುನ್ಸೂಚನೆ ನೀಡಿತ್ತು. ಆದರೆ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಅದಕ್ಕೆ ಅವಕಾಶ ನೀಡಲಿಲ್ಲ. ಅದಾದ ಬಳಿಕ ಮೊಹಮ್ಮದ್ ಶನಿ ಅಖಾಡಕ್ಕೆ ಇಳಿದು ಮತ್ತಷ್ಟು ಆಘಾತ ನೀಡಿದರು. ಇದರಿಂದ ಚೇತರಿಸಿಕೊಳ್ಳಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 129 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದೆ.

October 29, what happened in sports World: Todays Top sports news and headlines

* ಸದ್ಯ ನಡೆಯುತ್ತಿರುವ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಆತಿಥೇಯ ಪಾಕಿಸ್ತಾನದೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಪಡೆಯುತ್ತವೆ. ವರದಿಗಳ ಪ್ರಕಾರ, ಟೂರ್ನಿಯ ಅರ್ಹತೆಯ ಸನ್ನಿವೇಶವನ್ನು 2021ರಲ್ಲಿ ಐಸಿಸಿ ಮಂಡಳಿಯು ಅಂತಿಮಗೊಳಿಸಿದೆ. ಆದಾಗ್ಯೂ, ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ಮುಂದಿನ ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆಯ ಸನ್ನಿವೇಶದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ ಹಲವಾರು ಕ್ರಿಕೆಟ್ ಮಂಡಳಿಗಳಿಗೆ ಈ ಬೆಳವಣಿಗೆಯು ಆಶ್ಚರ್ಯವನ್ನುಂಟು ಮಾಡಿದೆ.

* ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಶ್ರೀಲಂಕಾ ತಂಡಕ್ಕೆ ಗಾಯದ ಆಘಾತ ಮುಂದುವರಿದಿದೆ. ತಂಡದ ವೇಗದ ಬೌಲರ್ ಲಹಿರು ಕುಮಾರ ಕೂಡ ಗಾಯಕ್ಕೆ ತುತ್ತಾಗಿದ್ದು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ತೊಡೆ ನೋವಿಗೆ ತುತ್ತಾದ ಲಹಿರು ಕುಮಾರ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬೀಳುವಂತಾಗಿದೆ.

* ಬಾಂಗ್ಲಾದೇಶ ವಿರುದ್ಧದ ಮುಂದಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ತಮ್ಮ ನೆಚ್ಚಿನ ಮೂವರು ಬ್ಯಾಟರ್‌ಗಳನ್ನು ಹೆಸರಿಸಿದ್ದಾರೆ. ಬಾಬರ್ ಅಜಂ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಅನುಭವಿ ಕೇನ್ ವಿಲಿಯಮ್ಸನ್ ಅವರನ್ನು ನೆಚ್ಚಿನ ಬ್ಯಾಟರ್‌ಗಳೆಂದು ಬಹಿರಂಗಪಡಿಸಿದ್ದಾರೆ.

* ಶನಿವಾರ, ಅಕ್ಟೋಬರ್ 29ರಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಭಾರತದ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿ ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು. ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 36 ವರ್ಷದ ಡೇವಿಡ್ ವಾರ್ನರ್ ತಮ್ಮ ವೈಯಕ್ತಿಕ ಹೆಗ್ಗುರುತನ್ನು ಸಾಧಿಸಿದರು. ಡೇವಿಡ್ ವಾರ್ನರ್ ಈವರೆಗೆ ತಾವು ಆಡಿದ 24 ವಿಶ್ವಕಪ್ ಪಂದ್ಯಗಳಲ್ಲಿ 63.86ರ ಸರಾಸರಿ ಮತ್ತು 102ರ ಸ್ಟ್ರೈಕ್ ರೇಟ್‌ನಲ್ಲಿ 1,405 ರನ್ ಕಲೆಹಾಕಿದ್ದಾರೆ. ಈ ವೇಳೆ ಆರು ವಿಶ್ವಕಪ್ ಶತಕಗಳನ್ನು ಗಳಿಸಿದ್ದಾರೆ ಇದು ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಆಗಿದೆ. ಅಲ್ಲದೆ, ನಾಲ್ಕು ಅರ್ಧ ಶತಕಗಳು ಮತ್ತು ಅತ್ಯುತ್ತಮ ವೈಯಕ್ತಿಕ ಸ್ಕೋರ್ 178 ರನ್ ಆಗಿದೆ.

Story first published: Sunday, October 29, 2023, 23:52 [IST]
Other articles published on Oct 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+