ಅಕ್ಟೋಬರ್ 9: ರಾಹುಲ್- ಕೊಹ್ಲಿ ಆಟಕ್ಕೆ ಮೆಚ್ಚುಗೆಯ ಮಹಾಪೂರ; ದಕ್ಷಿಣ ಆಫ್ರಿಕಾಗೆ ನಿಷೇಧದ ಆತಂಕ: ಕ್ರೀಡಾ ಲೋಕದ ಇಂದಿನ ಸುದ್ದಿ
*ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 200 ರನ್ ಚೇಸ್‌ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಣಾಯಕ ಅರ್ಧಶತಕ ಬಾರಿಸುವ ಮೂಲಕ ವಿಶ್ವಕಪ್ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಆಪತ್ಬಾಂಧವ ಎಂದು ಸಾಬೀತುಪಡಿಸಿದರು. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 9ನೇ ಅರ್ಧಶತಕ್ಕೂ ಅಧಿಕ ರನ್ ಗಳಿಸುವ ಮೂಲಕ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 21 ಫಿಫ್ಟಿ ಪ್ಲಸ್ ಸ್ಕೋರ್ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
* ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾ ತಂಡಗಳು ಕೂಡ ತಲಾ ಒಂದೊಂದು ಪಂದ್ಯಗಳನ್ನು ಈಗ ಆಡಿದೆ. ಟೀಮ್ ಇಂಡಿಯಾ ಭಾನುವಾರ ಆಸ್ಟ್ರೇಲಿಯಾ ತಂಡವನ್ನು ಭಾನುವಾರ ಎದುರಿಸಿದ್ದು ಈ ಪಂದ್ಯದಲ್ಲಿ ಸಮೋಘ ಪ್ರದರ್ಶನದ ಮೂಲಕ ಸ್ಮರಣೀಯ ಗೆಲುವು ಸಾಧಿಸಿದೆ ಭಾರತ. ಈ ಗೆಲುವುನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ತನ್ನ ಖಾತೆಯನ್ನು ತೆಗೆದಿದೆ. ಎರಡು ಅಂಕಗಳು ಭಾರತ ತಂಡದ ಖಾತೆಗೆ ಸೇರ್ಪಡೆಯಾಗಿದ್ದು ಆಸ್ಟ್ರೇಲಿಯಾ ತಂಡ ಆರಂಭೀಕ ಪಂದ್ಯದಲ್ಲಿಯೇ ಆಘಾತಕಾರಿ ಸೋಲು ಕಂಡಿದೆ. ಆದರೆ ಈ ಅದ್ಭುತ ಗೆಲುವಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಬಾಂಗ್ಲಾದೇಶಗಳಿಗಿಂತಲೂ ಹಿಂದಿದೆ.

* ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ರೋಮಾಂಚನಕಾರಿ ಗೆಲುವನ್ನು ಸಾಧಿಸಿರುವ ಟೀಮ್ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸಂಕಷ್ಟದ ಸ್ಥಿತಿಯಿಂದ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಟೀಮ್ ಇಂಡಿಯಾದ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಈ ಪ್ರದರ್ಶನ ನಾಯಕ ರೋಹಿತ್ ಶರ್ಮಾಗೂ ಸಹಜವಾಗಿಯೇ ದೊಡ್ಡ ನಿರಾಳತೆಯನ್ನುಂಟು ಮಾಡಿದೆ. "ಬೇರೆ ಬೇರೆ ತಾಣಗಳಲ್ಲಿ ಆಡುತ್ತಿರುವುದು ನಮಗೆ ಟೂರ್ನಿ ಮುಂದುವರಿಯುತ್ತಿದ್ದಂತೆಯೇ ದೊಡ್ಡ ಸವಾಲಾಗಲಿದೆ. ನಾವು ಅದಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧವಾಗಬೇಕಿದ್ದರೆ ನಮ್ಮ ಸಂಯೋಜನೆಯಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
" ಟೀಮ್ ಇಂಡಿಯಾ ಅಗ್ರ ಕ್ರಮಾಂಕದ ಮೂವರು ಆಟಗಾರರಾದ ಇಶಾನ್ ಕಿಶನ್, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಅವರನ್ನು ಕೇವಲ 2 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ಈ ಮೂವರು ಆಟಗಾರರು ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಅನುಭವಿ ಆಟಗಾರ ವಿರಾಟ್ ಕೊಹ್ಲಿ ನೀಡಿದ ಕ್ಯಾಚನ್ನು ಮಿಚೆಲ್ ಮಾರ್ಶ್ ಹಿಡಿದಿದ್ದರು ಅವರು ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆದರೆ ಅದೃಷ್ಟ ಭಾರತದ ಪರವಾಗಿತ್ತು. ಮಾರ್ಶ್ ಆ ಕ್ಯಾಚ್ ಕೈಚೆಲ್ಲಿದ್ದರು. ಇದುವೇ ಆರ್ ಅಶ್ವಿನ್ ಡ್ರೆಸ್ಸಿಂಗ್ ರೂಮ್ ಬಿಟ್ಟು ಆಚೆ ಹೋಗಲು ಕಾರಣವಾಯಿತು ಎಂದು ಸ್ವತಃ ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ.
* ಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿರುವ ಶುಬ್ಮನ್ ಗಿಲ್ ಮುಂದಿನ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಶುಬ್ಮನ್ ಗಿಲ್ ಅಫ್ಘಾನಿಸ್ತಾನ ವಿರುದ್ಧ ಬುಧವಾರ ದೆಹಲಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಅಲಭ್ಯವಾಗುವುದು ಬಹುತೇಕ ನಿಶ್ಚಿತ. ಅಲ್ಲದೆ ಶನಿವಾರ ಭಾರತ ಪಾಕಿಸ್ತಾನ ತಂಡವನ್ನು ಅಹ್ಮದಾಬಾದ್‌ನಲ್ಲಿ ಎದುರಿಸಲಿದ್ದು ಈ ಪಂದ್ಯದಕ್ಕೂ ಗಿಲ್ ಆಡುವ ಸಾಧ್ಯತೆಯ ಬಗ್ಗೆ ಅನುಮಾನಗಳು ಉಂಟಾಗಿದೆ.
* ಚೆನ್ನೈನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿಯ ಅದ್ಭುತ ಜೊತೆಯಾಟದ ನೆರವಿನಿಂದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಭಾರತ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಾಗಿ ಕರ್ನಾಟಕ ಕುವರ ಕೆಎಲ್ ರಾಹುಲ್ ಅವರನ್ನು ಶ್ಲಾಘಿಸಿದ್ದಾರೆ. ಕೆಎಲ್ ರಾಹುಲ್ ತಮ್ಮ ಮೂಲ ಆಟಕ್ಕೆ ಮರಳಿದ್ದಾರೆ. ಆಟಕ್ಕೆ ಅನುಭವ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಶಕ್ತಿಯನ್ನು ತರುತ್ತಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದರು.
* ದಕ್ಷಿಣ ಆಫ್ರಿಕಾ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ನಿಷೇಧಕ್ಕೆ ಒಳಗಾಗುವ ಆತಂಕಕ್ಕೆ ಸಿಲುಕಿದೆ. ಕ್ರಿಕೆಟ್ ಬಜ್ ವರದಿಯ ಪ್ರಕಾರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ(WADA)ಯ ನಿಯಮಗಳನ್ನು ದಕ್ಷಿಣ ಆಫ್ರಿಕಾ ಅನುಸರಿಸಿಲ್ಲ ಎನ್ನುವ ಕಾರಣಕ್ಕೆ ಈಗ ಈ ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಿಂದ ನಿರ್ಬಂಧಕ್ಕೆ ಒಳಗಾಗುವ ಸಾಧ್ಯತೆಯೂ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications