ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ವೃತ್ತಿಪರತೆ ಮತ್ತು ತಮ್ಮ ಕೆಲಸದ ನೀತಿಯಿಂದಾಗಿ ವಿಶ್ವದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ಒಬ್ಬ ಬ್ಯಾಟರ್ ಆಗಿ ತಮ್ಮ ಸಾಮರ್ಥ್ಯದ ಹೊರತಾಗಿ, ವಿರಾಟ್ ಕೊಹ್ಲಿ ಭಾರತದಲ್ಲಿ ಫಿಟ್‌ನೆಸ್ ಟ್ರೆಂಡ್ ಹುಟ್ಟುಹಾಕಿದ್ದಾರೆ.
ವಿರಾಟ್ ಕೊಹ್ಲಿಯ ಫಿಟ್‌ನೆಸ್ ದೇಶದ ಪ್ರತಿಯೊಬ್ಬ ಉದಯೋನ್ಮುಖ ಕ್ರಿಕೆಟಿಗರು ಅನುಸರಿಸುತ್ತಾರೆ. ಅಲ್ಲದೆ, ಅವರ ಮೋಡಿ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಗಡಿಯಾಚೆಗೂ ವಿರಾಟ್ ಕೊಹ್ಲಿಯನ್ನು ಅನುಸರಿಸುವ ಸಾವಿರಾರು ಅಭಿಮಾನಿಗಳಿದ್ದಾರೆ. ಅದರಲ್ಲಿ ಕ್ರಿಕೆಟಿಗರೂ ಸೇರಿದ್ದಾರೆ.

ವಿರಾಟ್ ಕೊಹ್ಲಿಯನ್ನು ಹೆಚ್ಚಾಗಿ ಅನುಸರಿಸುವ ಪಾಕಿಸ್ತಾನದ ಬ್ಯಾಟರ್ ಅಹ್ಮದ್ ಶೆಹಜಾದ್. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. 34 ವರ್ಷದ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ತಂಡದ ಅದೃಷ್ಟವನ್ನು ಬದಲಾಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಅಹ್ಮದ್ ಶೆಹಜಾದ್ ಶ್ಲಾಘಿಸಿದ್ದಾರೆ.
ಭಾರತದ ಬ್ಯಾಟಿಂಗ್ ಮಾಂತ್ರಿಕ ಮತ್ತೆ ಮೇಲೇರುತ್ತಾನೆ ಎಂದು ಅಹ್ಮದ್ ಶೆಹಜಾದ್ ವಿಶ್ವಾಸ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿಯ ಅತ್ಯುತ್ತಮ ಆಟ ಇನ್ನೂ ಬರಬೇಕಿದೆ ಎಂದು ಹೇಳಿದ್ದಾರೆ.
"ನಾವು ಒಬ್ಬರಿಗೊಬ್ಬರು ಪರಸ್ಪರ ಗೌರವವನ್ನು ಹಂಚಿಕೊಳ್ಳುತ್ತೇವೆ. ನನಗೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಬೇಕಾದಾಗ, ನನಗೆ ಸಹಾಯ ಮಾಡಲು ಅವರು ದಯೆ ತೋರುತ್ತಿದ್ದರು, ನಾನು ಅವರನ್ನು ಆಟಗಾರನಾಗಿ ನಿಜವಾಗಿಯೂ ಗೌರವಿಸುತ್ತೇನೆ. ಅವರು ಅಂಡರ್-19 ವಿಶ್ವಕಪ್ ಆಡುವಾಗ ಸ್ವಲ್ಪ ದುಂಡುಮುಖದವರಾಗಿದ್ದರು. ಅತ್ಯುತ್ತಮ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ".

"ವಿರಾಟ್ ಕೊಹ್ಲಿ ಕ್ರಿಕೆಟ್‌ನ ಅಂಶದಿಂದ ಮಾತ್ರವಲ್ಲ, ತನ್ನನ್ನು ತಾನು ಬದಲಾಯಿಸಿಕೊಂಡ ರೀತಿ ಶ್ಲಾಘನೀಯವಾಗಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇಷ್ಟು ಬೇಗ ಹೊಂದಿಕೊಂಡವರನ್ನು ನಾನು ನೋಡಿಲ್ಲ," ಎಂದು ನಾದಿರ್ ಅಲಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅಹ್ಮದ್ ಶೆಹಜಾದ್ ಅಭಿಪ್ರಾಯಿಸಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡದ ಟೆಸ್ಟ್ ನಾಯಕರಾಗಿದ್ದ ಅವಧಿಯಲ್ಲಿ ತಮ್ಮ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮುನ್ನಡೆಸಿದರು ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದ ಶ್ರೇಯಸ್ಸು ಅವರಿಗಿದೆ ಎಂದರು.
ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಜೂನ್ 2021ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಅಲ್ಲಿ ಅವರು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ ಸೋತರು.
ವಿರಾಟ್ ಕೊಹ್ಲಿಗೆ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 40 ಪಂದ್ಯಗಳಲ್ಲಿ ಗೆಲುವು, 17 ಸೋಲುಗಳು ಮತ್ತು 11 ಪಂದ್ಯಗಳು ಡ್ರಾಗೊಂಡಿವೆ. ಶೇ.58.82ರಷ್ಟು ಗೆಲುವು ಕಂಡಿದ್ದಾರೆ. ಭಾರತದ ಈ ಬಲಗೈ ಆಟಗಾರನು ಮುಂದಿನ ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಇನ್ನು ಅಹ್ಮದ್ ಶೆಹಜಾದ್ ಅವರು ಕೊನೆಯದಾಗಿ 2019ರಲ್ಲಿ ಶ್ರೀಲಂಕಾ ವಿರುದ್ಧ ಲಾಹೋರ್‌ನಲ್ಲಿ ನಡೆದ ಟಿ20 ಪಂದ್ಯದ ವೇಳೆ ಪಾಕಿಸ್ತಾನ ತಂಡದ ಪರ ಆಡಿದ್ದರು. ಅಂದಿನಿಂದ ತಂಡದಿಂದ ಹೊರಗುಳಿದಿದ್ದಾರೆ. ಮತ್ತೆ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯುವುದು ಕಷ್ಟಕರವಾಗಿದ್ದರೂ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನದ ಬ್ಯಾಟರ್‌ಗೆ ಅವಕಾಶ ನೀಡಲಿದೆಯೇ ಕಾದು ನೋಡಬೇಕಿದೆ.