ಟೋಕಿಯೋ ಒಲಿಂಪಿಕ್ಸ್‌ನಲ್ಲಿ 3ನೇ ಚಿನ್ನ ಗೆದ್ದು ದಾಖಲೆ ಬರೆದ ಆರ್ಚರ್ ಆನ್ ಸಾನ್

ಟೋಕಿಯೋ, ಜುಲೈ 30: ಎಂದಿನಂತೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ಸಾಕಷ್ಟು ದಾಖಲೆಗಳು ಸೃಷ್ಟಿಯಾಗುತ್ತಿದೆ. ಶುಕ್ರವಾರ ದಕ್ಷಿಣ ಕೊರಿಯಾದ ಆರ್ಚರ್ ಆನ್ ಸಾನ್ ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಆನ್ ಸಾನ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಒಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆರ್ಚರ್ ಆರ್ವ ಸಾಧಿಸಿದ ಅತ್ಯುನ್ನತ ಸಾಧನೆ ಇದಾಗಿದೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಆನ್ ಸಾನ್ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಪೂರೈಸಿದ್ದಾರೆ.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಆನ್ ಸಾನ್ ರಷ್ಯನ್ ಒಲಿಂಪಿಕ್ಸ್ ಸಮಿತಿಯ ಆಟಗಾರ್ತಿ ಎಲೆನಾ ಒಸಿಪೋವಾ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಭರ್ಜರಿ ಗೆಲುವು ಸಾಂಪಾದಿಸಿ ಚಿನ್ನದ ಪದಕವನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಎಲೆನಾ ಒಸಿಪೋವಾ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡರೆ ಇಟೆಲಿಯ ಲುಸಿಲ್ಲಾ ಬೊವಾರಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಫೈನಲ್‌ನಲ್ಲಿ ರೋಚಕ ಹಣಾಹಣಿ
ದಕ್ಷಿಣ ಕೊರಿಯಾದ ಆರ್ಚರ್ ಆನ್ ಸಾನ್ ಹಾಗೂ ರಷ್ಯನ್ ಒಲಿಂಪಿಕ್ಸ್ ಸಮಿತಿಯ ಆಟಗಾರ್ತಿ ಎಲೆನಾ ಒಸಿಪೋವಾ ವಿರುದ್ಧದ ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಆನ್ ಒಸಿಪೋವಾ ಅವರನ್ನು 6-5ರಷ್ಟು ಪ್ರಬಲ ಪೈಪೋಟಿಯಿಂದ ಕೂಡಿತ್ತು. ಟೈ ಬ್ರೇಕರ್ ಮೂಲಕ ಈ ಫಲಿತಾಂಶವನ್ನು ನಿರ್ಧರಿಸಲಾಯಿತು. ಅಷ್ಟು ರೋಚಕತೆಯಿಂದ ಕೂಡಿದ್ದ ಈ ಹಣಾಹಣಿಯಲ್ಲಿ ಆನ್ ಸಾನ್ ಗೆದ್ದು ಬೀಗಿದ್ದಾರೆ. ಈ ಗೆಲುವಿನ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಚಿನ್ನದ ಪದಕಕ್ಕೆ ಆನ್ ಸಾನ್ ಮುತ್ತಿಕ್ಕಿದ್ದಾರೆ.

ಆರ್ಚರ್ ಕ್ರೀಡೆಯಲ್ಲಿ ದಕ್ಷಿಣ ಕೊರಿಯಾ ಪ್ರಭುತ್ವ
ದಕ್ಷಿಣ ಕೊರಿಯಾ ಆರ್ಚರ್ ಕ್ರೀಡೆಯಲ್ಲಿ ಹಿಂದಿನಿಂದಲೂ ತನ್ನ ಪ್ರಭುತ್ವವನ್ನು ಮುಂದುವರಿಸಿಕೊಂಡು ಬಂದಿದೆ. ಇದೇ ಪ್ರದರ್ಶನವನ್ನು ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ದಕ್ಷಿಣ ಕೊರಿಯಾದ ಆರ್ಚರ್‌ಗಳು ನೀಡಿಕೊಂಡು ಬಂದಿದ್ದಾರೆ. ಇದಕ್ಕೂ ಮುನ್ನ ಇದೇ ಮಿಶ್ರ ಹಾಗೂ ಮಹಿಳಾ ವಿಭಾಗದಲ್ಲಿ ಕೂಡ ದಕ್ಷಿಣ ಕೊರಿಯಾ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಎರಡು ತಂಡದಲ್ಲಿ ಕೂಡ ಆನ್ ಸಾನ್ ದಕ್ಷಿಣ ಕೊರಿಯಾ ತಂಡದ ಭಾಗವಾಗಿದ್ದರು.

ಭಾರತದ ದೀಪಿಕಾಗೆ ಸೋಲುಣಿಸಿದ್ದ ಆನ್ ಸಾನ್
ಆನ್ ಸಾನ್ ಚಿನ್ನದ ಪದಕಕ್ಕೆ ಫಯನಲ್ ಪಂದ್ಯದಲ್ಲಿ ಗುರಿಯಿಡುವುದಕ್ಕೂ ಮುನ್ನ ಭಾರತದ ಪಾಲಿಗೂ ವಿಲನ್ ಆಗಿ ಪರಿಣಮಿಸಿದರು. ಭಾರತದ ಆರ್ಚರ್ ದೀಪಿಕಾ ಕುಮಾರಿಗೆ ಆನ್ ಸಾನ್ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ದೀಪಿಕಾ ಕುಮಾರಿ ವಿರುದ್ಧ ಆನ್ ಸಾನ್ 6-0 ಅಂತರದಿಂದ ಗೆಲುವು ಸಾಧಿಸಿ ಮುನ್ನುಗ್ಗಿದ್ದರು. ಈ ಮೂಲಕ ಭಾರತದ ಪರವಾಗಿ ಪದಕದ ನಿರೀಕ್ಷೆ ಮೂಡಿಸಿದ್ದ ದೀಪಿಕಾ ಕುಮಾರಿ ಹೋರಾಟವೂ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅಂತ್ಯವಾಯಿತು.

ಹೇರ್‌ಸ್ಟ್ರೈಲ್‌ನಿಂದ ಟೀಕೆಗೆ ಗುರಿಯಾದ ಆನ್ ಸಾನ್
ದಕ್ಷಿಣ ಕೊರಿಯಾದ ಆನ್ ಸಾನ್ ಮೂರು ಚಿನ್ನದ ಪದಕವನ್ನು ಗೆದ್ದು ಆರ್ಚರಿ ವಿಭಾಗದಲ್ಲಿ ಒಲಿಂಪಿಕ್ಸ್ ದಾಖಲೆ ಬರೆದ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಸಾಧನೆಗೂ ಮುನ್ನ ಆನ್ ಸಾನ್ ವಿಚಿತ್ರ ಕಾರಣಕ್ಕೆ ತಮ್ಮದೇ ದೇಶದಲ್ಲಿ ಟೀಕೆಗೆ ಗುರಿಯಾದರು. ಆನ್ ಸಾನ್ ಅವರ ಹೇರ್‌ಸ್ಟ್ರೈಲ್‌ನ ಕಾರಣದಿಂದಾಗಿ ದಕ್ಷಿಣ ಕೊರಿಯಾದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆನ್ ಸಾನ್ ಟೀಕೆಯನ್ನು ಮಾಡಿದ್ದರು. ಗಿಡ್ಡ ಕೂದಲಿನ ಕಾರಣದಿಂದಾಗಿ ದಕ್ಷಿಣ ಕೊರಿಯಾದ ಪುರುಷ ನೆಟಿಜನ್‌ಗಳು ಹೀಗೆ ಟೀಕಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆನ್ ಸಾನ್ ಆರ್ಚರಿ ಕ್ರೀಡೆಯಲ್ಲಿ ದಾಖಲೆಯನ್ನು ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications