ಕೊರೊನಾ ವೈರಸ್ ಆತಂಕದ ಮಧ್ಯೆ ಒಲಿಂಪಿಕ್ ಜ್ಯೋತಿ ಜಪಾನ್‌ಗೆ ಆಗಮನ

ಕೊರೊನಾ ಭೀತಿಯ ಮಧ್ಯೆಯೂ ಈ ಬಾರಿಯ ಒಲಿಂಪಿಕ್ಸ್‌ಗೆ ಜಪಾನ್ ಸಿದ್ದವಾಗುತ್ತಿದೆ. ಜಪಾನ್ ಕ್ರೀಡಾ ಸಚಿವರು ಈಗಾಗಲೆ ಜಪಾನ್ ಒಲಿಂಪಿಕ್ ಆಯೋಜನೆಗೆ ಸಿದ್ದ ಒಂಬ ಮಾತು ಹೇಳಿದ್ದರು. ಇದೀಗ ಒಲಿಂಪಿಕ್ಸ್ ಜ್ಯೋತಿ ಜಪಾನ್‌ಅನ್ನು ಪ್ರವೇಶ ಮಾಡಿದೆ.
ಗ್ರೀಸ್‌ನಿಂದ ಒಲಿಂಪಿಕ್ ಟಾರ್ಚ್ ಹೊತ್ತ ವಿಮಾನವು ಜಪಾನ್‌ನ ವಾಯುವ್ಯ ಕರಾವಳಿಗೆ ಶುಕ್ರವಾರ ಬಂದಿಳಿದಿದೆ. ಒಲಿಂಪಿಕ್ಸ್ ಜ್ಯೋತಿ ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ ಮಾಟ್ಸುಶಿಮಾ ವಾಯುನೆಲೆಗೆ ಆಗಮಿಸಿತು. ಇನ್ನು ಈ ಜ್ಯೋತಿ ಟೊಹೊಕು ಪ್ರದೇಶದಲ್ಲಿ ಪ್ರವಾಸ ಮಾಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಾರ್ಚ್ 26ರ ವರೆಗೆ ಫುಕುಶಿಮಾದಲ್ಲಿ ಅಧಿಕೃತ ಕಿಕ್-ಆಫ್ ಸಮಾರಂಭದವರೆಗೆ ಇದು ಮುಂದುವರಿಯಲಿದೆ. ಇದನ್ನು 'ರಿಕವರಿ ಫ್ಲೇಮ್' ಎಂದು ಕರೆಯಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇನ್ನು ಒಲಿಂಪಿಕ್ಸ್ ಜ್ಯೋತಿ ಸಾಗುವ ಹಾದಿಯಲ್ಲಿ ಜನರು ಸೇರದಂತೆ ಆಯೋಜಕರು ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈ ಮನವಿಯನ್ನು ಮಾಡಿದ್ದಾರೆ ಒಲಿಂಪಿಕ್ಸ್ ಆಯೋಜಕರು. ಈ ಹಿನ್ನೆಲೆಯಲ್ಲಿ ಜನರ ದಟ್ಟಣೆಯಿಲ್ಲದೆ ಒಲಿಂಪಿಕ್ಸ್ ಜ್ಯೋತಿ ರಿಲೆ ಮುಂದುವರಿಯಲಿದೆ.
ಒಲಿಂಪಿಕ್ಸ್ ಆಯೋಜಕರು ಒಲಿಂಪಿಕ್ಸ್ ಆರಂಭದ ಬಗ್ಗೆ ಮತ್ತೆ ಹೇಳಿಕೆಯನ್ನು ನೀಡಿದ್ದಾರೆ. ನಿಗದಿಯಾಗಿರುವ ರೀತಿಯಂತೆಯೇ ಒಲಿಂಪಿಕ್ಸ್ ಜುಲೈ 24ರಿಂದ ಆರಂಭವಾಗಿ ಆಗಸ್ಟ್ 9ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಆದರೆ ವಿಶ್ವದಲ್ಲಿ ಕೊರೊನಾ ವೈರಸ್ ಭೀತಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಮುಂದೂಡುವುದು ಅಥವಾ ರದ್ದುಗೊಳಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications