ಡಿಸೆಂಬರ್ 1ರವರೆಗೂ ಟೋಕಿಯೋ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಗಳು ರದ್ದು

ನವದೆಹಲಿ, ಏಪ್ರಿಲ್ 9: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತಾ ಸ್ಪರ್ಧಿಗಳನ್ನು ನಿರ್ಧರಿಸಲು ನಡೆಸಲಾಗುವ ಟ್ರಯಲ್ಸ್‌ಗಳನ್ನು 2020ರ ಏಪ್ರಿಲ್ 6ರಿಂದ ನವೆಂಬರ್ 30ರ ವರೆಗೂ ರದ್ದು ಮಾಡಿರುವುದಾಗಿ ವಿಶ್ವ ಅಥ್ಲೆಟಿಕ್ಸ್ ಘೋಷಿಸಿದೆ. ಕೊರೊನಾವೈರಸ್‌ನಿಂದಾಗಿ ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಸ್ಪರ್ಧೆಗಳು ಮುಂದೂಡಲ್ಪಟ್ಟಿದೆ.
'2019ರಿಂದ ಆರಂಭವಾಗಿರುವ ಟೋಕಿಯೋ ಒಲಿಂಪಿಕ್ಸ್ ಅರ್ಹತೆಗೆ ನೋಂದಾಯಿಸಿ, ಅವರವರ ಫೆಡರೇಶನ್ ಮತ್ತು ನ್ಯಾಷನಲ್ ಒಲಿಂಪಿಕ್ ಕಮಿಟಿಯ ಮೂಲಕ ಅರ್ಹತೆ ಗಿಟ್ಟಿಸಿಕೊಂಡವರು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಉಳಿದವರು ಮುಂದೂಡಲಾದ ಅರ್ಹತಾ ಸ್ಪರ್ಧೆಯ ಮೂಲಕ ಆಯ್ಕೆಯಾಗಬೇಕಾಗುತ್ತದೆ,' ಎಂದು ವರ್ಲ್ಡ್ ಅಥ್ಲೆಟಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಪುರುಷರ ಮತ್ತು ಮಹಿಳಾ ವಿಭಾಗದ 50 ಕಿ.ಮಿ. ವಾಕ್‌ರೇಸ್ ಮತ್ತು ಮ್ಯಾರಥಾನ್‌ಗೆ 31 ಮೇ 2021 ಕಡೆಯ ದಿನವಾಗಲಿದೆ, ಉಳಿದ ಕ್ರೀಡಾಸ್ಪರ್ಧೆಗಳ ಅಥ್ಲೀಟ್‌ಗಳ ಅರ್ಹತೆ ನಿರ್ಧರಿಸಲು 29 ಜೂನ್ 2021 ಕಡೇಯ ದಿನಾಂಕವಾಗಿದೆ ಎಂದು ವಿಶ್ವ ಅಥ್ಲೆಟಿಕ್ಸ್ ತಿಳಿಸಿದೆ.
ವಿಶ್ವ ಅಥ್ಲೆಟಿಕ್ಸ್‌ನ ಅಧ್ಯಕ್ಷ ಸೆಬಾಸ್ಟಿಯನ್ ಕೋ ಮಾತನಾಡಿ, 'ಅರ್ಹತಾ ಸ್ಪರ್ಧೆಗಳ ಮುಂದೂಡಿಕೆ ಇನ್ನಷ್ಡು ತಯಾರಿ ನಡೆಸಲು ಅವಕಾಶ ನೀಡಿದೆ ಎಂಬ ಅರ್ಥಪೂರ್ಣ ಅಭಿಪ್ರಾಯವನ್ನು ಅಥ್ಲೀಟ್‌ಗಳಿಂದ ಮತ್ತು ಕ್ರೀಡಾ ಕಮಿಟಿಗಳಿಂದ ಹೊರ ತೆಗೆಯಲು ಕೆಲಸ ಮಾಡಿದ ಎಲ್ಲರಿಗೂ ನಾನು ಆಭಾರಿ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications