Neeraj Chopra: ಮತ್ತೊಂದು ಪದಕದ ಭರವಸೆ ಮೂಡಿಸಿದ ಪೋಸ್ಟರ್ ಬಾಯ್
ಭಾರತದ ಪೋಸ್ಟರ್ ಬಾಯ್ ಎಂದೇ ಖ್ಯಾತಿ ಪಡೆದಿರುವ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಕ್ರೀಡಾ ಪಟು ನೀರಜ್ ಚೋಪ್ರಾ, ಮತ್ತೊಂದು ಐತಿಹಾಸಿಕ ಸಾಧನೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
2024 ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ ನಡೆಯಲಿದೆ. ಮೆಗಾ ಈವೆಂಟ್‌ಗಾಗಿ ಭಾರತದ ಅಥ್ಲೀಟ್‌ಗಳು ಶ್ರಮಿಸುತ್ತಿದ್ದಾರೆ. ಎಲ್ಲಾ ಭಾರತೀಯ ಅಭಿಮಾನಿಗಳ ಕಣ್ಣು ಮತ್ತೊಮ್ಮೆ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಮೇಲೆ ನೆಟ್ಟಿದೆ. ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಒಲಿಂಪಿಕ್ಸ್‌ಗೂ ಮುನ್ನ ತಮ್ಮ ಫಿಟ್‌ನೆಸ್ ಕುರಿತು ಅಪ್‌ಡೇಟ್ ನೀಡಿದ್ದಾರೆ.

ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸ್ವಲ್ಪ ಸಮಯದವರೆಗೆ ಗಾಯದಿಂದಾಗಿ ಸಾಕಷ್ಟು ತೊಂದರೆಗೀಡಾಗಿದ್ದರು. ಈಗ ಅವರು ಸಂಪೂರ್ಣ ಫಿಟ್ ಆಗಿದ್ದು, ತರಬೇತಿಯತ್ತ ಸಂಪೂರ್ಣ ಗಮನ ಹರಿಸುತ್ತಿದ್ದಾರೆ.
ನೀರಜ್ ಹೇಳಿದ್ದೇನು?
ನೀರಜ್ ಚೋಪ್ರಾ ಅವರು ದೈಹಿಕವಾಗಿ ತುಂಬಾ ಉತ್ತಮ ಫಿಟ್ ಆಗಿದ್ದಾರೆ. ಮತ್ತು ಅವರು ಹಿಂದೆಂದೂ ಇಷ್ಟು ಉಲ್ಲಾಸವನ್ನು ತಮ್ಮಲ್ಲಿ ತಾವು ಅನುಭವಿಸಿರಲಿಲ್ಲ ಎಂದು ಹೇಳಿದರು. 2024 ರಲ್ಲಿ ಮೊದಲ ಬಾರಿಗೆ ಹೊರಾಂಗಣ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಮೊದಲು ಚೋಪ್ರಾ ಈ ವಾರದಿಂದ ಟರ್ಕಿಯಲ್ಲಿ ತರಬೇತಿಯನ್ನು ಪ್ರಾರಂಭಿಸುತ್ತಾರೆ.

ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ನಾನು ಉತ್ತಮ ಸ್ಥಿತಿಯಲ್ಲಿರಲು ಬಯಸುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ. ಇಲ್ಲಿಯವರೆಗೆ ನನ್ನ ಅಭ್ಯಾಸ ಅವಧಿಗಳು ತುಂಬಾ ಚೆನ್ನಾಗಿವೆ. ಶಕ್ತಿ ಮತ್ತು ತಂತ್ರದ ಹೊರತಾಗಿ, ನಾನು ಯಾವಾಗಲೂ ಫಿಟ್ನೆಸ್ಗೆ ಪೂರ್ಣ ಪ್ರಾಮುಖ್ಯತೆಯನ್ನು ನೀಡುತ್ತೇನೆ ಎಂದಿದ್ದಾರೆ.
ಬಹಳ ಸಮಯದ ನಂತರ ನಾನು ತುಂಬಾ ಲಯ ಕಂಡುಕೊಂಡಂತೆ ಕಾಣುತ್ತದೆ. ನೀವು ಭಾರತಕ್ಕಾಗಿ ಆಡುವಾಗ, ನಿಮ್ಮ ಭಾವನೆಗಳು ವಿಭಿನ್ನವಾಗಿರುತ್ತವೆ ಮತ್ತು ನಿಮ್ಮ ಉತ್ಸಾಹವು ದ್ವಿಗುಣವಾಗಿರುತ್ತದೆ. ನೀರಜ್ ಚೋಪ್ರಾ ಅವರ ಈ ಮಾತುಗಳು ಅವರು ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಿದ್ಧರಿದ್ದಾರೆ ಮತ್ತು ಮತ್ತೊಂದು ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ ಎಂದು ಸೂಚಿಸುತ್ತದೆ.
ಪದಕದ ನಿರೀಕ್ಷೆಯಲ್ಲಿದೆ
2024ರ ಒಲಿಂಪಿಕ್ಸ್‌ನಲ್ಲಿ ಭಾರತ ಹಲವು ಪದಕಗಳ ಭರವಸೆಯಲ್ಲಿದೆ. ಇತ್ತೀಚಿನ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಉತ್ತಮವಾಗಿದೆ. ಇದು ಇಲ್ಲಿಯವರೆಗಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಭಾರತ 107 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಸೇರಿವೆ. ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಈ ಪರಿಸ್ಥಿತಿಯಲ್ಲಿ ಭಾರತದ ಅಥ್ಲೀಟ್‌ಗಳು ಈ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆ ನಡೆಸುತ್ತಾರೆ ಎಂಬ ಲಕ್ಷಣಗಳು ಎದ್ದು ಕಾಣುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications