ಅಕ್ಟೋಬರ್ 31: ವಾಂಖೆಡೆಯಲ್ಲಿ ಸಚಿನ್ ಪ್ರತಿಮೆ; ಪಾಕಿಸ್ತಾನಕ್ಕೆ ಗೆಲುವು: ಕ್ರೀಡಾ ಲೋಕದ ಇಂದಿನ ಸುದ್ದಿ
* ಸತತ ನಾಲ್ಕು ಸೋಲು ಅನುಭವಿಸಿದ್ದ ಪಾಕಿಸ್ತಾನ ಕಡೆಗೂ ಸೋಲಿನ ಸರಪಳಿ ಮುರಿದುಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಭರ್ಜರಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಏಳನೇ ಪಂದ್ಯದಲ್ಲಿ ಪಾಕ್ ಪಡೆ 3ನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಬಾಂಗ್ಲಾದೇಶದ ಸೋಲಿನ ಸರಪಳಿ ಮುಂದುವರಿದಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ ತಂಡ 205 ರನ್‌ಗಳ ಸುಲಭ ಗುರಿಯನ್ನು ನಿಗದಿಪಡಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ನಿರಾಯಾಸವಾಗಿ ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.
* ಸತತ ನಾಲ್ಕು ಸೋಲುಗಳ ಬಳಿಕ ಪಾಕಿಸ್ತಾನ ತಂಡ ಮೊದಲ ಗೆಲುವು ಸಾಧಿಸಿದೆ. ಈ ಮೂಲಕ ಬಾಬರ್ ಅಜಂ ಪಡೆ ಮತ್ತೊಮ್ಮೆ ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಮೂರನೇ ಗೆಲುವು ಸಾಧಿಸಿದ್ದು ಪ್ರಸ್ತುತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈಗ ಪಾಕಿಸ್ತಾನ ತಂಡ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಕ್ಕಿಂತ ಕೇವಲ ಎರಡು ಅಂಕಗಳಷ್ಟು ಮಾತ್ರವೇ ಹಿಂದುಳಿದಿದೆ. ಆದರೆ ಗಮನಾರ್ಹ ಅಂಶವೆಂದರೆ ಈ ಎರಡು ತಂಡಗಳಿಗಿಂತಲೂ ಪಾಕಿಸ್ತಾನ ತಂಡ ಒಂದು ಹೆಚ್ಚು ಪಂದ್ಯವನ್ನು ಆಡಿದೆ.

* ಬುಧವಾರ, ನವೆಂಬರ್ 1ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯು (ಎಂಸಿಎ) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಬಹು ದಾಖಲೆಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್‌ಗೆ, ಐಕಾನಿಕ್ ವಾಂಖೆಡೆ ಕ್ರೀಡಾಂಗಣ ಯಾವಾಗಲೂ ವಿಶೇಷವಾಗಿತ್ತು. ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದ ಮುನ್ನಾದಿನದಂದು 200 ಟೆಸ್ಟ್ ಪಂದ್ಯಗಳ ಅನುಭವಿ ಸಚಿನ್ ತೆಂಡೂಲ್ಕರ್ ಅವರ ಜೀವಮಾನ ಗಾತ್ರದ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತದೆ.
* ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಹರ್ಭಜನ್ ಸಿಂಗ್ ಜೊತೆ ಕಾಲು ಬಿಚ್ಚಿ ಇರ್ಫಾನ್ ಪಠಾಣ್ ಮತ್ತೊಮ್ಮೆ ತಮ್ಮ ನೃತ್ಯದ ಹೆಜ್ಜೆ ಹಾಕಿದರು. ಅಫ್ಘಾನಿಸ್ತಾನ ತಂಡದ ಗೆಲುವಿಗಾಗಿ ಅಭಿನಂದಿಸುತ್ತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನೃತ್ಯದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. "ಅಫ್ಘಾನಿಸ್ತಾನ ತಂಡದಿಂದ ಎಂತಹ ಅದ್ಭುತ ಗೆಲುವು. ವಿಶ್ವಕಪ್‌ನಲ್ಲಿ ನಿಮ್ಮ 3ನೇ ಗೆಲುವಿಗೆ ಅಭಿನಂದನೆಗಳು. 3 ಮಾಜಿ ವಿಶ್ವ ಚಾಂಪಿಯನ್‌ಗಳನ್ನು ಸೋಲಿಸಿದ್ದೀರಿ," ಎಂದು ಇರ್ಫಾನ್ ಪಠಾಣ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
* ಅರ್ಜೆಂಟೀನಾದ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಸೋಮವಾರ, ಅಕ್ಟೋಬರ್ 30ರಂದು ಫುಟ್ಬಾಲ್ ಕ್ರೀಡೆಯ ಇತಿಹಾಸದಲ್ಲಿ ಅತಿ ಹೆಚ್ಚು ದಾಖಲೆಯ 8ನೇ ಬಾರಿಗೆ ಬ್ಯಾಲನ್ ಡಿ'ಓರ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಹಿಂದೆ 2009, 2010, 2011, 2012, 2015, 2019, 2021 ಮತ್ತು ಇದೀಗ 2023ರಲ್ಲಿ ಬ್ಯಾಲನ್ ಡಿ'ಓರ್ ಕಿರೀಟಕ್ಕೆ ಲಿಯೋನೆಲ್ ಮೆಸ್ಸಿ ಭಾಜನರಾಗಿದ್ದಾರೆ.
* ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ಅವಧಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ತುಂಬಾ ಹರ್ಷಚಿತ್ತದಿಂದ ಕಾಣುತ್ತಿದ್ದರು. ಮೈದಾನದ ಬದಿಯಲ್ಲಿ ಮೊಹಮ್ಮದ್ ರಿಜ್ವಾನ್ ಇಂಡಿಯಾ ಟುಡೇ-ಆಜ್ ತಕ್ ಜೊತೆಗೆ ತಮಾಷೆಯ ಮಾತುಕತೆ ನಡೆಸಿದರು. ಈಡನ್‌ನಲ್ಲಿ ನಡೆಯಲಿರುವ ಮುಂದಿನ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಬಗ್ಗೆಯೂ ಅವರನ್ನು ಕೇಳಲಾಯಿತು. ಈ ವೇಳೆ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಬಗ್ಗೆ ಕೇಳಿದಾಗ, ಅವರು ಕೊಹ್ಲಿಗೆ ವಿಶ್ ತಿಳಿಸಿ, "ನವೆಂಬರ್ 5ರಂದು ವಿರಾಟ್ ಕೊಹ್ಲಿ ಜನ್ಮದಿನ ಎಂದು ತಿಳಿಯುವುದು ಸಂತೋಷವಾಗಿದೆ. ಅವರಿಗೆ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.
* ವಿಶ್ವಕಪ್‌ನಲ್ಲಿ ಇಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪ್ರಮುಖ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಮೈಲುಗಲ್ಲನ್ನು ದಾಟಿದ ಸಾಧನೆಯನ್ನು ಶಾಹೀನ್ ಶಾ ಅಫ್ರಿದಿ ಮಾಡಿದ್ದಾರೆ. ಇನ್ನು ಈ ದಾಖಲೆಯನ್ನು ಅತ್ಯಂತ ವೇಗವಾಗಿ ಸಾಧಿಸಿದ ಮೂರನೇ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.
* "ವಿರಾಟ್ ಕೊಹ್ಲಿಯ ವೃತ್ತಿ ಜೀವನ ನಿಜಕ್ಕೂ ಅಮೋಘ. ಅದರಲ್ಲೂ ಅವರ ಏಕದಿನ ಕ್ರಿಕೆಟ್‌ನ ದಾಖಲೆಗಳನ್ನು ಅಂಕಿಅಂಶಗಳನ್ನು ನೋಡಿದಾಗ ನಿಜಕ್ಕೂ ಅದ್ಭುತವೆನಿಸುತ್ತದೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಅವರಿಂದ ಬಂದಿರುವ ಗುಣಮಟ್ಟದ ಪ್ರದರ್ಶನವನ್ನು ನೋಡಿದಾಗ ನನ್ನ ಪ್ರಕಾರ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಮೀರಿ ನಿಂತಿದ್ದಾರೆ" ಎಂದಿದ್ದಾರೆ ದಕ್ಷಿಣ ಆಪ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications