For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 30: ಲಂಕಾಗೆ ಸೋಲುಣಿಸಿದ ಅಫ್ಘನ್; ಪಾಕ್ ಸೋಲಿಗೆ ಮೊದಲ ಬಲಿ: ಕ್ರೀಡಾ ಲೋಕದ ಇಂದಿನ ಸುದ್ದಿ

* ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಭರ್ಜರಿ 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಅಫ್ಘನ್ ಪಡೆ ಅಂಕಪಟ್ಟಿಯಲ್ಲಿ ಈಗ 5ನೇ ಸ್ಥಾನವನ್ನು ಪಡೆದುಕೊಂಡಿದ್ದು ಸೆಮಿಫೈನಲ್ ಸ್ಪರ್ಧೆಯಲ್ಲಿ ತಾನು ಬಲಿಷ್ಠ ಹೋರಾಟಗಾರ ಎನ್ನುವುದನ್ನು ಸಾರಿದೆ.

* ಸದ್ಯ ನಡೆಯುತ್ತಿರುವ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಆತಿಥೇಯ ಪಾಕಿಸ್ತಾನದೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಪಡೆಯುತ್ತವೆ. ವರದಿಗಳ ಪ್ರಕಾರ, ಟೂರ್ನಿಯ ಅರ್ಹತೆಯ ಸನ್ನಿವೇಶವನ್ನು 2021ರಲ್ಲಿ ಐಸಿಸಿ ಮಂಡಳಿಯು ಅಂತಿಮಗೊಳಿಸಿದೆ. ಆದಾಗ್ಯೂ, ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ಮುಂದಿನ ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆಯ ಸನ್ನಿವೇಶದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ ಹಲವಾರು ಕ್ರಿಕೆಟ್ ಮಂಡಳಿಗಳಿಗೆ ಈ ಬೆಳವಣಿಗೆಯು ಆಶ್ಚರ್ಯವನ್ನುಂಟು ಮಾಡಿದೆ.

October 30, what happened in sports World: Todays Top sports news and headlines

* ಅಕ್ಟೋಬರ್ 29ರಂದು ಲಕ್ನೋ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಅಮೋಘ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ 59ನೇ ಗೆಲುವಾಯಿತು. ಈ ಮೂಲಕ ಆಸ್ಟ್ರೇಲಿಯಾದ ನಂತರ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವೆನಿಸಿತು. 5 ಬಾರಿಯ ಚಾಂಪಿಯನ್ ಆಸೀಸ್ ತಂಡ 73 ವಿಶ್ವಕಪ್ ಪಂದ್ಯಗಳ ಗೆಲುವುಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರತಿಷ್ಠಿತ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಇದೀಗ ನ್ಯೂಜಿಲೆಂಡ್‌ನ 58 ವಿಶ್ವಕಪ್ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು ಹಿಂದಿಕ್ಕಿದೆ. ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ 50 ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 47, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ 43 ಪಂದ್ಯಗಳ ಗೆಲುವು ಸಾಧಿಸಿವೆ.

* ಭಾನುವಾರದಂದು ಭಾರತ ತಂಡದ ಸತತ ಆರನೇ ಗೆಲುವಿನ ಬಳಿಕ, ವಿಕೆಟ್-ಕೀಪರ್ ಕೆಎಲ್ ರಾಹುಲ್ ಎರಡನೇ ಬಾರಿ ಅತ್ಯುತ್ತಮ ಫೀಲ್ಡರ್ ಪದಕ ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರೆನಿಸಿದರು. ಭಾರತ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲಾ ಬ್ಯಾಟರ್‌ಗಳು ಲೆಗ್-ಬಿಫೋರ್, ಬೌಲ್ಡ್ ಅಥವಾ ಸ್ಟಂಪ್ಡ್ ಆಗಿದ್ದರಿಂದ ಇಂಗ್ಲೆಂಡ್ ವಿರುದ್ಧ ಕ್ಯಾಚ್ ಪಡೆದ ಏಕೈಕ ಭಾರತೀಯ ಆಟಗಾರನೆಂದರೆ ಅದು ಕೆಎಲ್ ರಾಹುಲ್.

* ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಬ್ಬರವನ್ನು ಮುಂದುವರೆಸಿದ್ದಾರೆ. ವಿಶ್ವಕಪ್‌ನ 29ನೇ ಪಂದ್ಯದಲ್ಲಿ ರೋಹಿತ್ ದೊಡ್ಡ ಸಾಧನೆಗೆ ತಮ್ಮ ಹೆಸರು ನಮೂದಿಸಿದ್ದಾರೆ. ಲಕ್ನೋ ಸ್ಟೇಡಿಯಂನಲ್ಲಿ ಪ್ರಸಕ್ತ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ, ರೋಹಿತ್ 66 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಈ ಅವಧಿಯಲ್ಲಿ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18000 ರನ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ 5ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

* ಇಂಗ್ಲೆಂಡ್ ವಿರುದ್ಧ ಗೆಲುವಿನ ನಂತರ ಪಾಕಿಸ್ತಾನ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಅವರು ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು "ವಿಶ್ವದಲ್ಲೇ ಅತ್ಯುತ್ತಮ' ಎಂದು ಕರೆದಿದ್ದಾರೆ. "ಭಾರತೀಯ ವೇಗಿಗಳು ಅದ್ಭುತವಾಗಿ ಕಾಣುತ್ತಾರೆ. ಭಾರತದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜಸ್ಪ್ರೀತ್ ಬುಮ್ರಾ ಜಗತ್ತಿನಲ್ಲೇ ಉತ್ತಮವಾಗಿ ಕಾಣುತ್ತಾರೆ. ಮೊಹಮ್ಮದ್ ಸಿರಾಜ್ ರನ್ ಬಿಟ್ಟುಕೊಟ್ಟರು ಮತ್ತು ಮೊಹಮ್ಮದ್ ಶಮಿ ಇಂಗ್ಲೆಂಡ್‌ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದರು," ಎಂದು ವಾಸಿಂ ಅಕ್ರಮ್ ತಿಳಿಸಿದರು.

* ಪಾಕಿಸ್ತಾನ ತಂಡದ ಈ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಕ್ಕಿಳಿಸಬೇಕು ಎನ್ನುವ ಕೂಗು ಜೋರಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ನ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥ ಇನ್‌ಜಮಾಮ್ ಉಲ್ ಹಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿನ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಮೊದಲ ವಿಕೆಟ್ ಪತನವಾಗಿದೆ.

* ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಜೋಡಿ ಪ್ರಸ್ತುತ ಅತ್ಯಂತ ವಿಧ್ವಂಸಕವಾಗಿ ಗೋಚರಿಸುತ್ತಿದೆ. ಈ ಸಂದರ್ಭದಲ್ಲಿ ಸ್ವತಃ ಟೀಮ್ ಇಂಡಿಯಾದ ಸ್ಟಾರ್ ವೇಗಿಯಾದ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ ಜೊತೆಗಿನ ಬೌಲಿಂಗ್ ಜೊತೆಯಾಟದ ಬಗ್ಗೆ ಮಾತನಾಡಿ ಅನುಭವಿ ವೇಗಿಯನ್ನು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೊಹಮ್ಮದ್ ಶಮಿ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಓರ್ವ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Story first published: Monday, October 30, 2023, 23:55 [IST]
Other articles published on Oct 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+